ನವದೆಹಲಿ: ತರಂಗಗಳ ಹಂಚಿಕೆಯ ಸಂಬಂಧ ಟೆಲಿಕಮ್ಯುನಿಕೇಷನ್ ಇಲಾಖೆ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ವರದಿಗೆ ಪ್ರಧಾನಿ ಮೋದಿ ಬುಧವಾರ(ಜೂ.15) ಹಸಿರು ನಿಶಾನೆ ತೋರಿದ್ದಾರೆ.
ಇದರ ಪರಿಣಾಮ, ದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೇಗದ 5G ಅಂತರ್ಜಾಲ ಸೌಲಭ್ಯ ಲಭ್ಯವಾಗಲಿದೆ. ಡಿಜಿಟಲ್ ಇಂಡಿಯಾ ಗಟ್ಟಿಗೊಳಿಸುವ ಹಾದಿಯಲ್ಲಿ ಇದೊಂದು ಹೊಸ ಕ್ರಾಂತಿಯಾಗಲಿದೆ. ವೇಗದ ಇಂಟರ್‌ನೆಟ್ ಸೌಲಭ್ಯದಿಂದ ಡಿಜಿಟಲ್ ಇಂಡಿಯಾ ಕನಸಿಗೆ ಇನ್ನಷ್ಟು ಶಕ್ತಿ ಸಿಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ 2013ರಲ್ಲಿ 4G ಸೇವೆ ಆರಂಭವಾದಾಗಿನಿಂದ ದೇಶಾದ್ಯಂತ ಜನರ ಎಷ್ಟೋ ಕೆಲಸಗಳಿಗೆ, ಮನರಂಜನೆಗೆ ಮೊಬೈಲ್ ಅಂತರ್ಜಾಲವೇ ಮೂಲವಾಗಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಆಯಿತು. 2014ರವರೆಗೆ ಮೊಬೈಲ್ ಅಂತರ್ಜಾಲ ಬಳಸುವವರ ಸಂಖ್ಯೆ 10 ಕೋಟಿಯಾಗಿತ್ತು. ಆದರೆ 4G ಸೇವೆ ಆರಂಭವಾದ ನಂತರ 80 ಕೋಟಿ ಬಳಕೆದಾರರಿದ್ದಾರೆ.
Previous Articleಸಾಯಿ ಪಲ್ಲವಿ ಕೆಲಸದ ಬದ್ಧತೆಗೆ ಭೇಷ್ ಎಂದು ನಿರ್ದೇಶಕ
Next Article ಮಂಕಿಪಾಕ್ಸ್ ಹೆಸರು ಬದಲಾವಣೆಗೆ WHO ನಿರ್ಧಾರ