ಬೆಂಗಳೂರು,
ಈ ಸ್ವಯಂ ಘೋಷಿತ ಮಾಂತ್ರಿಕ ಅಂತಿಂಥ ವಂಚಕನಲ್ಲ.ಈತನ ಹೆಸರು ಮೂರ್ತಿ ಅಂತಾ ಈತ ಕೇರಳದ ಮಹಾನ್ ಮಾಂತ್ರಿಕರಿಂದ ವಶೀಕರಣ ವಿದ್ಯೆ ಕಲಿತಿದ್ದೇನೆ ಅದನ್ನು ಉಡದ ಜನನಾಂಗಗಳಿಗೆ ಮಂತ್ರಿಸಿ ಕೊಡುತ್ತೇನೆ ಇದರಿಂದ ಪ್ರೇಮಿಗಳ ನಡುವಿನ ಕಲಹ, ವೈಮನಸ್ಸು ಎಲ್ಲವೂ ನಿವಾರಣೆಯಾಗಿ ಅನ್ಯೋನ್ಯ ಸಂಬಂಧ ಏರ್ಪಡುತ್ತದೆ ಎಂದು ಹೇಳುತ್ತಿದ್ದಾನೆ.
ಇವುಗಳಿಗೆ ವಶೀಕರಣ ಮಾಂತ್ರಿಕ ಶಕ್ತಿಯಿದೆ ಎಂದು ನಂಬಿಸಿ ಉಡದ ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ. ಆನ್ ಲೈನ್ ನಲ್ಲಿ ಜಾಹೀರಾತು ನೀಡುತ್ತಿದ್ದ ಇದನ್ನು ನಂಬಿ ಸಂಪರ್ಕಿಸಿದವರಿಗೆ ಪ್ರತಿ ಉಡದ ಜನನಾಂಗವನ್ನು ಹತ್ತು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಈತನ ಜಾಹೀರಾತು ನಂಬಿ ಆನೇಕ ಮಂದಿ 10 ಸಾವಿರ ರೂಪಾಯಿ ಪಾವತಿಸಿದ್ದಾರೆ. ಅವರಿಗೆಲ್ಲ ಈತ ಉಡದ ಜನನಾಂಗ ಎಂದು ಹೇಳಿ ಹಲ್ಲಿಯ ಜನನಾಂಗ ನೀಡಿ ವಂಚಿಸಿದ್ದಾನೆ.
ಈತ ಆನ್ ಲೈನ್ ನಲ್ಲಿ ಜಾಹೀರಾತು ನೀಡುವ ವೇಳೆ ತನ್ನ ಅಕ್ಕ ಪಕ್ಕದಲ್ಲಿ ಅನೇಕ ವನ್ಯ ಪ್ರಾಣಿಗಳನ್ನು ಹಾಕಿಕೊಂಡಿದ್ದಾನೆ ಹಾಗೂ ಉಡಗಳನ್ನು ಕೈಯಲ್ಲಿ ಹಿಡಿದು ತೋರಿಸಿ ವಿವರಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಗಮನಿಸಿದ ಪ್ರಾಣಿ ದಯಾ ಸಂಘದ ಸದಸ್ಯರು ಈತನ ಅಸಲಿಯತ್ತನ್ನು ಪರಿಶೀಲಿಸಲು ಮುಂದಾಗಿದ್ದಾರೆ ತಮ್ಮ ತಂಡದ ಸದಸ್ಯನೊಬ್ಬ ನನಗೆ ಹಲವಾರು ಸಮಸ್ಯೆಗಳಿವೆ ನನ್ನ ಪ್ರೇಯಸಿ ನನ್ನನ್ನು ತೊರೆದು ಹೋಗಿದ್ದಾಳೆ ಹೇಗಾದರೂ ಮಾಡಿ ಆಕೆಯನ್ನು ವಶೀಕರಣ ಮಾಡಿಕೊಡಿ ಎಂದು ಈತನಿಗೆ ಮನವಿ ಮಾಡಿದ್ದಾರೆ.
ಆತನೊಂದಿಗೆ ಮಾತನಾಡಿದ ವೇಳೆ ಪ್ರಾಣಿ ದಯಾ ಸಂಘದ ಸದಸ್ಯರು ತಮ್ಮ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಹೀಗಾಗಿ ಆತ ನನ್ನನ್ನು ಖುದ್ದಾಗಿ ಭೇಟಿ ಮಾಡುವಂತೆ ಆಹ್ವಾನ ನೀಡಿದ್ದಾರೆ ಅದರಂತೆ ಅಲ್ಲಿಗೆ ಹೋದಾಗ ಆತನ ಬಳಿಯಲ್ಲಿ ಅನೇಕ ಅಪರೂಪದ ವನ್ಯ ಪ್ರಾಣಿಗಳು ಇರುವುದು ಪತ್ತೆಯಾಗಿದೆ.
ಈ ಬಗ್ಗೆ ಅವರು ಅರಣ್ಯ ಇಲಾಖೆಯ ತನಿಕ ತಂಡಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಆನಂತರ ಈ ವಿಷಯವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ವರದಿ ಮಾಡಲಾಯಿತು. ಇದಾದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಡಿ ಆರ್ ಐ ಅಧಿಕಾರಿಗಳು ದಾಳಿ ಮಾಡಿ, ಸ್ವಯಂ ಘೋಷಿತ ಮಾಂತ್ರಿಕ ಬಂಧನ ಮಾಡಿದ್ದಾರೆ.
ಈ ವೇಳೆ ಈತ ಸಾಮಾಜಿಕ ಜಾಲತಾಣದಲ್ಲಿ ಮೃದು ಹವಳ ಮತ್ತು ಇತರ ವನ್ಯಜೀವಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದ, ಅದೃಷ್ಟ ಮತ್ತು ಸಮೃದ್ಧಿಗಾಗಿ ಮೃದುವಾದ ಹವಳವನ್ನು ತಾಲಿಸ್ಮನ್ ಆಗಿ ಮಾರಾಟ ಮಾಡುತ್ತಿದ್ದ. ಅನೇಕರು ಇದರ ಮಾರಾಟದ ಹಕ್ಕನ್ನು ಪಡೆದಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
ಬಂಧಿತ ಮೂರ್ತಿ ಈ ವನ್ಯಜೀವಿ ಉತ್ಪನ್ನಗಳನ್ನು ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಸಂಪರ್ಕಗಳ ಮೂಲಕ ಪಡೆಯುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಸುಮಾರು 25 ಸಾವಿರ ಮಂದಿ ಈತನ ಭಕ್ತರಾಗಿದ್ದರು. ಅವರಲ್ಲಿ ಹಲವರು ಪ್ರೀತಿ ಅಥವಾ ವೈಯಕ್ತಿಕ ಸಮಸ್ಯೆಗಳಿಗಾಗಿ ಮೂರ್ತಿಯನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.
ದಾಳಿಯ ಸಮಯದಲ್ಲಿ, ಅಧಿಕಾರಿಗಳು 206 ಮಾನಿಟರ್ ಹಲ್ಲಿ ಜನನಾಂಗಗಳು, 1.5 ಕೆಜಿ ಮೃದು ಹವಳ, ಹುಲಿ ಚರ್ಮ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರ್ತಿ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
Previous Articleಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಯಾರು ಗೊತ್ತಾ..?
Next Article ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ಡೇಟ್ ಫಿಕ್ಸ್

