ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕ (Sensex) ಇಂದು 73000 ಅಂಕಗಳ ಗಡಿಯನ್ನು ದಾಟಿ ಹೊಸ ದಾಖಲೆ ಸೃಷ್ಟಿಸಿರುವುದು ವಿತ್ತೀಯ ಮತ್ತು ಔದ್ಯಮಿಕ ವಲಯಗಳಲ್ಲಿ ಸಂತಸ ಮೂಡಿಸಿದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ ತಂತ್ರಜ್ಞಾನ ಕ್ಷೇತ್ರದ ಸ್ಟಾಕ್ ಗಳು ಅತ್ಯಂತ ಒಳ್ಳೆಯ ಲಾಭವನ್ನು ತಂದು ಕೊಟ್ಟಿರುವುದ್ದಾಗಿದೆ.
ಅದರಲ್ಲೂ ಪ್ರಮುಖವಾಗಿ ವಿಪ್ರೋ ಕಂಪನಿ ಯ ವಿತ್ತೀಯ ಫಲಿತಾಂಶ ಹೂಡಿಕೆದಾರರಲ್ಲಿ ಆಶಾ ಭಾವನೆಯನ್ನು ಮೂಡಿಸಿರುವುದೂ ಮಾರುಕಟ್ಟೆಯಲ್ಲಿ ಹುರುಪು ತಂದಿದೆ. ವಿಪ್ರೊದೊಂದಿಗೆ HCL Tech, ಇನ್ಫೋಸಿಸ್ ಮತ್ತು Tech ಮಹಿಂದ್ರಾ ಕೂಡ ಉತ್ತಮ ಭರವಸೆಯನ್ನು ನೀಡಿವೆ. ಈ ತಂತ್ರಜ್ಞಾನ ಸ್ಟಾಕ್ ಗಳೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೂಡ ಉತ್ತಮ ಆರ್ಥಿಕ ಪ್ರದರ್ಶನ ನೀಡಿರುವುದು ಹೂಡಿಕೆದಾರರು ಹೆಚ್ಚು ಹೂಡುವಂತೆ ಮಾಡಿ ಸೂಚ್ಯಂಕ ಗಗನ ಮುಟ್ಟುವುದಕ್ಕೆ ಕಾರಣವಾಗಿದೆ.