ನವದೆಹಲಿ.
ಇ.ವಿ.ತಂತ್ರಜ್ಞಾನ ಆಟೋ ಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆ ಟೆಸ್ಲಾ ಭಾರತ ವಾಹನ ಪ್ರಪಂಚಕ್ಕೆ ಕಾಲಿಡುವುದು ಖಚಿತವಾಗಿದೆ.
ಜಗತ್ತಿನ ಅತಿ ದೊಡ್ಡ ಮಾರುಕಟ್ಟೆ ಎನಿಸಿರುವ ಭಾರತದಲ್ಲಿ ತನ್ನ ವಾಹನಗಳ ಮಾರಾಟ ಮತ್ತು ತಯಾರಿಕೆ ಕ್ಷೇತ್ರ ಪ್ರವೇಶಿಸಲು ಟೆಸ್ಲಾ ಸಂಸ್ಥೆ ಮುಂದಾಗಿತ್ತು.ಆದರೆ,ಭಾರತದಲ್ಲಿ ಅಮೆರಿಕ ಮೂಲದ ವಾಹನಗಳ ಮೇಲೆ ತೆರಿಗೆ ಅತ್ಯಂತ ಹೆಚ್ಚಳವಾಗಿದೆ ಹೀಗಾಗಿ ಇಲ್ಲಿ ವಾಹನಗಳ ತಯಾರಿಕೆ ಮತ್ತು ಮಾರಾಟ ಅಷ್ಟೊಂದು ಲಾಭದಾಯಕವಲ್ಲ ಎಂದು ತೀರ್ಮಾನಿಸಿದ ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನ ವಹಿವಾಟು ವಿಸ್ತರಣೆ ನಿರ್ಧಾರವನ್ನು ಮುಂದೂಡಿದ್ದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕೈಗೊಂಡ ಅಮೆರಿಕಾ ಪ್ರವಾಸದ ವೇಳೆ ಅಮೆರಿಕಾದಲ್ಲಿ ತಯಾರಾಗುವ ಇವಿ ಆಧಾರಿತ ವಾಹನಗಳ ಮಾರಾಟದ ಮೇಲೆ ವಿಧಿಸಲಾಗುತ್ತಿದ್ದ ಸುಂಕದಲ್ಲಿ ಶೇಕಡ 30ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಆದೇಶ ಹೊರ ಬಿದ್ದ ಬೆನ್ನಲ್ಲೇ ಟೆಸ್ಲಾ ಭಾರತದಲ್ಲಿ ತನ್ನ ವಹಿವಾಟು ವಿಸ್ತರಣೆಗೆ ಮುಂದಾಗಿದ್ದು ಇದೀಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ
ಕಂಪನಿಗೆ ಅತ್ಯಂತ ತುರ್ತಾಗಿ
Inside Sales Advisor
– Customer Support Supervisor
– Customer Support Specialist
– Service Advisor
– Order Operations Specialist
– Service Manager
– Tesla Advisor
– Parts Advisor
– Business Operations Analyst
– Store Manager
– Service Technician ಈ ಹುದ್ದೆಗಳಿಗೆ ಅರ್ಹರು ಬೇಕಾಗಿದ್ದು ಆಸಕ್ತರು ಅರ್ಜಿ ಸಲ್ಲಿಸುವಂತೆ ಟೆಸ್ಲಾ ಸಂಸ್ಥೆ ಪ್ರಕಟಿಸಿದೆ.
Previous Articleಬೆಂಗಳೂರು ನಾಗರಿಕರೇ ಎಚ್ಚರ
Next Article ರೆವೆನ್ಯೂ ಬಡಾವಣೆ ನಿವೇಶನ ದಾರರಿಗೆ ಸಿಹಿ ಸುದ್ದಿ