ನವದೆಹಲಿ – ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆ ಇಸ್ಕಾನ್ ನ (ISKCON) ಜನ್ಮ ಜಾಲಾಡಿದ್ದಾರೆ ಕೇಂದ್ರದ ಮಾಜಿ ಸಚಿವೆ ಹಾಗೂ ಬಿಜೆಪಿ ನಾಯಕಿ ಮನೇಕಾ ಗಾಂಧಿ.
ಜನಸಮುದಾಯದಲ್ಲಿ ಕೃಷ್ಣಪ್ರಜ್ಞೆ ಮೂಡಿಸುವ ಮೂಲಕ ಹಲವಾರು ಧಾರ್ಮಿಕ ಕೈಂಕರ್ಯಗಳಲ್ಲಿ ನಿರತವಾಗಿರುವ ಇಸ್ಕಾನ್ ಸಂಸ್ಥೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡಿದೆ ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವುದು ಇಸ್ಕಾನ್ ಗೋಶಾಲೆ ಮತ್ತು ಬಿಸಿಯೂಟ ಯೋಜನೆ.
ಎರಡು ಯೋಜನೆಗಳ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಇಸ್ಕಾನ್ ಸಂಸ್ಥೆ ಈ ಯೋಜನೆ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಪ್ರಮಾಣದ ದೇಣಿಗೆಯನ್ನು ಸಂಗ್ರಹಿಸುತ್ತದೆ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ನೆರವು ನೀಡುತ್ತಿವೆ.
ಇಂತಹ ನೆರವು ಪಡೆದು ಗೋಶಾಲೆ ನಡೆಸುತ್ತಿರುವ ಇಸ್ಕಾನ್ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಅದರಲ್ಲೂ ಇಸ್ಕಾನ್ ನಡೆಸುತ್ತಿರುವ ಗೋಶಾಲೆಯಲ್ಲಿ ಕೇವಲ ಹಾಲು ಕರೆಯುವ ಹಸುಗಳು ಮಾತ್ರ ಇವೆ ಗಂಡು ಕರಗಳು ವಯಸ್ಸಾದ ಗೋವುಗಗಳು ಇಸ್ಕಾನ್ ನಡೆಸುತ್ತಿರುವ ಯಾವುದೇ ಗೋಶಾಲೆಯಲ್ಲಿ ಕಾಣಸಿಗುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಇಂತಹ ಆರೋಪಗಳ ಬೆನ್ನಲ್ಲೇ ಬಿಜೆಪಿ ನಾಯಕಿ ಮನೆ ಕಾ ಗಾಂಧಿ ಇಸ್ಕಾನ್ (ISKCON) ಸಂಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಇಸ್ಕಾನ್ ತನ್ನ ಗೋಶಾಲೆಗಳ ಮೂಲಕ ದನದ ಮಾಂಸ ಮಾರುಕಟ್ಟೆಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಮಾಡಿದ್ದಾರೆ ಈ ಕುರಿತಾಗಿ ಅವರು ನೀಡಿರುವ ಹೇಳಿಕೆ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ
ನಾನು ಇತ್ತೀಚೆಗೆ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡುವ ಹಸುಗಳಾಗಲೀ ಅಥವಾ ಕರುಗಳಾಗಲಿ ಇರಲಿಲ್ಲ.
ಹಾಲು ನೀಡದ ಹಸು ಹಾಗೂ ಕರುಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಅಲ್ಲಿದ್ದ ಹಾಲು ನೀಡದ ಎಲ್ಲಾ ಹಸು, ಕರುಗಳನ್ನು ಕಸಾಯಿಖಾನೆಗೆ ಇಸ್ಕಾನ್ ಮಾರಾಟ ಮಾಡಿತ್ತು. ಇವರು ಹೀಗೆ ಮಾಡಿದಷ್ಟು ಬೇರೆ ಯಾರೂ ಈವರೆಗೂ ಮಾಡಿಲ್ಲ ಎಂದು ಮನೇಕಾ ಆರೋಪಿಸಿದ್ದಾರೆ.
ಇಸ್ಕಾನ್ (ISKCON) ಕಾರ್ಯಕರ್ತರು ರಸ್ತೆಯಲ್ಲಿ ಹರೇ ರಾಮ ಹರೇ ಕೃಷ್ಣ ಎಂದು ಹಾಡುತ್ತಾರೆ. ತಮ್ಮ ಬದುಕೇ ಹಸುಗಳ ಹಾಲಿನ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ. ಆದರೆ ಕಸಾಯಿಖಾನೆಗೆ ಇವರಷ್ಟು ಹಸುಗಳನ್ನು ಯಾರೂ ಮಾರಾಟ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾತುಗಳು ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇಸ್ಕಾನ್ ಸಂಸ್ಥೆ ಇದೀಗ ಮನೇಕಾ ಗಾಂಧಿ ಅವರ ಈ ಆರೋಪ ಸುಳ್ಳು ಹಾಗೂ ಆಧಾರ ರಹಿತವಾಗಿದೆ. ಕೇಂದ್ರದ ಮಾಜಿ ಸಚಿವರ ಇಂಥ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ಹೇಳಿದೆ ಎಲ್ಲಿ ದನದ ಮಾಂಸವೇ ಪ್ರಮುಖ ಆಹಾರವಾಗಿದೆಯೋ ಅಂತಹ ಭಾಗಗಳಲ್ಲಿ ಗೋ ಸಂರಕ್ಷಣಾ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಅನಾಥವಾಗಿರುವ, ಗಾಯಗೊಂಡಿರುವ ಹಾಗೂ ರಕ್ಷಿಸಲಾದ ಗೋವುಗಳನ್ನು ಇಸ್ಕಾನ್‌ನ ಗೋ ಶಾಲೆಗೆ ಸೇರಿಸುವ ಪದ್ಧತಿ ಈಗಲೂ ಇದೆ ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುದಿಷ್ಟಿರ ಗೋವಿಂದ ದಾಸ್ ಹೇಳಿದ್ದಾರೆ.
ಇಸ್ಕಾನ್ ಸಂಸ್ಥೆ ತಮ್ಮ ಗೋಶಾಲೆಗಳಲ್ಲಿರುವ ಯಾವುದೇ ಕರು ಮತ್ತು ಹಾಲು ಕೊಡದ ಹಸುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.