Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೈಸೂರಿನ ಹಲವರಿಗೆ ಉಗ್ರ ಸಂಘಟನೆಗಳಿಂದ ಹಣ
    ಅಪರಾಧ

    ಮೈಸೂರಿನ ಹಲವರಿಗೆ ಉಗ್ರ ಸಂಘಟನೆಗಳಿಂದ ಹಣ

    vartha chakraBy vartha chakraDecember 6, 2022Updated:December 6, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಮಂಗಳೂರು,ಡಿ.6-ನಗರದಲ್ಲಿ‌‌ ಕುಕ್ಕರ್ ಬಾಂಬ್ ಸ್ಫೋಟಿಸಿದ ಉಗ್ರ ಶಾರೀಕ್‍‌ ಬ್ಯಾಂಕ್ ಖಾತೆಗೆ ಹೆಚ್ಚಿನ ಹಣ ಡಾಲರ್ ಮೂಲಕ ಹರಿದು ಬಂದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
    ಬಾಂಬರ್ ಶಾರೀಕ್‍ ಸ್ಪೋಟ ಪ್ರಕರಣದ ತನಿಖೆಯನ್ನು ‌ತೀವ್ರಗೊಳಿಸಿರುವ ಎನ್‍ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ದೊರೆಯುತ್ತಿದ್ದು ಆತನ ಹಣಕಾಸಿನ ಮೂಲ ಜಾಲಾಡಿದಾಗ ಹೆಚ್ಚಿನ ಹಣ ಡಾಲರ್ ಮೂಲಕ ಅಕೌಂಟ್‍ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ.
    ಮೈಸೂರಿನ ನೂರಾರು ಮಂದಿಯ ಅಕೌಂಟ್‍ಗೆ ಡಾಲರ್ ಭಾರತೀಯ ಕರೆನ್ಸಿಯಾಗಿ ವರ್ಗಾವಣೆ ಆಗಿದ್ದು 40ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ.
    ಶಾರೀಕ್ ನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‍ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
    ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‍ನನ್ನು ಎನ್‍ಐಎ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತನ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನ ಡಾರ್ಕ್ ವೆಬ್‍ನಲ್ಲಿರುವ ಅಕೌಂಟ್‍ಗೆ ಡಾಲರ್‌ ರೂಪದಲ್ಲಿ ಸಾಕಷ್ಟು ಹಣ ಬಂದಿರುವ ದಾಖಲೆ ಲಭ್ಯವಾಗಿದ್ದು ಅಧಿಕಾರಿಗಳು ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.
    ಡಾರ್ಕ್ ವೆಬ್‍ನಲ್ಲಿರುವ ಶಾರೀಕ್ ಅಕೌಂಟ್‍ಗೆ ಲಕ್ಷಾನುಗಟ್ಟಲೇ ಮೌಲ್ಯದ ಡಾಲರ್ ಡೆಪೋಸಿಟ್ ಆಗಿದ್ದು, ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ವರ್ಗಾಯಿಸುತ್ತಿದ್ದ. ಭಾರತೀಯ ಕರೆನ್ಸಿಯನ್ನು ತನ್ನ ಪರಿಚಯಸ್ಥರ ಅಕೌಂಟ್‍ಗೆ ಹಾಕಿಸಿ ಅದನ್ನು ಉಪಯೋಗಿಸುತ್ತಿದ್ದ. ಮೈಸೂರಿನಲ್ಲಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದು, ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಸುಮಾರು 100 ಅಧಿಕ ಮೈಸೂರಿಗರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದ್ದು, ಎನ್‍ಐಎ ಅಧಿಕಾರಿಗಳು 40 ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.
    ಈತನ ಕೃತ್ಯ ತಿಳಿಯದಿದ್ದ ಸಾಕಷ್ಟು ಮಂದಿ ಈತನ ಸ್ನೇಹವನ್ನು ನಂಬಿ ಅಕೌಂಟ್‍ಗೆ ಹಣ ಹಾಕಿ ಶಾರೀಕ್ ಹೇಳಿದ ಬೇರೆ, ಬೇರೆ ಅಕೌಂಟ್‍ಗೆ ವರ್ಗಾಯಿಸುತ್ತಿದ್ದರು.
    ಮೈಸೂರು ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಕೌಂಟ್‍ಗೂ ಈತನ ಹಣ ವರ್ಗಾವಣೆ ಆಗಿದೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಎಲ್ಲಾ ರಾಜ್ಯದಲ್ಲೂ ತನಿಖೆ ಆರಂಭಿಸಿದ್ದು, ಉಗ್ರನ ಜಾಲ ಇಡೀ ದೇಶದಲ್ಲೇ ಪಸರಿಸಿದ ಆತಂಕ ಎದುರಾಗಿದೆ

    Verbattle
    Verbattle
    Verbattle
    ಉಗ್ರ
    Share. Facebook Twitter Pinterest LinkedIn Tumblr Email WhatsApp
    Previous Articleಹಿಜಾಬ್ ವಿರುದ್ಧ ನೈತಿಕ ಪೊಲೀಸ್ ಗಿರಿ ಬೇಡ ಎಂದ ಇರಾನ್
    Next Article BJP ‌ಮಾಡಿದೆ ಬಿಗ್ ಗೇಮ್ ಪ್ಲಾನ್
    vartha chakra
    • Website

    Related Posts

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    January 30, 2026

    ಡಿ.ಕೆ.ಶಿವಕುಮಾರ್ ಭಾಷಣದಲ್ಲಿ ಏನು ಹೇಳಿದ್ದಾರೆ ನೋಡಿ

    January 30, 2026

    ಮೋಹನ್ ದಾಸ್ ಪೈ ಗೆ ಮಂತ್ರಿ ರಾಮಲಿಂಗಾರೆಡ್ಡಿ ಕೊಟ್ಟ ಉತ್ತರ ನೋಡಿ!

    January 30, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನ ಹಲವೆಡೆ ಫೆಬ್ರವರಿ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 777bet_bcpr on ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • pilesos daison kypit_jbml on ಶತ್ರು ಭೈರವಿಯಾಗ ಮಾಡಿ ಗೆದ್ದಿಲ್ಲ.
    • Walterfak on ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಪೊಲೀಸ್ ಹುಡುಕಾಟ
    Latest Kannada News

    ಬೆಂಗಳೂರಿನ ಹಲವೆಡೆ ಫೆಬ್ರವರಿ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

    January 31, 2026

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    January 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    January 31, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.