ಇಂದು ಹಿಂದೂಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ ಹಿನ್ನಲೆ ಶ್ರೀರಂಗಪಟ್ಟಣದಲ್ಲಿ ಪೊಲೀಸರ ಹೈಅಲರ್ಟ್ ಘೋಷಿಸಿದ್ದಾರೆ.
ಜಾಮೀಯಾ ಮಸೀದಿಗೆ ಪೊಲೀಸರ ಸರ್ಪಗಾವಲು ಹಾಕಿದ್ದಾರೆ.ಜಾಮೀಯ ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕಾಯ್ದುಕೊಂಡಿದ್ದಾರೆ.ಜಾಮೀಯಾ ಮಸೀದಿ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಪಟ್ಟಣದ 5 ಕಿ.ಮೀ ಸುತ್ತಲೂ ನಿಷೇದಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.ಹೊರಗಿನ ವ್ಯಕ್ತಿಗಳಿಗೆ ಶ್ರೀರಂಗಪಟ್ಟಣ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.ಶ್ರೀರಂಗಪಟ್ಟಣಕ್ಕೆ ಬರುವ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹೆದ್ದಾರಿಯಲ್ಲಿ ತಡೆದು ಬಂಧಿಸಿಲು ಸಿದ್ದತೆ ಮಾಡಿಕೊಳ್ಳಲಾಗಿದೆ
Previous Articleಭದ್ರತಾ ಪಡೆಗಳಿಂದ ಹಿಜ್ಬುಲ್ ಕಮಾಂಡರ್ ಹತ್ಯೆ
Next Article ಕನ್ನಡಿಗರ ಮೇಲೆ ಹಲ್ಲೆ..