Bengaluru
ಮಹಾನಗರ ಬೆಂಗಳೂರು ಜನತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಅವರು ನಗರದ ಸಣ್ಣ ನಿವೇಶನಾದಾರರಿಗೆ ಸಂಕ್ರಾಂತಿ ಕೊಡುಗೆ ಘೋಷಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್ ಬ್ಯಾಕ್ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಇಲಾಖೆಯ ಅಧಿಕಾರಿಗಳು ಈ ಕುರಿತಂತೆ ಸುದೀರ್ಘ ಸಭೆ ನಡೆಸಿ ಅಂತಿಮವಾಗಿ ಆದೇಶ ಹೊರಡಿಸಲಾಗಿದೆ. ಈ ಮೊದಲು ಬೆಂಗಳೂರಿನಲ್ಲಿ ನಿರ್ಮಾಣವಾಗುವ ಮನೆಗಳಿಗೆ 12ಮೀ ವರೆಗೆ ಅಂದರೆ 8 ಅಡಿಯಿಂದ 40 ಅಡಿ ವರೆಗೆ ಸೆಟ್ ಬ್ಯಾಕ್ ಬಿಡಬೇಕಾಗಿತ್ತು.
ಆದರೆ ಇದೀಗ ಕಟ್ಟಡ ನಿರ್ಮಾಣ ಬೈಲಾ ಗೆ ತಿದ್ದುಪಡಿ ಮಾಡಲಾಗಿದೆ ಪರಿಷ್ಕೃತ ಆದೇಶದಲ್ಲಿ ಸೆಟ್ ಬ್ಯಾಕ್ ಕಡಿತ ಹಾಗೂ ವಿನಾಯಿತಿ ನೀಡಲಾಗಿದೆ.ಈ ಮೊದಲು ಕಟ್ಟಡದ ನಾಲ್ಕು ಬದಿಗಳಲ್ಲಿ ಸೆಟ್ ಬ್ಯಾಕ್ ಬಿಡಬೇಕಾಗಿತ್ತು. ಪರಿಷ್ಕೃತ ನಿಯಮಾವಳಿ ಪ್ರಕಾರ ಕಟ್ಟಡದ ಯಾವುದಾದರೂ ಒಂದು ಬದಿಯಲ್ಲಿ ಸೆಟ್ ಬ್ಯಾಕ್ ಬಿಟ್ಟರೆ ಸಾಕು. ಉಳಿದ ಮೂರು ಕಡೆಗಳಲ್ಲಿ ಯಾವುದೇ ಸೆಟ್ ಬ್ಯಾಕ್ ಬಿಡುವ ಅನಿವಾರ್ಯ ಇಲ್ಲ.
600 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡುವವರು ಕೇವಲ 0.60ಮೀ ಅಂದರೆ 2 ಅಡಿ ಮಾತ್ರ ಸೆಟ್ ಬ್ಯಾಕ್ ಬಿಡಬೇಕು.
600 ಚದರ ಅಡಿ ಮೇಲ್ಪಟ್ಟು 1,500 ಚದರ ಅಡಿ ವರೆಗಿನ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಸೆಟ್ ಬ್ಯಾಕ್ ಪ್ರಮಾಣವನ್ನು 0.70ಮೀ, ಅಂದರೆ 2.5 ಅಡಿಗೆ ಇಳಿಕೆ ಮಾಡಲಾಗಿದೆ.
1,500 ಚದರ ಅಡಿ ಮೇಲ್ಪಟ್ಟು 2,500 ಚದರ ಅಡಿ ವಿಸ್ತೀರ್ಣದವರೆಗಿನ ಜಾಗದ ಮನೆಗಳಿಗೆ ಎಲ್ಲಾ ಬದಿಯಲ್ಲೂ ಕನಿಷ್ಠ 0.80ಮೀ ಅಂದರೆ 3 ಅಡಿ ಸೆಟ್ ಬ್ಯಾಕ್ ಬಿಡುವುದು ಕಡ್ಡಾಯವಾಗಿದೆ
2,500 ಚದರ ಅಡಿಯಿಂದ 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ ಶೇಕಡ 8 ರಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯವಾಗಿದೆ.
Previous Articleಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
Next Article ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿದ್ದು ಹೇಗೆ ಗೊತ್ತಾ?


2 Comments
casino siteleri casino siteleri
vdcasino güncel adres vdcasino