Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿದ್ದರಾಮಯ್ಯ ಪೂರ್ಣ ಅವಧಿಗೆ ಮುಖ್ಯಮಂತ್ರಿ | Siddaramaiah
    ರಾಜಕೀಯ

    ಸಿದ್ದರಾಮಯ್ಯ ಪೂರ್ಣ ಅವಧಿಗೆ ಮುಖ್ಯಮಂತ್ರಿ | Siddaramaiah

    vartha chakraBy vartha chakraSeptember 16, 202329 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಸೆ.16- ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಅವಧಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ವಿಷಯವಾಗಿ ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್ ತಾಕೀತು ಮಾಡಿದ್ದರೂ ಇದನ್ನು ರಾಜ್ಯ ಕಾಂಗ್ರೆಸ್ ನಾಯಕರು ಪರಿಗಣನೆಗೆ ತೆಗೆದುಕೊಂಡಿಲ್ಲ.
    ಈ ವಿಷಯವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,ಸಿದ್ದರಾಮಯ್ಯ (Siddaramaiah) ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಹೈಕಮಾಂಡ್ ಹಂತದಲ್ಲಿ 50-50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಿದೆ ಎಂದು ಯಾರೂ ಹೇಳಿಲ್ಲ. ದೆಹಲಿಯಲ್ಲಿ ನಡೆದ ಸಭೆಗಳಲ್ಲಿ ನಡೆದ ಚರ್ಚೆಯ ಮಾಹಿತಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೆ ಮಾತ್ರ ಗೊತ್ತು. ಈವರೆಗೂ ಅವರು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ ಎಂದರು.
    ಸಿದ್ದರಾಮಯ್ಯನವರು (Siddaramaiah) ಪೂರ್ಣಾವಧಿಯ ಮುಖ್ಯಮಂತ್ರಿಯಾಗಿರಬೇಕು ಎಂಬುದು ನನ್ನೊಬ್ಬನದೇ ಅಲ್ಲ, ಕಾಂಗ್ರೆಸ್‌ನ ಬಹುತೇಕರ ಅಭಿಪ್ರಾಯ ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದ ಅವರು ಮುಖ್ಯಮಂತ್ರಿ ಹುದ್ದೆಗೆ ಅವಧಿ ನಿಗದಿಯಾಗಿದೆ ಎಂಬುದು ಈವರೆಗೂ ಯಾರೂ ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದರು.

    ಡಿ.ಕೆ.ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಅವರ ಬಗ್ಗೆ ನಾನೂ ಕೂಡ ಹಲವು ಬಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದೇನೆ. ಕಾಂಗ್ರೆಸ್ ಪಕ್ಷ ಮತ್ತಷ್ಟು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂಬ ತಮ್ಮ ಹೇಳಿಕೆ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರ ವಿರುದ್ಧವೂ ಅಲ್ಲ. ಅವರು ಬೇಸರಗೊಳ್ಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು ನಾನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ ಬಹಳಷ್ಟು ಮಂದಿ ಈ ವಿಷಯವಾಗಿ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲರ ಜೊತೆಗೂ ಸೇರಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೈಕಮಾಂಡ್ ನ ಗಮನ ಸೆಳೆಯುವುದಾಗಿ ತಿಳಿಸಿದರು.
    ಲೋಕಸಭೆಯ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ತಯಾರಿಗಳನ್ನು ನಡೆಸಿದೆ. ರಾಜಕಾರಣ ನಿರಂತರವಾಗಿ ಚಲನಶೀಲತೆ ಹೊಂದಿದೆ. ಇಲ್ಲಿ ಮೈತ್ರಿ ನಡೆಯುವುದು ಸಾಮಾನ್ಯ. ಬೇರೆಯಾಗುವುದೂ ಕೂಡ ಹೊಸದಲ್ಲ ಎಂದು ಹೇಳಿದರು.

    ಜೆಡಿಎಸ್, ಬಿಜೆಪಿ ಮೈತ್ರಿಯ ಬಗ್ಗೆ ಅವರ ಪಕ್ಷಗಳಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಲ್ಲಿ ನಾವು ಪ್ರತಿಕ್ರಿಯಿಸುವುದು ಅನಗತ್ಯ. ಈವರೆಗಿನ ಮಾಹಿತಿ ಪ್ರಕಾರ, ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪನವರು ಮೈತ್ರಿ ಇನ್ನೂ ಪೂರ್ತಿಗೊಂಡಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಕೆಲವರು ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಾರೆ, ಇನ್ನೂ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ಏನೂ ಮಾಡಲಾಗುವುದಿಲ್ಲ ಎಂದರು.
    ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಆದ್ಯತೆ. ಅದಕ್ಕಾಗಿ ಎಲ್ಲರ ಜೊತೆಗೂ ಚರ್ಚೆಗಳು ನಡೆಯುತ್ತಿವೆ. ಅದನ್ನು ಆಧರಿಸಿ ಪಕ್ಷದ ವರಿಷ್ಠರಿಗೆ ಸಲಹೆ ನೀಡುತ್ತೇವೆ ಎಂದರು.

    ಬಿಜೆಪಿಯ ಸಂಸದರು ಕಾಂಗ್ರೆಸ್ ಸೇರುತ್ತಾರೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಅವರು ಚುನಾವಣೆ ರಾಜಕೀಯದಿಂದ ನಿವೃತ್ತರಾಗುತ್ತೇವೆ ಎಂಬುದನ್ನು ಕೇಳಿದ್ದೇನೆ. ಹೈಕಮಾಂಡ್ ಕೆಲವು ನಿರ್ಧಾರಗಳನ್ನು ಕೈಗೊಂಡಾಗ ಕೆಳಹಂತದಲ್ಲಿ ವ್ಯತ್ಯಾಸಗಳಾಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅಭಿಪ್ರಾಯಗಳು ಭಿನ್ನವಾಗಿರುವುದು ಹೊಸದಲ್ಲ ಎಂದು ಹೇಳಿದರು.
    ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದು ಖಚಿತವಾಗಿದೆ. ನಮ್ಮ ಪಕ್ಷದ ಶಾಸಕ ಭೀಮಣ್ಣ ಅವರು ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರುವುದು ಖಚಿತ ಎಂದಿದ್ದಾರೆ. ಈ ರೀತಿಯ ಬೆಳವಣಿಗೆಗಳು ಸಾಮಾನ್ಯ ಎಂದರು. ಬಿಜೆಪಿಯ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ಗೆ ಬರುತ್ತಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಗಾಳಿಮಾತಷ್ಟೆ. ಅಂತಹ ಯಾವ ಚರ್ಚೆಗಳೂ ನಡೆದಿಲ್ಲ ಎಂದು ತಿಳಿಸಿದರು.

    Bangalore m News Politics siddaramaiah Trending ಕಾಂಗ್ರೆಸ್ Election ತುಮಕೂರು ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬರ ಪರಿಹಾರಕ್ಕೆ ಕೇಂದ್ರದ ಅಡ್ಡಿ | Drought
    Next Article ವಿದ್ಯುತ್ ಕೊರತೆ ನಿವಾರಣೆಗೆ ಪರ್ಯಾಯ ಮೂಲ ಅನಿವಾರ್ಯ
    vartha chakra
    • Website

    Related Posts

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    January 7, 2026

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    January 7, 2026

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    January 6, 2026

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • stailer dyson_onSt on ಸಿದ್ದರಾಮಯ್ಯ ಮುಖ್ಯಮಂತ್ರಿ ಅಲ್ಲ, ನೀರೋ | Nero
    • fen daison kypit_brst on C.T.ರವಿಗೆ‌ ಬಂದ ಪತ್ರದಲ್ಲೇನಿದೆ ಗೊತ್ತಾ
    • fen daison kypit_cyOa on ಬುಕ್ ಮೈ ಸಿ.ಎಂ | Book My CM
    Latest Kannada News

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    January 7, 2026

    ಭಾರತೀಯ ಸೇನೆಯ ‘ಭೈರವ’ ಗೊತ್ತಾ..?

    January 7, 2026

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    January 6, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.