ಬೆಂಗಳೂರು,ಮೇ.30- ನಗರದ ಕೆಂಗೇರಿ ಬಳಿ ಮೆಮೋ ರೈಲು ಕೆಟ್ಟು ನಿಂತಿದ್ದು,ಕೆಲಕಾಲ ಪ್ರಯಾಣಿಕರು ಪರದಾಡುವಂತಾಗಿತ್ತು.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮೆಮೋ ರೈಲಿನ ಇಂಜಿನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆ ರೈಲು ನಿಲುಗಡೆಗೊಂಡು 1 ಗಂಟೆಯಿಂದ ನಿಂತಲ್ಲೇ ನಿಂತಿದ್ದು ಪ್ರಯಾಣಿಕರು ಪರದಾಡಿ ಸಿಕ್ಕ ಸಿಕ್ಕ ವಾಹನಗಳಲ್ಲಿ ತೆರಳಿದ್ದಾರೆ.
ಇಂಜಿನ್ ಬದಲಿಸಿದ ಅಧಿಕಾರಿಗಳು ರೈಲು ಚಲಾಯಿಸಲು ಅನುವು ಮಾಡಿಕೊಟ್ಟಿದ್ದು. ಮೆಜೆಸ್ಟಿಕ್ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬೇರೆ ರೈಲು ಓಡಾಡಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಯಾತ್ರಾ ರೈಲು ಪ್ರಾರಂಭ:
ಶ್ರೀ ರಾಮನ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಜೂನ್ 21 ರಂದು ವಿಶೇಷ ಪ್ರವಾಸಿ ರೈಲಿನ ಮೂಲಕ 18 ದಿನಗಳ ‘ಶ್ರೀ ರಾಮಾಯಣ ಯಾತ್ರೆ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 21 ರಂದು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುವ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ಮೂಲಕ ರಾಮಾಯಣ ಸರ್ಕ್ಯೂಟ್‌ನಲ್ಲಿ ಪ್ರವಾಸಕ್ಕಾಗಿ ಬುಕ್ಕಿಂಗ್ ನಡೆಯುತ್ತಿದೆ
Previous Articleಕೈ ನೋವೆಂದು ಆಸ್ಪತ್ರೆ ಸೇರಿದ ಯುವತಿ ಶವವಾಗಿ ಮನೆಗೆ!
Next Article ಅಪಘಾತಕ್ಕೆ ಬಲಿ