Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Santro Ravi ಬಳಿ ಇದೆ ಪ್ರಭಾವಿಗಳ ಜಾತಕ
    ಅಪರಾಧ

    Santro Ravi ಬಳಿ ಇದೆ ಪ್ರಭಾವಿಗಳ ಜಾತಕ

    vartha chakraBy vartha chakraJanuary 14, 2023Updated:January 14, 2023No Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.14- ಅನೇಕ ಪ್ರಭಾವಿಗಳ ಜಾತಕ ನನ್ನ ಕೈಯಲ್ಲಿದೆ ಹುಷಾರ್! ಏನ್ ಮಾಡಬೇಕು ಅಂತ ನನಗೆ ಚೆನ್ನಾಗಿ ಗೊತ್ತು. ಸರಿಯಾದ ಸಮಯಕ್ಕೆ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ನೋಡ್ತಾ ಇರಿ..ಇದು ತಮ್ಮನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸ್ಯಾಂಟ್ರೋ ರವಿ ಹೇಳಿದ ಮಾತು.
    ಗುಜರಾತಿನ ಅಹಮದಾಬಾದ್ ನಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಟ್ರೋ ರವಿ ಅಲಿಯಾಸ್  ಮಂಜುನಾಥ್‌ನನ್ನು ಮೈಸೂರಿಗೆ ಕರೆತಂದಿರುವ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.ಸ್ವತಃ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರೆ ವಿಚಾರಣೆ ನೇತೃತ್ವ ವಹಿಸಿದ್ದಾರೆ.
    ಅಲೋಕ್ ಅವರ ಮುಂದೆ ತನ್ನ ಸಂಪರ್ಕ, ಕೆಲವು ಹಿರಿಯ ಐಎಎಸ್‌ ಮತ್ತು ಐಪಿಎಸ್ ಅಧಿಕಾರಿಗಳ ಒಡನಾಟ, ಗೃಹ ಸಚಿವರ ಕಚೇರಿಯ ಸಿಬ್ಬಂದಿ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಸಿಬ್ಬಂದಿ ತನ್ನೊಂದಿಗೆ ಹೊಂದಿರುವ ನಂಟಿನ ಬಗ್ಗೆ ಕೆಲವು ಮಾಹಿತಿ ನೀಡಿದ್ದು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
    ಅಧಿಕಾರಸ್ಥ ರಾಜಕಾರಣಿಗಳ ಆಪ್ತರು, ಹಿರಿಯ ಅಧಿಕಾರಿಗಳು ಈತನ ಮೊಬೈಲ್ ಗೆ ಕಳುಹಿಸಿರುವ ಸಂದೇಶ,ಹಾಗೂ ‌ಕೆಲವು ದೃಶ್ಯಗಳನ್ನು ನೋಡಿದ ಅಲೋಕ್ ಕುಮಾರ್ ಬೆಚ್ಚಿಬಿದ್ದಿದ್ದಾರೆ,ಅವುಗಳ ವಿವರ ಕೇಳಿದಾಗ ಅನೇಕ ಪ್ರಭಾವಿಗಳ ಜಾತಕ ನನ್ನ ಕೈಯಲ್ಲಿದೆ ಸಮಯ ಬಂದಾಗ ಹೇಳುತ್ತೇನೆ ಎಂದು ತಕ್ಷಣಕ್ಕೆ ಯಾವುದೇ ಮಾಹಿತಿ‌ ನೀಡದೆ ನುಣುಚಿಕೊಳ್ಳುತ್ತಿದ್ದಾನೆನ್ನಲಾಗಿದೆ.
    ಪತ್ನಿಗೆ ವಂಚನೆ, ಅತ್ಯಾಚಾರ ಪ್ರಕರಣದ ಆರೋಪಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿಂಗ್ಪಿನ್ ಸ್ಯಾಂಟ್ರೋ ರವಿಯನ್ನ ಗುಜರಾತ್ನ ಅಹಮದಾಬಾದ್ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.
    ಸ್ಯಾಂಟ್ರೋ ರವಿ ಜೊತೆಗೆ ಬಂಧಿತ ರಾಮ್ ಜಿ (45), ಸತೀಶ್ ಕುಮಾರ್ (35) ಹಾಗೂ ಪ್ರಕರಣದ ಸಂಬಂಧಿಸಿದಂತೆ ರಾಜ್ಯದಲ್ಲಿ ಮಧುಸೂದನ್ ನನ್ನು ವಿಚಾರಣೆ ನಡೆಸಲಾಗಿದೆ.
    ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆ ದಂಧೆವರೆಗೆ ಪಳಗಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ ಎಂಬ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
    ಈತನ ಮೇಲೆ 1995ರಿಂದ ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ಮಂಡ್ಯ ಮೊದಲಾದ ಕಡೆ 22 ಪ್ರಕರಣಗಳು ದಾಖಲಾಗಿವೆ. 2005ರಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದಿದ್ದ. ಈತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.  ಜೈಲಿನಲ್ಲಿರುವಾಗಲೇ ಹಲವಾರು ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ, ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ. ಈ ಮಧ್ಯೆ, ಆತ ಸ್ಯಾಂಟ್ರೋ ಕಾರನ್ನೇ ತನ್ನ ದಂಧೆಗೆ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ, ಆತನಿಗೆ ಸ್ಯಾಂಟ್ರೋ ರವಿ ಎಂಬ ಹೆಸರು ಬಂತು.
    ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸಖ್ಯ ಬೆಳೆಸಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ. ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿಯೇ ತಿಂಗಳಾನುಗಟ್ಟಲೇ ಉಳಿದುಕೊಂಡು ದಂಧೆ ನಡೆಸಿಕೊಂಡಿದ್ದ. ಕೋಟ್ಯಂತರ ರು. ಸಂಪಾದಿಸಿ, ಆಸ್ತಿಪಾಸ್ತಿ ಮಾಡಿಕೊಂಡಿದ್ದ.
    ಮೂರು ತಿಂಗಳ ಹಿಂದೆ ರವಿ ‘ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು ಮನೆಗೆ ಬರುತ್ತಾರೆ. ಆತನೊಂದಿಗೆ ಮಲಗು. ನಮಗೆ ಒಳ್ಳೆಯ ದುಡ್ಡು ಸಿಗುತ್ತದೆ. ಜೊತೆಗೆ ನಮ್ಮ ಕೆಲಸಗಳು ಆಗುತ್ತವೆ’ ಎಂದು ಪತ್ನಿಯನ್ನು ಪುಸಲಾಯಿಸಲು ನೋಡಿದ್ದ. ಆಕೆ ತಿರಸ್ಕರಿಸಿದ್ದಳು. ಈ ಘಟನೆ ಬಳಿಕ, ಆಕೆ ಈತನಿಂದ ದೂರವಾದಳು. ಆ ಸಮಯದಲ್ಲಿ ಈತನ ಲ್ಯಾಪ್‌ಟಾಪ್‌ ಕಾಣೆಯಾಗಿದ್ದು, ಅದರಲ್ಲಿ ಆತನ ದಂಧೆಯ ವಿವರಗಳಿದ್ದವು. ಯುವತಿಯರಿಗೆ ಕಾರಿನ ನಂಬರ್‌ ನೀಡಿ, ಹೈಲೆವೆಲ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಅದು ಬಹಿರಂಗವಾದರೆ ಕಷ್ಟಎಂದು ಆಕೆಯ ವಿರುದ್ಧ ಬೆಂಗಳೂರಿನಲ್ಲಿ ಕೇಸು ಹಾಕಿಸಿ, ಆಕೆ ಹಾಗೂ ನಾದಿನಿಯನ್ನು ಜೈಲಿಗೆ ಹಾಕಿಸಿದ್ದ. ಆಕೆ ಜಾಮೀನಿನ ಮೇಲೆ ಈಚೆ ಬಂದ ನಂತರ, ಒಡನಾಡಿ ಸಂಸ್ಥೆಯ ಆಶ್ರಯಕ್ಕೆ ಬಂದು, ಆತನ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
    ಅಲ್ಲಿಂದೀಚೆಗೆ ಆತನ ಎಲ್ಲಾ ಹಗರಣಗಳು ಬಹಿರಂಗವಾದವು.  ಹೊರ ರಾಜ್ಯಗಳ ಪೊಲೀಸರಿಂದಲೂ ನೆರವು  ಸ್ಯಾಂಟ್ರೋ ರವಿಯನ್ನು ಬಂಧಿಸಲು ಮೈಸೂರು ನಗರ ಪೊಲೀಸರಿಗೆ ವಿವಿಧ ಜಿಲ್ಲೆಯ ಪೊಲೀಸರು, ಗುಜರಾತ್‌ ಸೇರಿದಂತೆ ಹೊರ ರಾಜ್ಯದ ಪೊಲೀಸರು ಸಹಕಾರ, ಸಾಥ್‌ ನೀಡಿದ್ದಾರೆ. ರಾಜ್ಯ ಪೊಲೀಸರು ಎಲ್ಲೆಡೆ ಸಾಂಘಿಕವಾಗಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ರಾಮನಗರ ಎಸ್ಪಿ ಡಾ. ಸಂತೋಷ್‌ ಬಾಬು, ಮಂಡ್ಯ ಎಸ್ಪಿ ಎನ್‌. ಯತೀಶ್‌, ರಾಯಚೂರು ಎಸ್ಪಿ ಬಿ. ನಿಖಿಲ್‌ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿತ್ತು. 
    ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಚಿವರೊಂದಿಗೆ ಸ್ಯಾಂಟ್ರೋ ರವಿ ಇರುವ ವಿಡಿಯೋ ಕ್ಲಿಪಿಂಗ್‌ ಬಿಡುಗಡೆ ಮಾಡಿದ ನಂತರ ಪ್ರಕರಣಕ್ಕೆ ಮತ್ತಷ್ಟುತಿರುವು ಸಿಕ್ಕಿತು. ಆತ ಹಳೆಯ ಪ್ರಕರಣದ ತಪ್ಪೊಪ್ಪಿಗೆಯಲ್ಲಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದು ಬಹಿರಂಗವಾಯಿತು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಯಿತು.
    ಬಳಿಕ, ತನ್ನ ಬಂಧನ ಖಚಿತ ಎಂಬುದು ಗೊತ್ತಾದ ಕೂಡಲೇ ಆತ ತಲೆ ಮರೆಸಿಕೊಂಡ. ಈ ಮಧ್ಯೆ, ಮೈಸೂರಿನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ. ಇದರ ವಿಚಾರಣೆ ಜ.17ಕ್ಕೆ ನಿಗದಿಯಾಗಿದೆ.

    ನ್ಯಾಯ ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleಹೈ ಪ್ರೊಫೈಲ್ ಗಾಂಜಾ ದಂಧೆ
    Next Article ಬೆಂಗಳೂರು VV campus​ನಲ್ಲಿ ಚಿರತೆಯಲ್ಲ ಕಾಡುಬೆಕ್ಕು
    vartha chakra
    • Website

    Related Posts

    FIR ದಾಖಲಿಸಲು ಇದು ಕಡ್ಡಾಯ !

    July 26, 2025

    RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್

    July 17, 2025

    ಕಾಂಗ್ರೆಸ್ ಬೆಂಗಳೂರು ನಿರ್ಣಯ ಅಂಗೀಕಾರ

    July 16, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts on ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ
    • prognoz na segodnya na sport_deml on ಚಿನ್ನದಂಗಡಿಗಳಿಗೆ IT shock!
    • Patricktup on ಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರಿಡಬೇಕಂತ
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe