ಹಾಸನ (Hassan) ಲೋಕಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ರಾಜಕೀಯ ಕರ್ಮಭೂಮಿ. ಜಿದ್ದಾಜಿದ್ದಿನ ರಾಜಕಾರಣಕ್ಕೆ ಮತ್ತೊಂದು ಹೆಸರು ಹಾಸನ (Hassan).
ಜನತಾ ಪರಿವಾರದಿಂದ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ನಿಂದ ಮಾಜಿ ಸಚಿವ ದಿವಂಗತ ಪುಟ್ಟಸ್ವಾಮಿಗೌಡ ಅವರ ನಡುವಿನ ಹಣಾಹಣಿಗೆ ಹೆಸರಾದ ಕ್ಷೇತ್ರ. ಹಾಸನ ಲೋಕಸಭಾ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರ ಎಂದೇ ಖ್ಯಾತಿ ಪಡೆದಿದೆ. ದೇಶಕ್ಕೆ ಪ್ರಧಾನಿಯನ್ನು ನೀಡಿದ ಜಿಲ್ಲೆ ಇದು. ಹಾಗೆಯೇ ರೈತ ಹಾಗೂ ದಲಿತ ಚಳವಳಿಯನ್ನು ಗಟ್ಟಿಯಾಗಿ ಕಟ್ಟಿದ ಹೆಗ್ಗಳಿಕೆ ಹಾಸನದ್ದು. ಹಾಸನ ಜಿಲ್ಲೆ ಪ್ರವಾಸೋದ್ಯಮಕ್ಕೂ ಹೆಸರಾಗಿದೆ.
ಈಗ ಈ ಕ್ಷೇತ್ರ ಸಾಂಪ್ರದಾಯಿಕ ಎದುರಾಳಿಗಳ ಮೂರನೇ ತಲೆಮಾರಿನ ಸ್ಪರ್ಧೆಯ ಅಖಾಡವಾಗಿದೆ.
ವಯಸ್ಸಿನ ಕಾರಣಕ್ಕೆ ಅವರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಬದಲಿಗೆ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಇವರಿಗೆ ಎದುರಾಳಿಯಾಗಿ ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ ಈ ಮೂಲಕ ಹಾಸನ ಕ್ಷೇತ್ರ ಮೂರನೇ ತಲೆ ಮಾರಿನ ಕದನಕ್ಕೆ ಅಣಿಯಾಗುತ್ತಿದೆ.
ಕ್ಷೇತ್ರದ ಇತಿಹಾಸವನ್ನು ನೋಡಿದಾಗ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ಇದು ಜೆಡಿಎಸ್ ನ ಭದ್ರಕೋಟೆಯಾಗಿದೆ.
ಕಳೆದ 2004, 2009 ಹಾಗೂ 2014ರವರೆಗೆ ಇಲ್ಲಿ ದೇವೇಗೌಡರು ಸತತವಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿಸಿದರು.
ಕಳೆದ 2019ರಲ್ಲಿ ಇಲ್ಲಿ ದೇವೇಗೌಡರು ಈ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಿಗೆ ವಲಸೆ ಹೋಗಿದ್ದರು.
ತನ್ನ ತಾತ ಬಿಟ್ಟುಕೊಟ್ಟ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ . ಒಂದು ವಿಶೇಷ ಗಮನಿಸಬೇಕು. 2009ರ ಲೋಕಸಭೆ Electionಯಲ್ಲಿ ಕಾಂಗ್ರೆಸ್ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ ಅಂದು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದು ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದವು.
ಪ್ರಜ್ವಲ್ ರೇವಣ್ಣ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಮಾಜಿ ಸಚಿವ ಎ ಮಂಜು ಅವರು ಪ್ರಬಲ ಪೈಪೋಟಿ ನೀಡಿದ್ದರು. ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿ ಬಿಜೆಪಿ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಆದರೆ 1999ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಸುಶೀಲಾ ಶಿವಪ್ಪ ಅವರು ಎರಡನೇ ಸ್ಥಾನ ಗಳಿಸಿದ್ದರು. ಇದನ್ನು ಬಿಟ್ಟರೆ 2019ರಲ್ಲಿ ಬಿಜೆಪಿಯ ಮಂಜು ಎರಡನೇ ಸ್ಥಾನದಲ್ಲಿದ್ದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಹೀಗಾಗಿ ಹಾಸನದಲ್ಲಿ ಬಿಜೆಪಿ ಈ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
2008 ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ಯಿಂದಾಗಿ ಕ್ಷೇತ್ರದ ಭೌಗೋಳಿಕ ಚಿತ್ರಣ ಕೊಂಚ ಬದಲಾವಣೆಯಾಗಿದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ ಇದರ ಜೊತೆಗೆ ಹಾಸನ ಜಿಲ್ಲೆಯ ಶ್ರವಣ ಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳು ಹಾಸನ ಲೋಕಸಭಾ ಕ್ಷೇತ್ರದಲ್ಲಿವೆ.
ಈ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಡೂರು ಮತ್ತು ಅರಸೀಕೆರೆಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಹೊಳೆನರಸೀಪುರ, ಅರಕಲಗೋಡು, ಹಾಸನ ಮತ್ತು ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರೆಂದು ಸಕಲೇಶಪುರ ಮತ್ತು ಬೇಲೂರಿನಲ್ಲಿ ಬಿಜೆಪಿ ಶಾಸಕರು ಇದ್ದಾರೆ.
ಮೇಲ್ನೋಟದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಬಿಗಿಹಿಡಿತ ಹೊಂದಿದೆ ಎಂದು ಕಂಡು ಬರುತ್ತಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆಗಳು ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಜೊತೆ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಂಡಿರುವ ಅಂಶ ಮತದಾನದ ಚಿತ್ರಣವನ್ನೇ ಬದಲಾಯಿಸುವ ಮಟ್ಟಿಗೆ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 31 ವರ್ಷದ ಶ್ರೇಯಸ್ ಪಟೇಲ್ ಅವರು, ರೇವಣ್ಣ ಅವರಿಗೆ ನಡುಕ ಹುಟ್ಟಿಸಿದ್ದರು. ಕೇವಲ 3152 ಮತಗಳ ಅಂತರದಲ್ಲಿ ಸೋತಿದ್ದ ಶ್ರೇಯಸ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿರುವುದು ಅಖಾಡಕ್ಕೆ ಭರ್ಜರಿ ರಂಗು ತರುವಂತೆ ಮಾಡಿದೆ.
ಜೆ ಡಿ ಎಸ್ ನ ಭದ್ರಕೋಟೆ ಎಂಬ ಶ್ರೀರಕ್ಷೆಯೊಂದಿಗೆ ಕಣದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಅವರ ತಂದೆ ಮಾಜಿ ಸಚಿವ ಎಚ್ ಡಿ ರೇವಣ್ಣ ಬೆಂಗಾವಲಾಗಿ ನಿಂತಿದ್ದಾರೆ. ಇದರ ಜೊತೆಗೆ ಅವರ ಚಿಕ್ಕಪ್ಪ ಎಚ್ ಡಿ ಕುಮಾರಸ್ವಾಮಿ ನೆರೆಯ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವುದು ಪ್ರಜ್ವಲ್ ಗೆ ಆನೆ ಬಲ ತಂದುಕೊಟ್ಟಂತಾಗಿದೆ.
ಒಂದು ಬಾರಿ ಸಂಸದರಾಗಿ ದೊಡ್ಡ ಪ್ರಮಾಣದಲ್ಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಪ್ರಜ್ವಲ್ ಅವರೊಂದಿಗೆ ಕ್ಷೇತ್ರದಲ್ಲಿರುವ ಜೆಡಿಎಸ್ ನ ಹಿರಿಯ ನಾಯಕರ ಸಂಬಂಧ ಅಷ್ಟಕಷ್ಟೇ. ಇನ್ನು ಬಿಜೆಪಿಯಲ್ಲಿ ಜಿಲ್ಲೆಯ ಮೊದಲ ಶ್ರೇಣಿಯ ನಾಯಕರು ಪ್ರಜ್ವಲ್ ಪರವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವುದು ಅನುಮಾನ.
ಒಗ್ಗಟಿನ ಕೊರತೆ ಇದ್ದರೂ ಕುಮಾರಸ್ವಾಮಿಯವರ ಸ್ಪರ್ಧೆ ಮತ್ತು ರೇವಣ್ಣ ದಂಪತಿಗಳು ತಮ್ಮ ಪುತ್ರನ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಾದ್ಯಂತ ಪ್ರಚಾರ ಮಾಡುತ್ತಿರುವುದು ಪ್ರಜ್ವಲ್ ಪರವಾಗಿ ಅಲೆ ಏಳುವಂತೆ ಕಂಡುಬರುತ್ತದೆ. ಆದರೆ ಬಿಜೆಪಿ ನಾಯಕರಾದ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಎ.ಟಿ. ರಾಮಸ್ವಾಮಿ ಅಸಮಾಧಾನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ತೆಂಗು ಬೆಳೆಗಾರರ ಸಮಸ್ಯೆ, ಆಲೂಗಡ್ಡೆಗೆ ಪದೇ ಪದೇ ಕಾಡುತ್ತಿರುವ ರೋಗ, ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರ ಸ್ಥಾಪನೆಯಲ್ಲಿ ನಡೆದ ಗೊಂದಲಗಳು ಜೆಡಿಎಸ್ ಬಿಜೆಪಿ ಮೈತ್ರಿಕೂಟಕ್ಕೆ ದೊಡ್ಡ ಸವಾಲು ತಂದು ಕೊಡುವ ರೀತಿಯಲ್ಲಿ ಕಾಣಿಸುತ್ತದೆ.
ಮೈತ್ರಿಯಿಂದ ಅಲ್ಪಸಂಖ್ಯಾತ ಮತ್ತು ದಲಿತ ಮತಗಳು ದೊಡ್ಡ ಪ್ರಮಾಣದಲ್ಲಿಯೇ ಜೆಡಿಎಸ್ ನಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತವೆ.
ದಿವಂಗತ ಪುಟ್ಟಸ್ವಾಮಿಗೌಡ ಅವರ ನಿಧನ ನಂತರ ಅವರ ಕುಟುಂಬದ ಯಾವುದೇ ಸದಸ್ಯರು ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ ಎನ್ನುವ ಅಂಶ ಶ್ರೇಯಸ್ ಪಟೇಲ್ ಪರ ಅನುಕಂಪವಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದ್ದು ಇದನ್ನೇ ಕಾಂಗ್ರೆಸ್ ಪ್ರಮುಖವಾಗಿ ಚುನಾವಣೆಯಲ್ಲಿ ಬಳಸುತ್ತಿದೆ.
ಒಕ್ಕಲಿಗ ಸಮುದಾಯದ ಮತಗಳು ಅತ್ಯಂತ ನಿರ್ಣಾಯಕ ಎನಿಸಲಿವೆ. ಅಲ್ಪಸಂಖ್ಯಾತ ಮತ್ತು ದಲಿತ ಮತಗಳ ಹಿಡಿ ಗಂಟಿನೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದ್ದು ಕುರುಬ ಸಮುದಾಯದ ಮತಗಳು ಕೂಡ ಕಾಂಗ್ರೆಸ್ಸಿಗೆ ಖಂಡಿತ ಬುತ್ತಿ.
ಬಹುತೇಕ ಕ್ಷೇತ್ರದಾದ್ಯಂತ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲದ ಹೋರಾಟ ನಡೆಸುತ್ತಿದ್ದು ಯಾರೇ ಗೆಲುವು ಸಾಧಿಸಿದರು ಕೂಡ ಗೆಲುವಿನ ಅಂತರ ಕೆಲವೇ ಸಾವಿರ ಮತಗಳು ಮಾತ್ರ.
2 Comments
вывод из запоя в стационаре воронежа vyvod-iz-zapoya-v-stacionare.ru .
вывод из запоя в санкт-петербурге вывод из запоя в санкт-петербурге .