ಬೆಂಗಳೂರು,ಫೆ.3-
Software Company ಯಲ್ಲಿ ಕೆಲಸ ಕೊಡಿಸುವುದಾಗಿ ಹೊರರಾಜ್ಯದವರನ್ನು ನಗರಕ್ಕೆ ಕರೆಸಿಕೊಂಡು ಹೆದರಿಸಿ ಹಣ ಪಡೆದು ವಂಚಿಸುತ್ತಿದ್ದ ಆಂಧ್ರದ ಗ್ಯಾಂಗ್ನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ ನಲ್ಲಿದ್ದ ಆಂದ್ರಪ್ರದೇಶದ ವಿಜಯವಾಡ ಕೃಷ್ಣಜಿಲ್ಲೆಯ ಮಲ್ಲು ಶಿವಶಂಕರ್ ರೆಡ್ಡಿ ಅಲಿಯಾಸ್ ಗೋಪಿಚಂದ್ (26), ಗುಂಜ ಮಂಗರಾವ್(35), ಇಬ್ರಾಹಿಂ ಪಟ್ಟಣಂನ ಶೇಖ್ ಶಹಬಾಷಿ(30), ಎನ್ ಟಿ ಆರ್ ಜಿಲ್ಲೆಯ ಮಹೇಶ್( 21) ಬಂಧಿತ ಆರೋಪಿಗಳಾಗಿದ್ದಾರೆ.
‘ಆರೋಪಿಗಳು ಹಣ ವರ್ಗಾವಣೆ ಮಾಡಿಕೊಳ್ಳಲು ಬಳಸಿಕೊಂಡಿದ್ದ ಹಲವು ಬ್ಯಾಂಕ್ ಖಾತೆಗಳಲ್ಲಿನ 5,95,585 ರೂ ಹಣವನ್ನು ಫ್ರೀಜ್ ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ. ಬಂಧಿತರ ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡುತ್ತಿತ್ತು. ಇದನ್ನು ನಂಬಿದ್ದ ಆಂಧ್ರಪ್ರದೇಶದ ಪ್ರದೀಪ್ ಅಸಾಮ್ವರ್ಗೆ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದನು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಆಂಧ್ರದಿಂದ ಬೆಂಗಳೂರಿಗೆ ಬರುವಂತೆ ಹೇಳಿದ್ದನು.
ಅದರಂತೆ ಪ್ರದೀಪ್ ಅಸಾಮ್ವರ್ ಕಳೆದ ಜ. 11 ರಂದು ಬೆಳಗ್ಗೆ 5.30 ಕ್ಕೆ ಹೆಬ್ಬಾಳ ಬಳಿ ಬಂದು ಇಳಿದಿದ್ದನು. ಅಲ್ಲಿಂದ ಪ್ರದೀಪ್ ಅಸಾಮ್ವರ್ನನ್ನು ಸ್ವಿಫ್ಟ್ ಕಾರಿನಲ್ಲಿ ಬಂದು ನಾಲ್ವರು ಕರೆದುಕೊಂಡು ಹೊರಟಿದ್ದು, ಈ ವೇಳೆ ಪ್ರದೀಪ್ ಅಸಾಮ್ವರ್ ಕಾರಿನ ಫೋಟೊ ತೆಗೆದುಕೊಂಡಿದ್ದನು. ಪ್ರದೀಪ್ನನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದ ಗ್ಯಾಂಗ್ ಮ್ಯಾನೇಜರ್ ಭೇಟಿ ಮಾಡಿಸುತ್ತೇವೆ ಎಂದಿದ್ದರು.
ಕಾರಿನಲ್ಲಿ ಹೋಗುವಾಗ ಪ್ರದೀಪ್, ಶಿವಶಂಕರ್ ರೆಡ್ಡಿ ಜೊತೆಗೆ ಬಂದಿದ್ದವರ ಹೆಸರು ಕೇಳಿದ್ದಾನೆ. ಆಗ ಆರೋಪಿ ಶಿವಶಂಕರ್ ರೆಡ್ಡಿ ಹೆಸರು ಹೇಳದಿದ್ದಾಗ ಆತನಿಗೆ ಅನುಮಾನ ಬಂದಿದೆ. ಬಳಿಕ ಗ್ಯಾಂಗ್ ಡಾಕ್ಯುಮೆಂಟ್ ಚಾರ್ಜ್ ಎಂದು 30 ಸಾವಿರ ಹಣ ಹಾಕಲು ಪ್ರದೀಪ್ಗೆ ಹೇಳಿದೆ. ಗೂಗಲ್ ಪೇ ವರ್ಕ್ ಆಗದಿದ್ದಾಗ ಮೊಬೈಲ್ ಕಸಿದು ಪರಿಶೀಲನೆ ಮಾಡಿದ್ದಾರೆ. ಆಗ ಕಾರಿನ ಫೋಟೊ ಲೈವ್ ಲೊಕೇಶನ್ ನೋಡಿ ಪ್ರದೀಪ್ಗೆ ಥಳಿಸಿದ್ದಾರೆ. ನಂತರ ‘ನಿನಗೆ ಕೆಲಸ ಸಿಕ್ಕಿದೆ ಎಂದು ಸ್ನೇಹಿತರ ಬಳಿ ಹಣ ಹಾಕಿಸಿಕೊ’ ಎಂದು ಪ್ರದೀಪ್ಗೆ ಬೆದರಿಸಿದ್ದಾರೆ. ಹೀಗೆ ಆರೋಪಿಗಳು ಒಟ್ಟು 6 ಲಕ್ಷ ಹಣವನ್ನು ಅಕೌಂಟ್ ಮೂಲಕ ಪಾವತಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ನಲ್ಲೂ ಹಣ ಹಾಕಿಸಿಕೊಂಡಿದ್ದಾರೆ. ನಂತರ ಯಲಹಂಕ ಸಮೀಪದ ಡೆಕಾತ್ಲ್ಯಾನ್ (Decathlon) ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಬಳಿಕ ಪ್ರದೀಪ್ ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಟೆಕ್ಕಿಯಾಗಿದ್ದ ಮಲ್ಲು:
ಕೊಡಿಗೆಹಳ್ಳಿ ಪೊಲೀಸರ ವಿಚಾರಣೆ ವೇಳೆ ಭಯಾನಕ ವಿಚಾರ ಹೊರಬಂದಿದ್ದು ಆರೋಪಿ ಮಲ್ಲು ಅಲಿಯಾಸ್ ಗೋಪಿಚಂದ್ ಕೂಡ ಟೆಕ್ಕಿಯಾಗಿದ್ದಾನೆ. ಮಾನ್ಯತಾ ಟೆಕ್ ಪಾರ್ಕ್ (Manyata Tech Park) ನಲ್ಲಿ ನಕಲಿ ದಾಖಲಾತಿ ನೀಡಿ ಕೆಲಸಕ್ಕೆ ಸೇರಿಕೊಂಡಿದ್ದನು. ವಿಷಯ ಗೊತ್ತಾದ ಬಳಿಕ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆಗಿನಿಂದ ಕೆಲಸ ಇಲ್ಲದೆ ಫೇಸ್ಬುಕ್ ನಲ್ಲಿ ಶಿವಶಂಕರ್ ಎನ್ನುವ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದನು. ನಂತರ ನಮ್ಮಲ್ಲಿ ಕನ್ಸಲ್ಟೆನ್ಸಿ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಲಾಗಿತ್ತು.
ಆಸಕ್ತಿ ಇರುವವರು ಸಂಪರ್ಕಿಸಿದಾಗ ಬಲೆ ಹಾಕುತ್ತಿದ್ದನು. ಆರೋಪಿ ಕೇವಲ ಮೆಸೆಂಜರ್ನಲ್ಲಿ ಮಾತ್ರ ಸಂಪರ್ಕ ಮಾಡುತ್ತಿದ್ದನು. ಕೆಲಸ ಕೊಡಿಸಲು 4-5 ಲಕ್ಷಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ಹಣ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಅಕೌಂಟ್ ಬ್ಯಾಲೆನ್ಸ್ ಸ್ಕ್ರೀನ್ ಶಾಟ್ ಕಳುಹಿಸಿಕೊಳ್ಳುತ್ತಿದ್ದನು ಎಂದು ಗ್ಯಾಂಗ್ ಬಂಧಿಸಿದ ಕೊಡಿಗೆಹಳ್ಳಿ ಇನ್ಸ್‌ಪೆಕ್ಟರ್ ಎನ್.ರಾಜಣ್ಣ ತಿಳಿಸಿದ್ದಾರೆ.


1 Comment
Sinta-se imparável no Betano https://betanogame.org/pt/. Novos usuários ganham €500 de bônus de boas-vindas e rodadas grátis instantaneamente. Aposte em esportes, gire rolos ou participe de roleta ao vivo – a vitória está mais perto do que nunca.