ಬೆಳಗಾವಿ,ಅ.9-ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಮುಖ್ಯ ರಸ್ತೆ ಪಕ್ಕದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧ ತನಿಖೆಯನ್ನು ಕೈಗೊಂಡ ಪೊಲೀಸರಿಗೆ,ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸ್ನೇಹಿತನನನ್ನೇ ಕೊಲೆ ಮಾಡಿ ಎಸೆದಿರುವುದು ಪತ್ತೆಯಾಗಿದೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಸುನೀಲ ಮಹಾದೇವ ಸಾಳುಂಕೆ (25) ಕೊಲೆಯಾದವರು.
ಜೈನಾಪೂರ ಗ್ರಾಮದ ಮಹಾಂತೇಶ ತಳವಾರ ಕೊಲೆ ಮಾಡಿದ ಆರೋಪಿ. ಮೃತ ಸುನೀಲ ಮತ್ತು ಬಂಧಿತ ಆರೋಪಿ ಮಹಾಂತೇಶ ಇಬ್ಬರು ಗೆಳೆಯರು. ಮಹಾಂತೇಶನ ಪತ್ನಿಯೊಂದಿಗೆ ಸುನೀಲ ಅಸಭ್ಯವಾಗಿ ವರ್ತಿಸಿದ್ದು ಇದರಿಂದ ರೊಚ್ಚಿಗೆದ್ದಿದ್ದ ಮಹಾಂತೇಶ, ಸ್ನೇಹಿತನನ್ನು ಕಳೆದ ಅ.2ರ ಬೆಳಿಗ್ಗೆ 9 ಗಂಟೆಗೆ ಮೋಟಾರ್ ಸೈಕಲ್ ಮೇಲೆ ಕರೋಶಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ.
ಅಲ್ಲಿ ವಿಪರೀತವಾಗಿ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನ ಕರೋಶಿ ಗ್ರಾಮದ ಚಿಕ್ಕೋಡಿ-ಹುಕ್ಕೇರಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು.
ಇತ್ತ ನಾಪತ್ತೆಯಾಗಿದ್ದ ಸುನೀಲ ಸಾಳುಂಕೆ ಶವವಾಗಿ ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ, ಪಿಎಸ್ಐ ಯಮನಪ್ಪ ಮಾಂಗ್, ಎಎಸ್ಐ ಎಲ್ ಎಸ್ ಖೋತ್, ಡೆಪ್ಯೂಟಿ ಆರ್ಎಫ್ಒ ಶ್ರೀಶೈಲ್ ಬನ್ಸೆ, ಅರಣ್ಯ ಖಾತೆ ಗಾರ್ಡ್ ಮಲಪ್ಪ ಕದಂ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದಾದ ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Previous Articleದಸರಾ ಮೆರವಣಿಗೆ ವೇಳೆ ಮಾರಾಮಾರಿ
Next Article ಮಹಿಳೆಗೆ ವಂಚನೆ – ನಕಲಿ ಜ್ಯೋತಿಷಿ ಸೆರೆ