ಕೋಲ್ಕತ್ತಾ: ಖಿನ್ನತೆಗೆ ಒಳಗಾದ ರೋಗಿಯೊಬ್ಬ ಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಸೆಂಟ್ರಲ್ ಕೋಲ್ಕತ್ತಾದಲ್ಲಿ ನಡೆದಿದೆ.
ಇಲ್ಲಿನ ನರವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆಗೆ ಸುಜಿತ್ ಅಧಿಕಾರಿ ಎಂಬ ರೋಗಿ ದಾಖಲಾಗಿದ್ದ. ಈ ವೇಳೆ ಆತ ವಾರ್ಡ್ ಬಾಯ್‌ಗಳೊಂದಿಗೆ ಜಗಳವಾಡಿ, ನಂತರ ಆಸ್ಪತ್ರೆಯ ಎಂಟನೇ ಮಹಡಿಯ ಕಿಟಕಿಯಲ್ಲಿ ಕುಳಿತಿದ್ದು, ರಕ್ಷಣೆಗೆ ಬಂದರೆ ಅಲ್ಲಿಂದಲೇ ಕೆಳಗೆ ಹಾರುವೆನೆಂದು ಆತಂಕ ಸೃಷ್ಟಿಸಿದ್ದ.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಅಗ್ನಿಶಾಮಕ ದಳದವರಿಗೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿಗೆ(ಎಸ್ಡಿಆರ್ಎಫ್) ಕರೆ ಮಾಡಿದ್ದು, ಅವರು ರಕ್ಷಣಾ ನೆಟ್‌ಗಳು ಮತ್ತು ಏರ್‌ಬ್ಯಾಗ್‌ಗಳೊಂದಿಗೆ ಸ್ಥಳಕ್ಕೆ ಬಂದಿದ್ದಾರೆ.
ಆದರೆ, ರಕ್ಷಣಾ ನೆಟ್‌ಗಳನ್ನು ಅಳವಡಿಸಲು ಮತ್ತು ಏರ್‌ಬ್ಯಾಗ್‌ಗಳನ್ನು ಹಾಕಲು ಸಿದ್ಧವಾಗುತ್ತಿದ್ದಂತೆ ರೋಗಿ ಗೋಡೆಗೆ ನೇತಾಡಲು ಪ್ರಾರಂಭಿಸಿ ಕೊನೆಗೆ ಜಿಗಿದಿದ್ದಾನೆ. ಪರಿಣಾಮ ಕೆಳಗೆ ಬೀಳುತ್ತಿದ್ದಾಗ ದೇಹವು ಕಟ್ಟಡದ ಗೋಡೆಗೆ ಎರಡು ಬಾರಿ ಬಡಿದು ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದೆ. ಸದ್ಯ ಆತನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಸತತ 2 ಗಂಟೆಗಳ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ.
Previous Articleಎಸ್‌ಎಂ ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಕೆಂಪೇಗೌಡ ಪ್ರಶಸ್ತಿ
Next Article ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ