ದೆವ್ವದ ಪಾತ್ರ ನೆನಪಿಸುವ ದೃಶ್ಯಗಳು, ಕೊಲೆ, ಆತ್ಮಹತ್ಯೆಯ ಹಿನ್ನೆಲೆ, ಅಪರಾಧದ ಸುತ್ತ ನಡೆಯುವ ಕಥೆಯಂತೆ ಕಾಣುವ ‘ಸ್ಪೂಕಿ’ ಟೀಸರ್ ಬಿಡುಗಡೆಯಾಗಿದೆ.
ಸ್ಪೂಕಿ’ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಭರತ್ ನಾಯಕಿಯ ಮೂಲಕವೇ ‘ಸ್ಪೂಕಿ’ಯ ಭಯ ತೆರೆದುಕೊಳ್ಳುತ್ತದೆ.
‘ನಾ ನಿನ್ನ ಬಿಡಲಾರೆ’, ‘ಆಪ್ತಮಿತ್ರ’ ಸಿನಿಮಾಗಳ ರೀತಿಯೇ ಈ ಚಿತ್ರವೂ ಪ್ರೇಕ್ಷಕರ ಮನಗೆಲ್ಲಲಿದೆ ಎಂಬ ನಿರೀಕ್ಷೆಯಿದೆ ಎನ್ನುತ್ತಾರೆ.
ಕಾಲೇಜ್‌ನಲ್ಲಿ ದೆವ್ವ ಇದೆ ಎನ್ನುವುದು ಈ ಚಿತ್ರದ ಹೈಲೈಟ್. ಟೀಸರ್ ಶ್ರೀದೇವಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ನಟ ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ. ‘ಸ್ಪೂಕಿ’ ಎಂದರೆ ಭಯ. ಟೀಸರ್ ನೋಡಿದವರಿಗೆ ‘ಸ್ಪೂಕಿ’ ಪದದ ವಿಶ್ಲೇಷಣೆಯ ಪ್ರಯತ್ನ ಮಾಡಲಾಗಿದೆ ಎಂದರು ಭರತ್.
ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ‘ಸ್ಪೂಕಿ ಕಾಲೇಜ್’ ಬರಲಿದೆ ಎನ್ನುತ್ತಾರೆ.
Previous Articleಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ..
Next Article ಮತ್ತೆ ರಿಲೀಸ್ ಆಗುತ್ತಿದೆ ಟೈಟಾನಿಕ್!