ಬೆಂಗಳೂರು,ಮೇ.25- ಸುಂಕದಕಟ್ಟೆಯ ಶಾಂತಿಧಾಮ ವಿದ್ಯಾಸಂಸ್ಥೆ ಶಾಲೆಯ ಮೆಟ್ಟಿಲು, ಗೋಡೆ ಹಾಗು ರಸ್ತೆ ಮೇಲೆ ‘ಸಾರಿ (ಕ್ಷಮಿಸಿ)’ ಎಂದು ಬರೆದಿದ್ದ ಇಬ್ಬರು ಆರೋಪಿಗಳ ಗುರುತು ಪತ್ತೆಯಾಗಿದೆ.
ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಶಾಲೆ ಬಳಿ ತಡರಾತ್ರಿ ಬಂದು ಹೋಗಿದ್ದ ಕಿಡಿಗೇಡಿಗಳು, ‘ಸಾರಿ’ ಎಂಬುದಾಗಿ ಬರೆದಿದ್ದಾರೆ. ನಸುಕಿನಲ್ಲಿ ವಾಯುವಿಹಾರಕ್ಕೆ ಹೊರಟಿದ್ದ ಸಾರ್ವಜನಿಕರು, ಬರಹಗಳನ್ನು ನೋಡಿ ಶಾಲೆ ಶಿಕ್ಷಕರು ಹಾಗು ಠಾಣೆಗೆ ಮಾಹಿತಿ ನೀಡಿದ್ದರು’.
‘ಸಾರಿ’ ಎಂಬುದನ್ನು 100ಕ್ಕೂ ಹೆಚ್ಚು ಬಾರಿ ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಜೊತೆಗೆ, ಪ್ರೀತಿಯ ಸಂಕೇತವಾದ ಹೃದಯದ ಚಿತ್ರವನ್ನೂ ಕೆಲವೆಡೆ ಬಿಡಿಸಲಾಗಿದೆ.
ಯಾರೋ ಪ್ರೇಮಿ ಸ್ನೇಹಿತನ ಜೊತೆ ಸೇರಿ ಈ ರೀತಿ ಮಾಡಿರುವ ಅನುಮಾನವಿದೆ. ಆತನ ಪತ್ತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
Previous Articleಕುಂದಾಪುರದ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ
Next Article ಬಾರಾಮುಲ್ಲಾದಲ್ಲಿ ಮೂವರು ಪಾಕ್ ಉಗ್ರರ ಹತ್ಯೆ