ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು 11ನೇ ಮಹಡಿಯಿಂದ ಜಿಗಿದು ಸಾವಿಗೀಡಾಗಿದ್ದಾರೆ.
ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಡಾ.ಪೃಥ್ವಿಕಾಂತ್ ರೆಡ್ಡಿ (31) ಸಾವನ್ನಪ್ಪಿದ್ದಾರೆ.
ಕಳೆದ ಕೆಲ ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಪೃಥ್ವಿಕಾಂತ್ ರೆಡ್ಡಿ ಬುಧವಾರ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯ 11ನೇ ಮಹಡಿಯಿಂದ ಜಿಗಿದು ಅಸುನೀಗಿದ್ದಾರೆ,
ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೃಥ್ವಿಕಾಂತ್ ಅವರ ಪತ್ನಿಯೂ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯನ್ನು ಮನೆಯವರಿಗೆ ಹೇಳಲಾರದೆ ಸಾವಿಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
11ನೇ ಮಹಡಿಯಿಂದ ಜಿಗಿದು ವಿಕ್ಟೋರಿಯಾ ಆಸ್ಪತ್ರೆ ಯುವ ವೈದ್ಯ ಸಾವು
Previous Articleಬುಲ್ಡೋಜರ್ ಓಡೋಕೆ ಬಿಡೋಲ್ಲಾ.. !!
Next Article 18 ಲಕ್ಷ ರೂ.ಗಳಿಗೆ ಮಾರಾಟವಾಯ್ತು ಚಾಮುಂಡಿ ಎಕ್ಸ್‌ಪ್ರೆಸ್