ಶ್ರೀನಗರ,ಮೇ.31- ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದ ರಾಜ್‍ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ರಾಜ್‍ಪೋರಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ
ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಟ್ರಾಲ್‍ನ ಶಾಹಿದ್ ರಾಥರ್ ಮತ್ತು ಶೋಪಿಯಾನ್‍ನ ಉಮರ್ ಯೂಸುಫ್ ಎನ್ನುವ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ.
ಸಾವನ್ನಪ್ಪಿದ ಉಗ್ರರು ಇತರ ಭಯೋತ್ಪಾದಕ ಅಪರಾಧದ ಜೊತೆಗೆ, ಇಬ್ಬರು ನಾಗರಿಕರನ್ನು ಹತ್ಯೆಗೈದಿದ್ದು,ಎನ್‍ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ-47 ರೈಫಲ್‍ಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ
ಭಯೋತ್ಪಾದಕ ಕೃತ್ಯಗಳನ್ನು ಹೊರತುಪಡಿಸಿ, ಮೃತ ಶಹೀದ್ ರಾಥರ್ ಹಿಂದೆ, ಅರಿಪಾಲ ನಿವಾಸಿ ಹಾಗು ಸರ್ಕಾರಿ ಉದ್ಯೋಗಿ ಶಕೀಲಾ ಹಾಗು ಲುರ್ಗಮ್ ತ್ರಾಲ್‌ನ ಸರ್ಕಾರಿ ಕಚೇರಿಯ ಜವಾನ ಜಾವಿದ್ ಅಹಮದ್ ಎಂಬಿಬ್ಬರನ್ನು ಹತ್ಯೆ ಮಾಡಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚಿನ ಎನ್‍ಕೌಂಟರ್‌ಗಳಲ್ಲಿ, ಭದ್ರತಾ ಪಡೆಗಳು ಕಳೆದ ಐದು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮತ್ತು ಜೈಶ್-ಎ-ಮೊಹಮ್ಮದ್‍ಗೆ ಸೇರಿದ 26 ಉಗ್ರರನ್ನು ಹತ್ಯೆ ಮಾಡಿದೆ.
14 ಉಗ್ರರು ಮಸೂದ್ ಅಜರ್ ಸ್ಥಾಪಿಸಿದ ಭಯೋತ್ಪಾದಕ ಗುಂಪು ಜೈಶ್‍ಗೆ ಸೇರಿದವರಾಗಿದ್ದರೆ, ಹಫೀಜ್ ಸಯೀದ್ ಸ್ಥಾಪಿಸಿದ ಲಷ್ಕರ್-ಎ-ತೊಯ್ಬಾದಿಂದ ಬಂದವರಾಗಿದ್ದಾರೆ
Previous Articleಮಗಳ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ
Next Article ಕುವೆಂಪು ಜನ್ಮಸ್ಥಳದಿಂದ ಪಾದಯಾತ್ರೆ..