ಶಿಮ್ಲಾ(ಹಿಮಾಚಲ ಪ್ರದೇಶ),ಜು.25- ವೇಗವಾಗಿ ಹೋಗುತ್ತಿದ್ದ ಕಾರೊಂದು ಕಣಿವೆಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಕಾರಿನಲ್ಲಿ ಹೋಗಿದ್ದವರಲ್ಲಿ ಐವರು ಅಪಘಾತದಿಂದ ಶವವಾಗಿದ್ದರೆ,ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಂಬಾದ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ.
ಗುರುದಾಸ್ಪುರದ ರಾಕೇಶ್ ಕುಮಾರ್, ಅಮರ್ ಜೀತ್ ಸಿಂಗ್, ಮನೋಹರ್, ರಾಜೀವ್ ಶರ್ಮಾ ಮತ್ತು ಚಂಬಾ ಮೂಲದ ಹೇಮ್ ಸಿಂಗ್ ಮೃತಪಟ್ಟವರು.
ನತದೃಷ್ಟ ಐವರು ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಿ ವಾಪಸ್ ಬರುವಾಗ ಚಂಬಾ ಜಿಲ್ಲೆಯ ತಿಸ್ಸಾ ತಹಸಿಲ್‌ನ ಸತ್ರುಂಡಿ ಬಳಿ ಕಾರು ಕಣಿವೆಗೆ ಬಿದ್ದು ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸರು ಧಾವಿಸಿ ಪರಿಹಾರ ಕಾರ್ಯ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.