ಬೆಂಗಳೂರು,ಫೆ.20-
IPS ಅಧಿಕಾರಿ ಡಿ.ರೂಪಾ (D Roopa) ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿ.ರೂಪಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅದರಲ್ಲೂ ನಗ್ನ ಚಿತ್ರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸಿಂಧೂರಿ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, 3 ನೇ ಬಾರಿ ರಿಮೈಂಡರ್ ಬಂದಿದ್ದರೂ ಅವರು ಏಕೆ ಉತ್ತರ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಾನೂನು ಹೋರಾಟ ಎಲ್ಲರೂ ಮಾಡ್ತಾರೆ, ಮಾಧ್ಯಮದವರ ಸವಾಲು ಎದುರಿಸಲು ಧೈರ್ಯವಿಲ್ಲ. ಅವರ ಪತಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದರೆ ಏನರ್ಥ ಎಂದಿದ್ದಾರೆ.
ಸಿಂಧೂರಿ ಅವರ ಫೋನ್ ಹ್ಯಾಕ್ ಮಾಡಲಾಗಿದೆ ಎಂದು ಅವರ ಪತಿ ಹೇಳಿದ್ದಾರೆ. ಅದು ನಂಬುವ ಮಾತೇ, ಅವರ ಪತ್ನಿ ಮಾನ ಹರಾಜಾಗಿದೆ ಎಂದು ಹೇಳಿದ್ದಾರೆ. ಆದರೆ ಖಾಸಗಿ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವ ಅಗತ್ಯವೇನಿತ್ತು. ಈ ರೀತಿಯ ಫೋಟೋಗಳು ಯಾರ್ಯಾರಿಗೆ, ಏಕೆ ಕಳುಹಿಸುತ್ತಾರೆಂದು ಅವರೇ ಹೇಳಿಕೆ ನೀಡಲಿ. ಅದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
IAS ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಾಟ್ಸ್ ಆಪ್ ನಂಬರ್‌ನಿಂದ ಕಳುಹಿಸಿದ ನಗ್ನ ಫೋಟೋಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಮಾತನಾಡುತ್ತಾರಾ ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಅವರ ವಾಟ್ಸ್ ಆಪ್ ಚಾಟಿಂಗ್ ಸ್ಕ್ರೀನ್ ಶಾಟ್ ಫೋಟೊಗಳನ್ನು ಐಜಿಪಿ ಡಿ. ರೂಪಾ ಅವರು ಹಂಚಿಕೊಂಡು ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳ ಮುಂದೆ ಗೆಟ್ ವೆಲ್ ಸೂನ್ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ‘Get well soon’ ಎಂದು ನನಗೆ ಹೇಳಿದ್ದಾರಲ್ಲಾ ಸಿಂಧೂರಿ, ಅವರ ಡಿಲೀಟ್ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತನಾಡುತ್ತಾರೆಯೇ? ನಂಬರ್ ಅವರದೇ ಅಲ್ಲವಾ. IAS ಅಧಿಕಾರಿ ನಗ್ನ ಚಿತ್ರ, ನ್ಯೂಡ್, ನೆಕೆಡ್ ಪಿಕ್ ಕಳಿಸಬಹುದ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ? ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ವಿಚಾರಣೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.