ಕಾಲೇಜ್ ಒಂದರಲ್ಲಿ ನಡೆಯೋ ಭೂತಚೇಷ್ಟೆಗಳ ರೋಚಕ ಕತೆ ಇರುವ “ಸ್ಪೂಕಿ ಕಾಲೇಜ್” ಅಧಿಕೃತ ಟೀಸರ್ ಬಿಡುಗಡೆ ಆಗಿದೆ. ವಿವೇಕ್ ಸಿಂಹ ಮತ್ತು ದಿಯಾ ಖ್ಯಾತಿಯ ಕುಶೀ ರವಿ ನಟಿಸಿರುವ “ಸ್ಪೂಕಿ ಕಾಲೇಜ್” ಚಿತ್ರವನ್ನು ಭರತ್ ಜಿ ನಿರ್ದೇಶಿಸಿದ್ದಾರೆ, ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳ ನಿರ್ಮಾಪಕ ‘ಎಚ್ ಕೆ ಪ್ರಕಾಶ್ ಇದರ ನಿರ್ಮಾಪಕರು.