ಮೈಸೂರು,ಜ.8-
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ವ್ಯಾಪಕ ಚರ್ಚೆಯಲ್ಲಿರುವ ಹೆಸರು ಸ್ಯಾಂಟ್ರೋ ರವಿ..ಯಾಕೆಂದರೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ Santro Ravi ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸಿದ್ದಾರೆ.
ಸ್ಯಾಂಟ್ರೋ ರವಿ ಗೃಹ ಸಚಿವರೂ ಸೇರಿ ರಾಜ್ಯದ ಹಲವು ಪ್ರಭಾವಿಗಳ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾನೆ.ಕೆಲವರೊಂದಿಗೆ ನಿಕಟ ಸಂಪರ್ಕ ದಲ್ಲಿದ್ದು ಕಳೆದೊಂದು ವಾರದಿಂದ ನಾಪತ್ತೆ.
ಜನವರಿ 2ರಂದು ಸ್ಯಾಂಟ್ರೋ ರವಿ ವಿರುದ್ಧ ವಂಚನೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಜಾತಿನಿಂದನೆ ಆರೋಪದಡಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿಸಿಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಎನ್ಆರ್ ಉಪವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದ ತಂಡದಿಂದ ಶೋಧ ನಡೆಯುತ್ತಿದೆ. ಬೆಂಗಳೂರು, ಮೈಸೂರಿನಲ್ಲಿ ಸ್ಯಾಂಟ್ರೋ ರವಿಗಾಗಿ ವಿಶೇಷ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಈ ಸ್ಯಾಂಟ್ರೋ ರವಿ ಯಾರು..ಪೊಲೀಸರು ಅವನ ಹಿಂದೆ ಯಾಕೆ ಬಿದ್ದಿದ್ದಾರೆ.ರಾಜ್ಯದ ರಾಜಕಾರಣಿಗಳ ಬಾಯಲ್ಲಿ ಯಾಕೆ ಈತನ ಹೆಸರು ನಲಿದಾಡುತ್ತಿದೆ ಎಂಬುದೆಲ್ಲಾ ಹೇಳ್ತೀವಿ ಆದರೆ ಅದಕ್ಕಿಂತ ಮೊದಲು ನೀವು ನಮ್ಮ ಚಾನಲ್ ಅನ್ನು ಸಬ್ ಸ್ಕ್ರೈಬ್ ಮಾಡಿ, ಷೇರ್ ಮಾಡಿ.
ಈ ಸ್ಯಾಂಟ್ರೋ ರವಿ ತನ್ನ ಮೇಲೆ ಅತ್ಯಾಚಾರವೆಸೆಗಿ ಮದುವೆಯಾಗಿದ್ದ ಎಂದು ಹೇಳಿ ಸಂತ್ರಸ್ತ ಮಹಿಳೆ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ ಕಲಂ164 ರ ಅನ್ವಯ ಹೇಳಿಕೆ ದಾಖಲಿಸಿದ್ದಾರೆ.
ಅತ್ಯಾಚಾರ ಎಸೆಗಿ ಮದುವೆಯಾಗಿದ್ದ ಆನಂತರ ನಿರಂತರ ಲೈಂಗಿಂಕ ದೌರ್ಜನ್ಯ ವೆಸಗುತ್ತಿದ್ದು ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂದು ಆರೋಪಿಸಿದ್ದಾರೆ ಅಷ್ಟೇ ಅಲ್ಲದೆ ತನ್ನ ತಂಗಿಯ ಮೇಲೆ ದೈಹಿಕ ಹಲ್ಲೆ ಮಾಡಲಾಗಿದೆ. ವರದಕ್ಷಣೆ ಕಿರುಕುಳ ನೀಡಿದಲ್ಲದೆ ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಸ್ಯಾಂಟ್ರೋ ರವಿಯ ವಿಕೃತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದೊಂದು ವಿಕೃತನ ಅಪರಾಧ ಕೃತ್ಯ ಅಂದುಕೊಳ್ಳ ಬಹುದು.ಆದರೆ ಈ ವ್ಯಕ್ತಿ ಅತ್ಯಂತ ಪ್ರಭಾವಿ ಈತನ ವಹಿವಾಟು,ಒಡನಾಟ ಎಲ್ಲವೂ ಕದನ ಕೌತುಕ. ಮುಖ್ಯಮಂತ್ರಿಗಳ ಖಾಸಗಿ ನಂಬರ್ ನ ವಾಟ್ಸಾಪ್ ಗೆ ಈತನಿಂದ ಸಂದೇಶ ಹೋಗುತ್ತದೆ,ಪ್ರತಿಕ್ರಿಯೆ ಕೂಡಾ ಬಂದಿದೆ ಇಂತಹ ಹಲವು ಪ್ರಭಾವಿಗಳಿಗೆ ಈತ ಸಂದೇಶ ಕಳಿಸಿದ್ದಾನೆ.
ಈತನ ಬಳಿ ಸಚಿವರ ಲೆಟರ್ ಹೆಡ್ಗಳು ಪತ್ತೆಯಾಗಿವೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಮಾಸ್ಟರ್ ಆಗಿದ್ದ. ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಡಿವೈಎಸ್‌ಪಿಗಳನ್ನು ಪ್ರಮೋಷನ್ ಮಾಡಿಸ್ತಿದ್ದ. ಪ್ರಮೋಷನ್ ಮಾಡಿಸಿ ತನಗೆ ಬೇಕಾದ ಸ್ಟೇಷನ್‌ಗೆ ಹಾಕಿಕೊಳ್ಳುತ್ತಿದ್ದ ಈ ದಂಧೆಯಲ್ಲಿ ಸಚಿವರು, ಶಾಸಕರು ಭಾಗಿ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸ್ಯಾಂಟ್ರೊ ರವಿ ಇತಿಹಾಸ ಕೆದಕಿದರೆ, ದೊಡ್ಡ ಕಥೆಯೇ ತೆರೆದುಕೊಳ್ಳುತ್ತದೆ. ಮಂಡ್ಯದ ಮಂಜುನಾಥ್, ವೇಶ್ಯಾವಾಟಿಕೆ ದಂಧೆ ಮೂಲಕ ‘ಸ್ಯಾಂಟ್ರೊ ರವಿ’ ಆಗಿ ಬೆಳೆದು ರಾಜಕಾರಣಿಗಳ ಮೂಲಕ ವರ್ಗಾವಣೆ ದಂಧೆಯಲ್ಲಿ ಗುರುತಿಸಿಕೊಂಡು ಸುದ್ದಿಯಾಗಿದ್ದಾನೆ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಫೋಟೋ, ವಿಡಿಯೋ ಸಮರದ ನಾಯಕನಾಗಿದ್ದಾನೆ.
ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರೊಬ್ಬರ ಮಗನಾದ ಮಂಜುನಾಥ್, ಸಣ್ಣ ವಯಸ್ಸಿನಲ್ಲಿ ದಾರಿ ತಪ್ಪಿದ್ದ. ಅಪರಾಧ ಹಿನ್ನೆಲೆಯುಳ್ಳವರ ಜೊತೆ ಸೇರಿದ್ದ. ತಂದೆ ಅಕಾಲಿಕ ಮರಣವಾದ ನಂತರ, ಮಂಜುನಾಥ್ ಮತ್ತಷ್ಟು ದಾರಿ ತಪ್ಪಿದ್ದ.
ಹೆತ್ತ ತಾಯಿ ಹಾಗೂ ಸಹೋದರರಿಗೆ ಪ್ರತಿ ದಿನ ಕಿರುಕುಳ ನೀಡುತ್ತಾ ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ .2000 ಇಸವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ ರವಿ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ.
ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆದ.ಮಹಿಳೆಯರ ಜೊತೆಯಲ್ಲಿ ಹುಡುಗಿಯರನ್ನು ತನ್ನ ಗಾಳಕ್ಕೆ ಸಿಲುಕಿಸಿಕೊಂಡ. ಸಣ್ಣ–ಪುಟ್ಟ ಕೆಲಸ ಮಾಡುತ್ತಲೇ ತೆರೆಮರೆಯಲ್ಲಿ ವೇಶ್ಯಾವಾಟಿಕೆ ದಂಧೆಯ ವ್ಯಾಪ್ತಿ ಹೆಚ್ಚಿಸಿದ. ನಂತರ, ರಾಜಕಾರಣಿಗಳ ಪರಿಚಯವಾಯಿತು. ಅವರಿಗೂ ವೇಶ್ಯಾವಾಟಿಕೆ ಸೇವೆ ನೀಡಲಾರಂಭಿಸಿದ್ದ. ಅಂದಿನಿಂದಲೇ ಈತನಿಗೆ ರಾಜಕಾರಣಿಗಳು ಆಪ್ತರಾದರು. ಕೆಲ ರಾಜಕಾರಣಿಗಳು ಹೇಳಿದ ಕೂಡಲೇ, ಅವರ ವಿಳಾಸಕ್ಕೆ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದನೆಂಬ ಮಾಹಿತಿ ಪೊಲೀಸ್ ವಲಯದಲ್ಲಿದೆ.
ಉದ್ಯೋಗ, ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ. ಇಷ್ಟವಿಲ್ಲದಿದ್ದರೂ ಕೆಲವರು ಈತನ ಬೆದರಿಕೆಗೆ ಹೆದರಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಯಾರಾದರೂ ಈತನನ್ನು ಪ್ರಶ್ನಿಸಿದರೆ, ರಾಜಕಾರಣಿಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದ.
Congress–JDS ಮೈತ್ರಿ ಸರ್ಕಾರ ಪತನದ ವೇಳೆ ಹೆಚ್ಚು ಸಕ್ರಿಯನಾದ ಈತ BJP ಸರ್ಕಾರ ಬರುತ್ತಿದ್ದಂತೆ ಪ್ರಭಾವಶಾಲಿಯದ
ಮೈಸೂರಿನ ಗಲ್ಲಿಯಿಂದ ಬೆಂಗಳೂರಿಗೆ ಬಂದ ಈತ ಸರ್ಕಾರಿ ಅತಿಥಿ ಗೃಹ ಕುಮಾರ ಕೃಪಾ ಗೆಸ್ಟ್ ಹೌಸ್ ಅನ್ನೇ ಅಡ್ಡೆಯನ್ನಾಗಿ ಮಾಡಿಕೊಂಡ
ಗೆಸ್ಟ್ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಇದರಿಂದಾಗಿ ಆತನಿಗೆ ತನ್ನ ವ್ಯವಹಾರ ನಡೆಸುವುದಕ್ಕೆ ಸುಲಭ ಆಗಿತ್ತು. ಈತನ ದಂಧೆ ಬಗ್ಗೆ ಯಾರಿಗೂ ಅನುಮಾನವೇ ಬರುತ್ತಿರಲಿಲ್ಲ. ವರ್ಗಾವಣೆ ದಂಧೆಯನ್ನು ಕೂಡ ತುಂಬಾ ಚೆನ್ನಾಗಿ ನಡೆಸಬಹುದಾಗಿತ್ತು. ಅದಕ್ಕಾಗಿಯೇ ಕುಮಾರಕೃಪಾ ಗೆಸ್ಟ್ ಹೌಸ್ ಖಾಯಂ ಜಾಗವಾಗಿ ಹೋಗಿತ್ತು. ಇದರ ಪಕ್ಕದ ರಸ್ತೆಯಲ್ಲೇ ಬಾಡಿಗೆ ಮನೆ ಹಿಡಿದಿದ್ದ ಈತ ಸರ್ಕಾರದ ಅನೇಕ ಪ್ರಭಾವಶಾಲಿಗಳ ಆಪ್ತನಾಗಿದ್ದು ಈಗ ನಾಪತ್ತೆಯಾಗಿದ್ದು, ತನಿಖೆ ಆಳವಾದರೆ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬರಲಿವೆ.
Previous Articleಕನ್ನಡದ ಕಿಶೋರ್ ಕುಮಾರ್ ನಿಮಗೆಷ್ಟು ಗೊತ್ತು?
Next Article KGF-3 ಚಿತ್ರದ ಸುಳಿವು ಬಿಟ್ಟುಕೊಟ್ಟ ಚಿತ್ರತಂಡ