ಬೆಂಗಳೂರು, ಅ.25- ಹುಲಿ ಉಗುರಿನ ಲಾಕೆಟ್ ಧರಿಸಿದವರ ವಿರುದ್ಧ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಡಿಸಿಎಫ್ಓ ರವೀಂದ್ರ ಅವರು ತಿಳಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ನಮಗೆ ಯಾವ ದೂರು ಬಂದಿಲ್ಲ ಎಂದು ಹೇಳಿದರು.
ಯಾರೇ ಆಗಲಿ ಹುಲಿ ಉಗುರು ಲಾಕೆಟ್ ಧರಿಸಿದ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿಯೇ ಹೇಳಿದ್ದಾರೆ. ಇದರಿಂದ ಹುಲಿ ಉಗುರಿನ ಪೆಂಡೆಟ್ ಧರಿಸಿದವರಿಗೆ ಢವ ಢವ ಶುರುವಾಗಿದೆ.
ಅಂತಹ ಪ್ರಕರಣ ನಮ್ಮಲ್ಲಿ ದಾಖಲಾದರೆ, ಎನು ಬೇಕೋ ಅದನ್ನ ಕ್ರಮ ತೆಗೆದುಕೊಳ್ಳಲು ಅಧಿಕಾರ ಇದೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಲಾಗಲಿದೆ, ಬಳಿಕ ಹುಲಿ ಉಗುರಿನ ನೈಜತೆ ಬಗ್ಗೆ ಕನ್ಫರ್ಮ್ ಮಾಡಿಕೊಳ್ಳಬೇಕಿದೆ. ಹಸುವಿನ ಕೊಂಬನ್ನ ಹುಲಿ ಉಗುರು ಎಂದು ಮಾರಾಟ ಮಾಡಲಾಗುತ್ತೆ. ಅದಕ್ಕೆ ಅದರ ನೈಜತೆ ಬಗ್ಗೆ ಪರೀಶಿಲನೆ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿರುವ ಅವರು, ಸಂತೋಷ್ ಅವರನ್ನು ಏಕಾಎಕಿ ದಸ್ತಗಿರಿ ಮಾಡಲಿಲ್ಲ. ಲಾಕೆಟ್ನ ತಪಾಸಣೆ ಮಾಡಿ ಅರ್ಧ ಮುಕ್ಕಾಲು ಗಂಟೆ ಅದರ ನೈಜತೆ ಗೊತ್ತಾದಮೇಲೆಯೇ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇನ್ನು ನಟ ದರ್ಶನ ಹಾಗೂ ಜಗ್ಗೇಶ್ ಅವರ ಹುಲಿ ಉಗುರಿನ ಲಾಕೆಟ್ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ,ನೋಟಿಸ್ ನೀಡಲು ನನಗೆ ಅವಕಾಶ ಇದೆ. ದೂರು ಬಂದ್ರೆ ನೋಟಿಸ್ ಜಾರಿ ಮಾಡಿ ಅವರನ್ನು ವಿಚಾರಣೆ ಒಳಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಂರಕ್ಷಣಾ ಕಾಯ್ದೆ:
ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು.ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10 ಸಾವಿರ ದಂಡ ವಿಧಿಸುವ ಸಾಧ್ಯತೆ ಇದೆ.
ವರ್ತೂರ್ ಸಂತೋಷ್ ಬಂಧನದ ಬಳಿಕ ಹುಲಿ ಉಗುರು ಲಾಕೆಟ್ ಪ್ರಕರಣಗಳು ಒಂದೇ ಒಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಅದರಲ್ಲೂ ಗಣ್ಯ ವ್ಯಕ್ತಿಗಳು ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ಇವರ ಬಂಧನ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.


8 Comments
betmgm New Hampshire betmgm-play betmgm ND
Feel the energy of live streams and interactive sessions. In crowns coins casino, community events foster fun competitions. Register for your share of the prizes!
Thunder to the top of the leaderboards. buffalo aristocrat unleashes scatters, wild herds, and progressive thunder. Spin today!
Get your free Gold Coins + Sweeps Coins bonus at chumba casino promo right now. Play premium slots from top providers without spending a dime. Real wins are just a spin away — start playing today!
Play today, brag tomorrow. stake hilo makes winning look easy.
DraftKings high RTP slots Casino lights up your screen. New welcome pack: 500 spins for $5 + up to $1K lossback. From slots to live—dominate!
Leky za ferovou cenu – zadne skryte poplatky, zadne triky
Levitra bez predpisu
Connect the millions friendly momentous on fanduel casino app – the #1 natural pelf casino app in America.
Get your $1000 WITH IT AGAIN bonus and modify every twirl, хэнд and rolling into legitimate coin of the realm rewards.
Fast payouts, huge jackpots, and non-stop fight – download FanDuel Casino any longer and start playing like a pro today!