ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳಿಸುತಿದ್ದ ಶಿಕ್ಷಕ ಅಮಾನತ್ತುಗೊಂಡಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಟಹಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಸುರೇಶ್ ಅಮಾನತ್ತುಗೊಂಡ ಶಿಕ್ಷಕ. ಶಾಲೆಗೆ ಬರುತಿದ್ದ ವಿದ್ಯಾರ್ಥಿ ಗಳ ಪೋಷಕರ ಮೊಬೈಲ್ ನಂಬರ್ ಪಡೆಯುತಿದ್ದ ಶಿಕ್ಷಕ ಸುರೇಶ್ ಶಾಲೆ ಮುಗಿದ ಬಳಿಕ ತಾಯಂದಿರ ವಾಟ್ಸಪ್ ಗೆ ಅಶ್ಲೀಲ ಮೆಸೇಜ್ ಕಳುಹಿಸುತಿದ್ದ.ಇದರಿಂದ ಆಕ್ರೋಶಗೊಂಡ ಮಹಿಳೆಯರು ಡಿಡಿಪಿಐಗೆ ದೂರು ನೀಡಿದ್ದಾರೆ. ಬಳಿಕ ಅನಾನತ್ತು ಮಾಡಿದ್ದಾರೆ.