ಇಂದು ಬೆಳಗ್ಗೆ ಉಪೇಂದ್ರ ನಟಿಸಿ, ನಿರ್ದೇಶನದ ಮಾಡುತ್ತಿರುವ ಹೊಸ ಸಿನಿಮಾ ಮುಹೂರ್ತ ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ನಟ ಉಪೇಂದ್ರ, ನಿರ್ಮಾಪಕರಾದ ಜಿ.ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್, ಲಹರಿ ವೇಲು ಮತ್ತು ಸಹ ನಿರ್ಮಾಪಕರಾದ ನವೀನ್ ಮನೋಹರನ್ ಸೇರಿದಂತೆ ಸಿನಿಮಾದ ತಂಡದ ಬಹುತೇಕರು ತಮ್ಮ ಸಿನಿಮಾದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಆಗಮಿಸಿದ್ದರು. ರಿಯಲ್ ಸ್ಟಾರ್ ಉಪ್ಪಿ ಸರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ಕೋರಿದರು
ಕಾರ್ಯಕ್ರಮಕ್ಕೆ ಹಿರಿಯ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಅತಿಥಿಗಳಾಗಿ ಆಗಮಿಸಿದ್ದರು. ನೆಚ್ಚಿನ ನಟ ಉಪೇಂದ್ರ ಅವರ ಬಗ್ಗೆ ಅತಿಥಿಗಳೆಲ್ಲ ಮಾತನಾಡಿದರು.