ಇಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪುಣ್ಯಸ್ಮರಣೆ. ಇದರ ಅಂಗವಾಗಿ ಇಂದು ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿರುವ ಅವರ ಸಮಾಧಿ ಬಳಿ ಅವರ ಪುತ್ಥಳಿ ಅನಾವರಣವಾಗಿದೆ.
ವಿಜಯ್ ಸಮಾಧಿ ಸ್ಥಳದಲ್ಲಿಯೇ ಪುತ್ಥಳಿ ಇದೆ.ಕುಟುಂಬಸ್ಥರು, ಅಭಿಮಾನಿಗಳು, ಸ್ನೇಹಿತೆ ಸಮ್ಮುಖದಲ್ಲಿ ಪುತ್ಥಳಿ ಅನಾವರಣ ಸಮಾರಂಭ ನಡೆಯಿತು. ಕಳೆದ ವರ್ಷ ಸಂಚಾರಿ ವಿಜಯ್ ಅಪಘಾತದಲ್ಲಿ ಮೃತಪಟ್ಟಿದ್ದರು.