ಬೆಂಗಳೂರು,ಡಿ.26- ದಂಪತಿಗಳು, ಪ್ರೇಮಿಗಳೇ ಈತನ ಟಾರ್ಗೆಟ್. ಬೆಂಗಳೂರಿನ (Bengaluru) ಪೂರ್ವ ಭಾಗದಲ್ಲಿ ದಂಪತಿಗಳು ಮತ್ತು ಪ್ರೇಮಿಗಳನ್ನು ಇನ್ನಿಲ್ಲದಂತೆ ಕಾಡಿ ಹಣ,ಒಡವೆ ಕಸಿದು ಪರಾರಿಯಾಗುತ್ತಿದ್ದವನನ್ನು ಹಗಲು ರಾತ್ರಿ ಹುಡುಕಿದ ಪೊಲೀಸರು ಕೊನೆಗೂ ಆತನನ್ನು ಜೈಲಿಗಟ್ಟಿದ್ದಾರೆ.
ಹೆಚ್.ಎಸ್.ಆರ್ ಲೇಔಟ್ ಗಣೇಶ ಬಂಧಿತ ಆರೋಪಿಯಾಗಿದ್ದಾನೆ. ಈ ಆರೋಪಿಯು
ದಂಪತಿಗಳು, ಪ್ರೇಮಿಗಳನ್ನು ಗುರಿಯಾಗಿಸಿ ಅವರನ್ನು ಹಿಂಬಾಲಿಸುತ್ತಿದ್ದ. ಅವರು ತಮ್ಮ ಮನೆಗಳಿಗೆ ಹೋಗುತ್ತಿದ್ದಂತೆ,ಬಲವಂತವಾಗಿ ಒಳಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿ ಹಣ,ಚಿನ್ನಾಭರಣಗಗಳು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುವುದು ಹಾಗೂ ಅನ್‍ಲೈನ್ ಮೂಲಕ ಎ.ಟಿ.ಎಂ ನಿಂದ ಹಣವನ್ನು ತನ್ನ ಅಕೌಂಟ್‍ಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ.
ಹೆಚ್ ಎಸ್ ಆರ್ ಲೇಔಟ್ ನಲ್ಲಿ ಸುಲಿಗೆ ಕೃತ್ಯ ನಡೆದಿದ್ದು,ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಹಿರಿಯ ಅಧಿಕಾರಿಗಳು, ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ವಿಶೇಷ ತಂಡವು ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಿಂದೆ ಹುಳಿಮಾವು ಠಾಣೆಯ ರಾಬರಿ ಮಡಿವಾಳದಲ್ಲಿ ಸುಲಿಗೆ, 2 ಡಕಾಯಿತಿ ಪ್ರಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ.
ಅಲ್ಲದೆ 2023ನೇ ಸಾಲಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ-1 ರಾಬರಿ ಮತ್ತು 1 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಅಲ್ಲದೆ ಬೆಳಂದೂರು ಪೊಲೀಸ್ ಠಾಣೆಯ-1 ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರೆದಿದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿ.ಕೆ.ಬಾಬಾ ರವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು.