ಬೆಂಗಳೂರು – ನಾವು ಒಳ್ಳೆ ದೇಶದಲ್ಲಿದ್ದೇವೆ ಡೀಪ್ ಫೇಕ್ ನಂತಹ ಕೃತ್ಯ ನಿಮಗೆ ಎದುರಾದರೆ ಮೌನವಾಗಿರದೆ ಪ್ರತಿಕ್ರಿಯಿಸಿ. ಜನ ಬೆಂಬಲಿಸುತ್ತಾರೆ ಇದು ಸೌತ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ನೀಡಿರುವ ಕರೆ.
ವಿಷಯಗಳು ಸಾಮಾನ್ಯವಲ್ಲ,ಮೌನವಾಗಿರಬೇಡಿ.ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ .ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ.ಆದರೆ ಇದನ್ನು ಮೌನವಾಗಿ ಸಹಿಸಬೇಡಿ ಎಂದಿದ್ದಾರೆ.
ಡೀಪ್‍ಫೇಕ್ ವಿಡಿಯೋ ಬಗ್ಗೆ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮತ್ತೊಮ್ಮೆ ಪೋಸ್ಟ್ ಮಾಡಿರುವ ಅವರು, ಬಹಿರಂಗವಾಗಿಯೂ ಮಾತನಾಡಿದ್ದಾರೆ.
ತಮ್ಮ ಅಭಿನಯದ ಅನಿಮಲ್ ಸಿನಿಮಾದ ಪ್ರಚಾರಕ್ಕಾಗಿ ತಂಡದ ಜತೆ ಹೈದರಾಬಾದ್‍ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ತಮಗೆ ಇಂತಹ ಘಟನೆ ಎದುರಾದಾಗ ನೋವಾಯಿತು. ಆದರೆ, ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಮೊದ ಮೊದಲು ಭಯ ಆಯ್ತು.
ನಾವೇನು ಮಾಡೋಕೆ ಸಾಧ್ಯ ಎಂದುಕೊಂಡೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದರೆ, ಮೊದಲಿಗೆ ಅಮಿತಾಬ್ ಬಚ್ಚನ್ ಸರ್ ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು.ನಂತರಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದರು.
ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದು ಕೊಂಡೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.