AIMA ನೀಡುವ ವರ್ಷದ ಅತ್ಯಂತ ಉತ್ತಮ ಸಂಸ್ಥೆ ನಿರ್ಮಾತೃ ಪ್ರಶಸ್ತಿಯನ್ನು TVS Motorನ ಅಧ್ಯಕ್ಷರಾದ ಶ್ರೀ ವೇಣು ಶ್ರೀನಿವಾಸನ್ ಅವರಿಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಇಲಾಖೆಯ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ರವರು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಶ್ರೀ ಶ್ರೀನಿವಾಸನ್ ಅವರು, “ಕಳೆದ 40 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಸಾವಿರಾರು ಜನರಿಗೆ ಈ ಪ್ರಶಸ್ತಿಯನ್ನು ಮುಡಿಪಾಗಿಡುತ್ತೇನೆ ಏಕೆಂದರೆ ನಿಜವಾಗಿಯೂ ಅವರು TVS Motor ಅನ್ನು ಒಂದು ಸಂಸ್ಥೆಯಾಗಿ ನಿರ್ಮಿಸಿದ್ದಾರೆ. ಅವರ ಪರವಾಗಿ ಇದನ್ನು ಸ್ವೀಕರಿಸಲು ನಾನು ಆಭಾರಿಯಾಗಿದ್ದೇನೆ. ನಮ್ಮ ಸಂಸ್ಥೆಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದAIMA, ಶ್ರೀ ಸಂಜೀವ್ ಗೋಯೆಂಕಾ ಮತ್ತು ತೀರ್ಪುಗಾರರ ಜೊತೆಗೆ ಪ್ರಶಸ್ತಿಯನ್ನು ನೀಡಿದ ಗೌರವಾನ್ವಿತ ಸಚಿವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
![]()
ಈ ಪ್ರಶಸ್ತಿಯು ಸಂಸ್ಥೆ ಅಥವ ಸಂಸ್ಥೆಯನ್ನು ನಿರ್ಮಿಸುವಲ್ಲಿ ಅಸಾಧಾರಣ ದೂರದೃಷ್ಟಿ ಮತ್ತು ನಾಯಕತ್ವವನ್ನು ಪ್ರದರ್ಶಿಸಿದ ವ್ಯಕ್ತಿಯನ್ನು ಗೌರವಿಸುತ್ತದೆ. ಸಂಸ್ಥೆಯ ಚಾಲನಾ ಶಕ್ತಿಯಾಗಿರುವ ಮತ್ತು ಉದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ.

1 Comment
Spin until regret apologizes in cash – https://atamsulosin.com/betano-casino-2026-bonuses-slots-real-payouts/ , The wheel knows it can’t outrun you anymore .