ಪ್ರತಿಯೊಬ್ಬ ವಿದ್ಯಾರ್ಥಿಗೆ ಎಸ್ ಎಸ್ ಎಲ್ ಸಿ ಒಂದು ಮೈಲಿಗಲ್ಲು. ಈ ಹಂತವನ್ನು ತಲುಪಿದಾಗ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸುಸಂದರ್ಭ ಒದಗಿಬರುತ್ತದೆ.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಂತರ ವಿದ್ಯಾರ್ಥಿಗಳು ತಾವು ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯದಲ್ಲಿ ವೃತ್ತಿಯ ಆಯ್ಕೆಗೆ ಅನುಕೂಲ ಆಗುತ್ತದೆ. ಇಲ್ಲಿ ಮಾಡುವ ಕೋರ್ಸ್‌ಗಳ ಆಯ್ಕೆ ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಗುರಿಗೆ ಸಜ್ಜಾಗಲು ನೆರವಾಗುತ್ತದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ಆರ್ಥಿಕತೆಯ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಪಿಯುಸಿ (ಪದವಿ ಪೂರ್ವ ಶಿಕ್ಷಣ )
- ಪಿಯುಸಿ (ಪದವಿ ಪೂರ್ವ ಶಿಕ್ಷಣ )ವನ್ನು ಆಯ್ಕೆ ಮಾಡಬಹುದು ಇದರಲ್ಲಿ ವಿಜ್ಞಾನ ವಿಭಾಗ ವಾಣಿಜ್ಯ ವಿಭಾಗ ಕಲಾ ವಿಭಾಗಗಳಿವೆ ಇದರಲ್ಲಿ ನಿಮ್ಮ ಆಸಕ್ತಿ ಅನುಗುಣವಾಗಿ ಆಯ್ಕೆ ಮಾಡಬಹುದು.
- ಇದು 2 ವರ್ಷಗಳ ಕೋರ್ಸ್ ಆಗಿರುತ್ತದೆ.
- ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್
- ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ನಂತರ ಅಥವಾ ಪಿಯುಸಿ ನಂತರವೂ ಆಯ್ಕೆ ಮಾಡಬಹುದು. ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಕರ್ನಾಟಕದಲ್ಲಿ ಎಂಟು ಹೊಸ ಡಿಪ್ಲೊಮ ಕೋರ್ಸ್‌ಗಳಿವೆ.
- ಆಟೊಮೇಷನ್ ಮತ್ತು ರೊಬೊಟಿಕ್ಸ್ (Automation and Robotics)
- ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ (Cloud Computing and Big Data)
- ಫುಡ್ ಪ್ರೊಸೆಸಿಂಗ್ ಮತ್ತು ಪ್ರಿಸರ್ವೇಷನ್ (Food processing and preservation)
- ಪ್ರವಾಸೋದ್ಯಮ (Travel and Tourism).
- ಸೈಬರ್ ಭದ್ರತೆ (Cyber security).
- ನಿರ್ದೇಶನ ಮತ್ತು ಚಿತ್ರಕತೆ ರಚನೆ, ಟಿವಿ ಕಾರ್ಯಕ್ರಮಗಳ ನಿರ್ಮಾಣ (Direction Screen Play Writing and TV Production).
- ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security).
- ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ (Alternative Energy Technology)
- ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್)
- ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ನಂತರ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಇದು ಎರಡು ವರ್ಷದ ಕೋರ್ಸ್ ಆಗಿದ್ದು ಈ ಕೋರ್ಸ್ ನಂತರ ಉನ್ನತ ವ್ಯಾಸಂಗವನ್ನು ಮುಂದುವರೆಸಬಹುದು. ಅನೇಕ ಡಿಪ್ಲೊಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಅಲ್ಪಾವಧಿಯ ಕೋರ್ಸ್‌ಗಳು
- ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್.
- ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್‌ಗಳು.
- ಡಿಜಿಟಲ್ ಮಾರ್ಕೆಟಿಂಗ್.
- ಡಿಪ್ಲೊಮ ಇನ್ 2ಡಿ ಮತ್ತು 3ಡಿ ಎನಿಮೇಷನ್.
- ಪ್ರೋಗ್ರಾಮಿಂಗ್ ಲಾಂಗ್ವೆಜ್ ಸರ್ಟಿಫಿಕೇಟ್ ಕೋರ್ಸ್‌ಗಳು.
- ಅರೆವೈದ್ಯಕೀಯ ಕೋರ್ಸ್‌ಗಳು
- ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
- ಡಿಪ್ಲೊಮ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
- ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ ಪೆಕ್ಟರ್
- ಡಿಪ್ಲೊಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ.
6. ಒಂದು ವರ್ಷದ ಕೋರ್ಸ್ ಗಳು
- ಕಂಪ್ಯೂಟರ್ ಆಪರೇಟರ್,
- ಸ್ಟೇನೋಗ್ರಾಫರ್,
- ಪ್ಲಾಸ್ಟಿಕ್ ಪ್ರೊಸೆಸಿಂಗ್ ಆಪರೇಟರ್
- ವೆಲ್ಡರ್.