ಬೆಂಗಳೂರು, ಜೂ.29-ರಾಜ್ಯದಲ್ಲಿ ಖಾಲಿಯಿರುವ ಸುಮಾರು ಎರಡು ಸಾವಿರ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ನಿಗಮ ವತಿಯಿಂದ ನಿರ್ಮಿಸಿರುವ ಜಯನಗರ ಅಗ್ನಶಾಮಕ ಠಾಣೆ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಎರಡು ಸಾವಿರ ಹುದ್ದೆಗಳ ಭರ್ತಿಯಿಂದ ಸಿಬ್ಬಂದಿಯ ಕೊರತೆ ನಿವಾರಣೆಯಾಗಲಿದೆ
ಎಂದರು.
ರಾಜ್ಯದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಆಗ್ನಿಶಾಮಕ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕ ಗುಣಮಟ್ಟ ಹಾಗು ತಂತ್ರಜ್ಞಾನವನ್ನು ಆಗ್ನಿಶಾಮಕ ಠಾಣೆಗಳಿಗೆ ಅಳವಡಿಸಲಾಗುವುದು ಎಂದರು.
ಹೊಸ ಆಗ್ನಿಶಾಮಕ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅತಿ ಎತ್ತರದ ಕಟ್ಟಡಗಳು ಬೃಹತ್ ಅಪಾರ್ಟ್ಮೆಂಟ್ ಗಳಲ್ಲಿ ಆಗ್ನಿ ಆಕಸ್ಮಿಕ ಸಂಭವಿಸಿದರೆ ಅದನ್ನು ತಡೆಯಲು ವಿದೇಶಿ ಮಾದರಿ ಯಂತ್ರಗಳನ್ನು ಖರೀದಿಸಿ ನಗರದಲ್ಲಿರಸಲಾಗುವುದು ಎಂದರು.
ಜನತೆಯ ಪ್ರಾಣ ಹಾಗು ಆಸ್ತಿ ರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲಾ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು.
ಅಗ್ನಿಶಾಮಕ ಇಲಾಖೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ವಿಶೇಷ ಆದ್ಯತೆ ನೀಡುತ್ತದೆ ಹಾಗು ಹೆಚ್ಚಿನ ಅನುದಾನ ಒದಗಿಸಲಾಗುತ್ತದೆ ಎಂದರು.
ಶಾಸಕ ಶರವಣ,ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ ಹೆಚ್ಚು ವರಿ ಪೊಲೀಸ್ ಮಹಾ ನಿರ್ದೇಶಕರಾದ ಶರತ್ ಚಂದ್ರ,ಹರಿಶೇಖರನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Previous Articleಕನ್ಹಯ್ಯ ಹತ್ಯೆ ತನಿಖೆ ಆರಂಭಿಸಿದ ಎನ್ಐಎ
Next Article ಪತ್ನಿ ಮಕ್ಕಳ ಕಣ್ಣೆದುರೆ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ