ಬೆಂಗಳೂರು – ವಿಧಾನಸಭೆ Electionಯ ಮತದಾನಕ್ಕೆ ಕೆಲವೇ ದಿನಗಳು ಬಾಗಿ ಇರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ (Surjewala) ಮಾಡಿದ ಕಿತಾಪತಿಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಫಜೀತಿಗೆ ಸಿಲುಕಿದ್ದಾರೆ.
ಅದು ಹೇಗೆ ಗೊತ್ತಾ? … ತಿಳಿಯಬೇಕಾದ್ರೆ ಈ ಸ್ಟೋರಿನ ನೋಡಿ.
ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಒಳಗೊಂಡಂತೆ ಹೊರ ತಂದಿರುವ ಪ್ರಣಾಳಿಕೆಯಲ್ಲಿ ಭಜರಂಗ ದಳದ ವಿಚಾರ ಪ್ರಸ್ತಾಪಿಸಲಾಗಿದೆ.
ಪ್ರಣಾಳಿಕೆಯಲ್ಲಿನ ಈ ಅಂಶ ಬಹಿರಂಗಗೊಂಡ ರಾಜಕೀಯ ವಾತಾವರಣವೇ ಪರಿವರ್ತನೆಯಾಗಿದೆ. ರಾಜಕೀಯ ರಂಗದಲ್ಲಿರುವ ಎಲ್ಲರ ಭಾಯಲ್ಲೂ ಭಜರಂಗಿ ಭಜನೆ ಶುರುವಾಗಿದೆ,
ಅನೇಕ ಕಡೆ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರಿಂದ ದಿಢೀರ್ ಹನುಮಾನ್ ಚಾಲೀಸಾ ಪಠಣ ನಡೆಯುತ್ತಿದ್ದರೇ, ಕಾಂಗ್ರೆಸ್ ನಾಯಕರು ಭಜರಂಗದಳವೆ ಬೇರೆ ಆಂಜನೇಯ ಬೇರೆ ನಾವೆಲ್ಲರೂ ಹನುಮಂತನ ಪರಮ ಭಕ್ತರು ಹೀಗಾಗಿ ನಾವು ಶಾಂತಿ ಪ್ರಿಯರು ಸಮಾಜಘಾತಕ ಶಕ್ತಿಗಳ ವಿರುದ್ಧ ಹೋರಾಟ ನಡೆಸುವವರು ಎಂದೆಲ್ಲಾ ಹೇಳುತ್ತಾ ಸಮರ್ಥನೆಯಲ್ಲಿ ತೊಡಗಿದ್ದಾರೆ. (Surjewala)
ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಲೆಕ್ಕವಿಲ್ಲದಷ್ಟು ಭರವಸೆಗಳನ್ನು ನೀಡಿದೆ, ಬಹುತೇಕವಾಗಿ ಅವುಗಳ ಬಗ್ಗೆ ಬಿಜೆಪಿ ಒಂದು ರಾಜಕಾರಣದ ಟೀಕೆ ಮಾಡಿ ಸುಮ್ಮನಾಗುತ್ತಿತ್ತು ಆದರೆ ಇದೀಗ ಭಜರಂಗದಳದ ವಿಷಯ ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮತ್ತು ವಿವಾದ ವಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.ಪ್ರಣಾಳಿಕೆಯ ಒಂದೇ ಒಂದು ಅಂಶ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಕಾನೂನು ಸುವ್ಯವಸ್ಥೆಗೆ ಭಂಗ ತರುವ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪಿಎಫ್‍ಐ, ಭಜರಂಗದಂತಹ ಸಂಘಟನೆಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲಿಗೆ ಈ ಭರವಸೆಯನ್ನು ಸಮರ್ಥಿಸಿ ಕೊಳ್ಳಲಾಗದೆ ರಾಜ್ಯ ನಾಯಕರು ಪರದಾಡುತ್ತಿದ್ದಾರೆ. (Surjewala)
ಏಕೆಂದರೆ ಭಜರಂಗಿ ಎಂಬ ಪದವೇ ಏಕಾಏಕಿ ಪ್ರಣಾಳಿಕೆಯಲ್ಲಿ ತುರುಕಲ್ಪಟ್ಟಿರುವ ವಿವಾದಿತ ಅಂಶವಾಗಿದೆ. ಕಳೆದ ಆರು ತಿಂಗಳಿ ನಿಂದಲೂ ರಾಜ್ಯದಲ್ಲಿ ಬೀಡು ಬಿಟ್ಟು ಕ್ಷಣಕ್ಷಣಕ್ಕೂ ಚುನಾವಣಾ ರಣತಂತ್ರಗಳನ್ನು ರೂಪಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮತುವರ್ಜಿಯಿಂದ ದಿಢೀರ್ ಪ್ರಣಾಳಿಕೆಯಲ್ಲಿ ಸೇರ್ಪಡೆಯಾಗಿದೆ.
ಈ ಕುರಿತು ಸುರ್ಜೇವಾಲ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದಾಗ ಬಹುತೇಕರು ಅನಗತ್ಯವಾಗಿ ಈ ಹಂತದಲ್ಲಿ ವಿವಾದ ಮೈ ಮೇಲೆ ಎಳೆದುಕೊಳ್ಳುವುದು ಬೇಡ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಹಾಗೇಯೇ ಮುಂದುವರೆಯಲಿ ಎಂದು ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.
ಆದರೆ ಇದನ್ನು ಒಪ್ಪದ ಸುರ್ಜೆವಾಲ ಹಲವಾರು ಕಾರಣಗಳನ್ನು ನೀಡಿ ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಇದು ರಾಜ್ಯ ನಾಯಕರಿಗೆ ಫಜೀತಿಯಲ್ಲಿ ಬೀಳುವಂತೆ ಮಾಡಿದೆ. (Surjewala)
ಸಂಘ ಪರಿವಾರ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಚಾರದ ಮೇಲೆ ಈ ಅಂಶ ಭಾರಿ ಪರಿಣಾಮ ಬೀರುತ್ತದೆ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ದೃಷ್ಟಿಯಿಂದಾಗಿಯೇ ಈ ಅಂಶವನ್ನು ಸೇರಿಸಲಾಗಿದೆ ಎಂದು ಬಿಜೆಪಿ ಮಾಡುತ್ತಿರುವ ಪ್ರಚಾರ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಗೆಲುವಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. (Surjewala)
Also read.