ಮುಂಬಯಿ,ನ.17- ಮಟನ್ ಸೂಪ್‍ನಲ್ಲಿ ಅನ್ನ ಇರುವುದನ್ನು ನೋಡಿ ಆಕ್ರೋಶಗೊಂಡ ಗ್ರಾಹಕರಿಬ್ಬರು ವೇಟರ್‌ನನ್ನು ಥಳಿಸಿ ಕೊಲೆ ಮಾಡಿರುವ ದುರ್ಘಟನೆ ಪುಣೆಯ ಪಿಂಪಲ್ ಸೌದಾಗರ್ ಪ್ರದೇಶದ ಹೋಟೆಲ್‍ವೊಂದರಲ್ಲಿ ನಡೆದಿದೆ. ಮಂಗೇಶ್ ಪೋಸ್ತೆ (19) ಕೊಲೆಯಾದವರು.
ಪಿಂಪಲ್ ಸೌದಾಗರ್ ಪ್ರದೇಶದ ಹೊಟೇಲ್ ಗೆ ತಡರಾತ್ರಿ ಕುಡಿತದ ಅಮಲಿನಲ್ಲಿ ಬಂದ ಇಬ್ಬರು ಗ್ರಾಹಕರು ಮಟನ್ ಸೂಪ್‍ನ್ನು ಆರ್ಡರ್ ಮಾಡಿದ್ದಾರೆ.
ಮಟನ್ ಸೂಪ್‍ನ್ನು ವೇಟರ್ ಮಂಗೇಶ್ ತಂದು ನೀಡಿದಾಗ ಅದರಲ್ಲಿ ಅನ್ನ ಇರುವುದನ್ನು ನೋಡಿ ಕೋಪಗೊಂಡು ಹೋಟೆಲ್‍ನಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ ಎಂದು ಮಂಗೇಶ್ ಮೇಲೆ ಹಲ್ಲೆ ನಡೆಸುತ್ತಾರೆ.
ಹಲ್ಲೆ ವೇಳೆ ಮಂಗೇಶ್‍ಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಘಟನೆ ವೇಳೆ ಬಿಡಿಸಲು ಬಂದ ಮತ್ತಿಬ್ಬರು ವೇಟರ್‌ಗಳ ಮೇಲೂ ಹಲ್ಲೆ ನಡೆಸಿದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿದೆ.
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳಲ್ಲಿ ಒಬ್ಬನನ್ನು ವಿಜಯ್ ವಾಘಿರೆ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Previous Articleಚಿತ್ರದುರ್ಗದಲ್ಲಿ ಮುರುಗೇಶನ ಲೀಲೆ!
Next Article ಕಾಂಗ್ರೆಸ್ ನಾಯಕಿ ಮನೆ ಮೇಲೆ IT ದಾಳಿ