ಪುಣೆ,ಜ.28
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರ್ಮಣಕ್ಕೀಡಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 45 ಎಂಬ ಖಾಸಗಿ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ.
ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ವಿಮಾನವನ್ನು ಆವರಿಸಿದ ಪರಿಣಾಮ ಎನ್ ಸಿ ಪಿ ಮುಖಂಡ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ಭದ್ರತಾ ಸಿಬ್ಬಂದಿ ದುರ್ಮರಣಕ್ಕೀಡಾಗಿದ್ದಾರೆ.
ಬಾರಾಮತಿಯಲ್ಲಿ ಏರ್ಪಡಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಮ್ಮ ಆಪ್ತ ಸಿಬ್ಬಂದಿಯ ಜೊತೆಗೆ ಮುಂಬೈನಿಂದ ಎಂದು ಬೆಳಗ್ಗೆ ಅಜಿತ್ ಪವಾರ್ ತೆರಳಿದರು ಈ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಪತನಗೊಂಡಿದೆ.
ಮುಂಬೈನಿಂದ ಬೆಳಗ್ಗೆ 8.10ಕ್ಕೆ ವಿಮಾನ ಬಾರಾಮತಿ ಕಡೆ ಪ್ರಯಾಣ ಮಾಡಿತ್ತು. ಇನ್ನೇನು ಬಾರಾಮತಿಯಲ್ಲಿ ಲ್ಯಾಂಡಿಂಗ್ ಆಗಬೇಕು ಎನ್ನುವಾಗ ಈ ಅಪಘಾತ ಸಂಭವಿಸಿದೆ. 45XR ಮಾದರಿಯ ಸಣ್ಣ ಏರ್‌ಕ್ರಾಫ್ಟ್ ಇದಾಗಿದ್ದು, ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತ್ತು. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಹೊಲದಲ್ಲಿ ಇದು ಅಪಘಾತಕ್ಕೆ ಈಡಾಗಿದೆ. ವರದಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪವಾರ್ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು.
Previous Articleಬೀದಿನಾಯಿಯಿಂದ ‘ಶಾಂತಿದೂತ’ನಾದ ಅಲೋಕಾನ ಅಚ್ಚರಿಯ ಕಥೆ!
Next Article ಸುಟ್ಟು ಕರಕಲಾದ ಖಾಸಗಿ ಬಸ್

