ಬೆಂಗಳೂರು.
ಚಿನ್ನದ ನಾಡು ಕೋಲಾರದಲ್ಲಿರುವ Bengaluru ಉತ್ತರ ವಿಶ್ವವಿದ್ಯಾಲಯದ ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್
ಹ್ಯಾಕ್ ಮಾಡಲಾಗಿದೆ.
ಈ ಕುರಿತಾಗಿ ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಕೋಲಾರ ಜಿಲ್ಲಾ ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಪೊಲೀಸರು ಗಿರೀಶ್, ಸಂದೇಶ್ ಮತ್ತು ಸೂರ್ಯ ಎಂಬುವರನ್ನು ಬಂಧಿಸಿದ್ದಾರೆ.
ಆರೋಪಿಗಳು ರಿಜಿಸ್ಟ್ರಾರ್ ತಿಪ್ಪೇಸ್ವಾಮಿ ಅವರ ಲಾಗಿನ್ ಪಿನ್ ಮತ್ತು ಪಾಸ್ವರ್ಡ್ಗಳನ್ನು ದುರುಪಯೋಗಪಡಿಸಿಕೊಂಡು ಪೋರ್ಟಲ್‌ಗೆ ಕನ್ನ ಹಾಕಿದ್ದಾರೆ.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳ ಅಂಕಗಳನ್ನು ತಿದ್ದುವ ದೃಷ್ಟಿಯಿಂದ ಈ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಬೆಳಗಿಗೆ ಬಂದಿದೆ. ಆರೋಪಿಗಳು ಪೋರ್ಟಲ್ ಅನ್ನು ಹ್ಯಾಕ್ ಮಾಡಿದ ನಂತರ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಲು ಆರೋಪಿಗಳು ಪ್ರತಿ ವಿದ್ಯಾರ್ಥಿಯಿಂದ 15 ಸಾವಿರದಿಂದ 20 ಸಾವಿರದವರೆಗೆ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಆರೋಪಿಯೊಬ್ಬ ವಿದ್ಯಾರ್ಥಿಯಿಂದ ಹಣ ಪಡೆಯಲು ಬಂದಿದ್ದಾಗ ಹ್ಯಾಕಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಇದರ ಆಧಾರದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ನಾಪತ್ತೆಯಾಗಿರುವ ಇನ್ನೂ ಹಲವರಿಗಾಗಿ ಹುಡುಕಾಟ ನಡೆಸಿದ್ದಾರೆ.