ಉದಯಪುರ (ರಾಜಸ್ಥಾನ) : ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಉದಯಪುರದ ಐಜಿ, ಎಸ್ ಪಿ ಸೇರಿದಂತೆ ಸುಮಾರು 32 ಹಿರಿಯ ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರವಾದಿ ಮುಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಇಬ್ಬರು ದಾಳಿಕೋರರು ಉದಯಪುರದಲ್ಲಿ ಟೈಲರ್ ಅನ್ನು ಹತ್ಯೆ ಮಾಡಿದ್ದರು. ಈ ಕುರಿತಂತೆ ಟೈಲರ್ ಜೀವ ಬೆದರಿಕೆ ಕುರಿತಂತೆ ಪೊಲೀಸರಿಗೆ ದೂರು ನೀಡಿದರೂ ಭದ್ರತೆ ಒದಗಿಸದ ಹಿನ್ನೆಲೆಯಲ್ಲಿ ಉದಯಪುರ ಪೊಲೀಸರು ಭಾರೀ ಟೀಕೆಗೆ ಗುರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬೇರೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಟೈಲರ್ ಕನ್ಹಯ್ಯಾ ಲಾಲ್ನನ್ನು ಇಬ್ಬರು ವ್ಯಕ್ತಿಗಳು ಜೂ.28ರಂದು ಹತ್ಯೆ ಮಾಡಿ ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಪ್ರಕರಣ ಸಂಬಂಧ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ನನ್ನು ಬಂಧಿಸಲಾಗಿದೆ. ಆರೋಪಿಗಳು ವಿಡಿಯೋ ಮಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದ್ದರು.
ಕೇಂದ್ರ ಗೃಹ ಸಚಿವಾಲಯವು ಸೂಕ್ಷ್ಮ ಪ್ರಕರಣದ ತನಿಖೆಯನ್ನು ದೇಶದ ಉನ್ನತ ಭಯೋತ್ಪಾದನಾ ವಿರೋಧಿ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ.
Previous Articleಆಷಾಢಮಾಸದ ಹಿನ್ನೆಲೆ ಟೈಟ್ ಸೆಕ್ಯುರಿಟಿ
Next Article ಡೊಳ್ಳು ಕಲಾವಿದರ ಕಥೆ ವ್ಯಥೆ