ಬೆಂಗಳೂರು, ಅ.14- ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯಲ್ಲಿ (IT Raid) ಬಿಬಿಎಂಪಿ ಗುತ್ತಿಗೆದಾರ ಮುಖ್ಯಮಂತ್ರಿ ಆಪ್ತ ಅಂಬಿಕಾಪತಿ ನಿವಾಸದಲ್ಲಿ ಪತ್ತೆಯಾದ 42 ಕೋಟಿ ರೂಪಾಯಿ ಇದೀಗ ಹಲವರಿಗೆ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.ಪ್ರಕರಣ ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ನಿರೀಕ್ಷೆಯಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆಯ ಪತಿಯಾಗಿರುವ ಅಂಬಿಕಾಪತಿ ಹಾಗೂ ಅವರ ಮಗನ ಮನೆ ಮತ್ತು ಸಂಬಂಧಿಕರ ಮನೆಗಳಿಂದ ಅಪಾರ ಪ್ರಮಾಣದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ.
ನಿನ್ನೆ ಇಡೀ ರಾತ್ರಿ ಅಂಬಿಕಾಪತಿ ಅವರ ನಿವಾದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಮನೆಯಲ್ಲಿದ್ದ ಲಾಕರ್‌ನ್ನು ತೆಗೆಸಿದ್ದು, ಲಾಕರ್‌ನಲ್ಲೂ ಎರಡು ಸೂಟ್‌ಕೇಸ್‌ನಲ್ಲಿ ನಗದು ಅಪಾರ ಮೌಲ್ಯದ ಚಿನ್ನಾಭರಣ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗುತ್ತಿಗೆದಾರರ ಮನೆಯಿಂದ ವಶಪಡಿಸಿಕೊಂಡ 42 ಕೋಟಿ ರೂ.ಗಳನ್ನು ಐಟಿ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿದ್ದು,ಶೋಧ ಮುಂದುವರೆಸಿದ್ದಾರೆ.ಅಲ್ಲದೆ ಹಣದ ಮೂಲದ ಬಗ್ಗೆ ಹಲವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಅವರು ನೀಡಿರುವ ಉತ್ತರಗಳು ಗೊಂದಲಕ್ಕೆ ಕಾರಣವಾಗಿದ್ದು,ಹೆಚ್ಚಿನ ತನಿಖೆಗಾಗಿ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಅಂಬಿಕಾಪತಿ ಮನೆಯಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಅಂಬಿಕಾಪತಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಣ ಎಲ್ಲಿಂದ ಬಂದಿದೆ. ಯಾರು ತಂದುಕೊಟ್ಟರು ಎಂಬ ಬಗ್ಗೆಯೂ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಈ ಕುರಿತು ಸೋಮವಾರ ವಿಚಾರಣೆಗೆ ಬರುವಂತೆ ಅಂಬಿಕಾಪತಿ ಮತ್ತು ಅವರ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತೆಲಂಗಾಣಕ್ಕೆ ರವಾನೆ:
ಒಟ್ಟು 26 ಬಾಕ್ಸ್ ಗಳಲ್ಲಿ ಜೋಡಿಸಲಾಗಿದ್ದ ಈ ಹಣ ವಿಧಾನಸಭೆ Election ಯಲ್ಲಿ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳಿಗೆ ತಲುಪಿಸಲು ಸಂಗ್ರಹಿಸಲಾಗಿತ್ತು. ಮೊನ್ನೆಯೇ ಇದನ್ನು ವರ್ಗಾವಣೆ ಮಾಡಬೇಕಿತ್ತಾದರೂ ಇನ್ನೂ ಎಂಟು ಕೋಟಿ ರೂಪಾಯಿ ಬರಬೇಕಿದ್ದು,ಎಲ್ಲವನ್ನೂ ಒಟ್ಟಿಗೆ ಕೊಂಡೊಯ್ಯುವಂತೆ ಸಲಹೆ ಮಾಡಿದ ಹಿನ್ನೆಲೆಯಲ್ಲಿ ಅದಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಾಗಿರುವ ಗುತ್ತಿಗೆದಾರ ಅಂಬಿಕಾಪತಿ ರಾಜ್ಯದ ಪ್ರಮುಖ ವ್ಯಕ್ತಿಯೊಬ್ಬರ ಸೂಚನೆ ಮೇರೆಗೆ ಈ ಹಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಬಿಜೆಪಂಗ್ರಹಿಸಲಾಗಿತ್ತು ಎನ್ನಲಾಗಿದ್ದು, ಈ ಹಣ ನೀಡಿದ ಎಲ್ಲರಿಗೂ ನೋಟೀಸ್ ನೀಡಲು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.ಹೀಗಾಗಿ ಈ ಬೆಳವಣಿಗೆ ಹಲವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪಿತೃ ಪಕ್ಷ
ಐಟಿ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಅಂಬಿಕಾಪತಿ ಕುಟುಂಬಸ್ಥರು ಪಿತೃ ಪಕ್ಷದ ಕಾರ್ಯಕ್ಕೂ ಸಿದ್ಧತೆ ನಡೆಸಿದರು. ಈ ದಾಳಿಯಿಂದ ತಾವು ವಿಚಲಿತರಾಗಿಲ್ಲ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ಮನೆಯಲ್ಲಿ ತೋರಣ ಕಟ್ಟಿ ಪೂಜೆ ನಡೆಸಿದರು.
ರಾಜಕೀಯ ಅಸ್ತ್ರ
ಗುತ್ತಿಗೆದಾರನ ಮನೆಯಿಂದ 42 ಕೋಟಿ ರೂಪಾಯಿ ಜಪ್ತಿ ಮಾಡಿದ ಪ್ರಕರಣವನ್ನು ಬಿಜೆಪಿ ತನ್ನ ರಾಜಕೀಯ ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ., ಬಿಬಿಎಂಪಿ ಗುತ್ತಿಗೆದಾರನಾಗಿರುವ ಅಂಬಿಕಾಪತಿಯ ಪತ್ನಿ ಮಾಜಿ ಕಾರ್ಪೋರೇಟರ್ ಆಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಹಾಗಾಗಿ, ಈ ವಿಚಾರವನ್ನು ಮುಂದಿನ ಚುನಾವಣೆಯಲ್ಲಿ ಬಳಸಿ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಲು ಬಿಜೆಪಿ ತಯಾರಿ ನಡೆಸಿದೆ.