ಧಾರವಾಡ: ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನು ನಾವು ಗಮನಿಸಿ ಅದನ್ನು ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಅವರು ಈ ಕುರಿತು ಧಾರವಾಡದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,
ಬಸವಣ್ಣನವರ ಕುರಿತು ಪಠ್ಯದಲ್ಲಿ ಹಲವು ಹೊಸ ವಿಚಾರ ಹಿನ್ನೆಲೆ ಲೋಪದೋಷಗಳನ್ನು ಯಾರೇ ಕಂಡು ಹಿಡಿದರು ಅದನ್ನ ಸರಿ ಮಾಡುತ್ತೇವೆ.
ಯಾವುದೇ ತಪ್ಪನ್ನು ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬಿರಬಾರದು. ಹೀಗಾಗಿ ಅದನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಶೇ.84ರಷ್ಟು ಬಿಇಓ ಕಚೇರಿ ಸೇರಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುವ ಹಾಗಾಗುತ್ತೆ ಎಂದರು. ಈ ಸಾರಿ ಅತಿಥಿ ಶಿಕ್ಷಕರನ್ನು ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಈ ಮೂಲಕ
ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಂತಾಗುತ್ತದೆ. ಮುಂಬರುವ ದಿನಗಲ್ಲಿ ಸೈಕಲ್ ವಿತರಣೆಯನ್ನು ಸಹ ಮಾಡುವ ವಿಚಾರವಿದೆ ಎಂದರು
ಪಠ್ಯ ಪುಸ್ತಕ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ: ಸಚಿವ ಬಿ.ಸಿ. ನಾಗೇಶ್
Previous Articleಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!
Next Article ಮಿಥಾಲಿ ರಾಜ್ ನಿವೃತ್ತಿ ಘೋಷಣೆ