ಚಿತ್ರನಟ ಡಾಲಿ ಧನಂಜಯ್ ಬಿರಿಯಾನಿ ಹೊಟೇಲ್ ಒಂದರಲ್ಲಿ ಮಟನ್ ಬಿರಿಯಾನಿ ತಿನ್ನುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನ್ಮತಃ ಲಿಂಗಾಯತರಾದ ಕಾರಣ ಅವರು ಮಾಂಸಾಹಾರ ಸೇವಿಸುತ್ತಿರೋದೇ ದೊಡ್ಡ ಅಪರಾಧ ಎನ್ನುವಂತೆ ಬಹಳ ಜನರು ಟ್ರೋಲ್ ಮಾಡ್ತಿದ್ದಾರೆ. ಇದೇ ವೇಳೆ ಅವರು ಮಟನ್ ತಿಂದರೇನು ತಪ್ಪು ಅಂತನೂ ಕೆಲವರು ಪ್ರತಿ ಸವಾಲು ಹಾಕ್ತಿದ್ದಾರೆ. ಅಸಲಿಗೆ ಒಬ್ಬ ನಟನಾಗಿ ಪ್ರೇಕ್ಷಕರು ಪ್ರೀತಿ ತೋರತೊಡಗಿದಾಗ ಕಲಾವಿದ ಜಾತಿ ಬ್ರಾಕೆಟ್‌ನಿಂದ ಹೊರಬಂದು ಜನರ ಪ್ರತಿನಿಧಿ ಆಗ್ತಾರೆ. ಪ್ರತಿಯೊಬ್ಬರಿಗೂ ಪಬ್ಲಿಕ್ ಲೈಫ್, ಪರ್ಸನಲ್ ಲೈಫ್ ಹಾಗೂ ಸೀಕ್ರೆಟ್ ಲೈಫ್ ಇರುತ್ತೆ ಅಂತ ಇತ್ತೀಚೆಗೆ ಮಲಯಾಳಂ ಸ್ಟಾರ್ ಮೋಹನ್ ಲಾಲ್ ಹೇಳಿದ್ದರು. ಅಂಥ ಒಂದು ಸೀಕ್ರೆಟ್ ಲೈಫ್ ವಿಷಯವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಮಾಂಸಾಹಾರ ಸೇವನೆ ಡಾಲಿ ಅವರ ಸೀಕ್ರೆಟ್ ಲೈಫ್ ಆಗಿರಬಹುದು. ಅದೇನೂ ಅನೈತಿಕ ಸಂಬಂಧ ಅಲ್ಲವಲ್ಲ! ಆದರೂ ಜನ ಯಾಕೆ ಹೀಗಾಡ್ತಾ ಇದಾರೋ ಗೊತ್ತಿಲ್ಲ. ಹಾಗೆ ನೋಡಿದರೆ ವಿಷ್ಣುವರ್ಧನ್ ಜನ್ಮತಃ ಬ್ರಾಹ್ಮಣರಾದರೂ ಮಾಂಸಾಹಾರ ಇಷ್ಟಪಡುವುದಾಗಿ ಹೇಳಿಕೊಂಡಿದ್ದರು. ಮಂಡ್ಯ ರಮೇಶ್ ಬ್ರಾಹ್ಮಣರಾದರೂ ಅನೇಕ ಸಿನಿಮಾ ದೃಶ್ಯಗಳಲ್ಲಿ ಮಟನ್ ಸೇವಿಸಿದ್ದಾರೆ. ಡಾ.ರಾಜ್‌ಕುಮಾರ್ ದೇವರ, ಸಂತರ ಪಾತ್ರ ಮಾಡುವಷ್ಟೂ ದಿನ ಮಾಂಸಾಹಾರ ಮುಟ್ಟುತ್ತಿರಲಿಲ್ಲವಂತೆ. ಹಾಗೆ ನೋಡಿದರೆ ಬ್ರಾಹ್ಮಣ-ಲಿಂಗಾಯತ ಮುಂತಾದ ಕಟ್ಟಾ ಸಸ್ಯಾಹಾರ ಸಮುದಾಯದ ಯುವಜನತೆಯಲ್ಲಿ ಕಡಿಮೆ ಎಂದರೂ ಶೇಕಡಾ ಐದಕ್ಕೂ ಹೆಚ್ಚು ಮಂದಿ ಮಾಂಸಾಹಾರ ಇಷ್ಟಪಡುತ್ತಾರೆ. ಮಹಾನಗರದ ಬದುಕಲ್ಲಿ ಮಾಂಸಾಹಾರ ಕಾಮನ್. ಇದು ಅವರ ಸೀಕ್ರೆಟ್ ಲೈಫ್. ಹಾಗಂತ ಕಟ್ಟಾ ಸಸ್ಯಾಹಾರ ಪಾಲಿಸೋರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದು ಅವರವರ ಇಷ್ಟ. ಹಾಗಾಗಿ ಡಾಲಿ ಧನಂಜಯ್ ಮಾಂಸಾಹಾರ ತಿಂದಿದ್ದು ದೊಡ್ಡ ತಪ್ಪು ಅಂತ ಅನ್ನಿಸುತ್ತಿಲ್ಲ ಅಂತ ಅನೇಕರು ಹೇಳುತ್ತಿದ್ದಾರೆ. ನೀವೇನಂತೀರಿ?

