ಬೆಂಗಳೂರು,ನ.30-ನಗರದ ಪ್ರಮುಖ ವೃತ್ತಗಳು,ಜಂಕ್ಷನ್ ಗಳಲ್ಲಿ ವಾಹನ ಚಾಲಕರು ಹಾಗೂ ಸವಾರರು ವಾಹನಗಳನ್ನು ನಿಲ್ಲಿಸಲು ಹಾಕಲಾಗುತ್ತಿದ್ದ ಝೀಬ್ರಾ ಕ್ರಾಸಿಂಗ್ ಗೆ ಕೆಂಪು ಬಿಳಿ ಬಣ್ಣವನ್ನು ಪ್ರಾಯೋಗಿಕ ಬಳಸಲಾಗಿದೆ.
ನಗರದ ಹಡ್ಸನ್ ವೃತ್ತದ ಬಳಿ ಝೀಬ್ರಾ ಕ್ರಾಸಿಂಗ್ ಗೆ ಕೆಂಪು ಬಿಳಿ ಬಣ್ಣವನ್ನು ಪ್ರಾಯೋಗಿಕವಾಗಿ ಬಳಸಲಾಗಿದ್ದು ಅದರ ಪ್ರತಿಕ್ರಿಯೆಯನ್ನು ಗಮನಿಸಿ ನಗರದ ಪ್ರಮುಖ ವೃತ್ತಗಳು,ಜಂಕ್ಷನ್ ಗಳಲ್ಲಿ ಝೀಬ್ರಾ ಕ್ರಾಸಿಂಗ್ ಬಣ್ಣ ಬದಲಿಸಲಾಗುತ್ತದೆ.
ಝೀಬ್ರಾ ಕ್ರಾಸಿಂಗ್ ಬಣ್ಣ ಬದಲಿಸಲಿಸುವ ಸಂಬಂಧಿಸಿದಂತೆ ಬಿಬಿಎಂಪಿಗೆ ಸಂಚಾರ ಪೊಲೀಸರು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರಂತೆ ನಗರದ ಹಡ್ಸನ್ ವೃತ್ತದ ಬಳಿ ಝೀಬ್ರಾ ಕ್ರಾಸಿಂಗ್ ಗೆ ಕೆಂಪು ಬಿಳಿ ಬಣ್ಣ ಬಳಸಲಾಗಿದೆ.
ರಸ್ತೆ ಗುಂಡಿಗಳನ್ನು ಮುಚ್ಚಿ ನಗರದ ಬಹುತೇಕ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದ್ದು ಝೀಬ್ರಾ ಕ್ರಾಸಿಂಗ್ ಗೆ ಕೆಂಪು ಬಿಳಿ ಬಣ್ಣವನ್ನು ಬದಲಿಸುವುದರಿಂದ ವಾಹನಗಳನ್ನು ಸಿಗ್ನಲ್ ಬಿದ್ದ ಕೂಡಲೇ ನಿಲ್ಲಿಸಿ ಪಾದಚಾರಿಗಳು ಸುಗಮವಾಗಿ ರಸ್ತೆ ದಾಟಲು ಅನುಕೂಲವಾಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Previous Articleಟ್ರಾಫಿಕ್ ನೋಡಿಕೊಳ್ಳಲು ಸಲೀಂ ಬಂದ್ರು – ಇನ್ನು ಸರಿಯಾಗುತ್ತೆ ಬಿಡಿ
Next Article ಸಂಸದ-ಶಾಸಕರೇ ಹೀಗಾದರೆ ಪೊಲೀಸರೇನು ಮಾಡಬೇಕು?