Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಮೇಶ್ವರಂ ಕೆಫೆ ಸ್ಪೋಟ ಮಾಡಿದ್ದು ಯಾರು ಗೊತ್ತಾ | Rameshwaram Cafe
    Trending

    ರಾಮೇಶ್ವರಂ ಕೆಫೆ ಸ್ಪೋಟ ಮಾಡಿದ್ದು ಯಾರು ಗೊತ್ತಾ | Rameshwaram Cafe

    vartha chakraBy vartha chakraMarch 12, 20242 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಮಾ.12- ಸಿಲಿಕಾನ್ ಸಿಟಿ ವೈಟ್‌ಫೀಲ್ಡ್‌‌ ನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಹತ್ವದ ಪ್ರಗತಿ ಸಾಧಿಸಿದ್ದು,ಈ ದುಷ್ಕೃತ್ಯವೆಸಗಿರುವುದು ಕರ್ನಾಟಕ ಮೂಲದ ವ್ಯಕ್ತಿ ಎನ್ನುವುದು ಪತ್ತೆಯಾಗಿದೆ.
    ರಾಜ್ಯದ ಕರಾವಳಿ ಅಥವಾ ಮಲೆನಾಡು ಮೂಲದ ಈ ಪಾತಕಿಗೆ ಬೆಂಗಳೂರು ಪರಿಚಯ ಚೆನ್ನಾಗಿ ಇತ್ತು. ಆತ ಯಾವ ಸಂಘಟನೆಗೆ ಸೇರಿದವನು ಎಂಬುದೂ ಎನ್ಐಎ ಅಧಿಕಾರಿಗಳಿಗೆ ಗೊತ್ತಾಗಿದೆ.
    ಶಂಕಿತ ಈ ಉಗ್ರ ಹಿಂದೆ ಕಲಘಟಗಿ,ಶಿವನ ಸಮುದ್ರ, ಆಗುಂಬೆ ಗುಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ತರಬೇತಿ ನಡೆಸಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ.

    ಈ ಪಾತಕಿಯನ್ನೊಳಗೊಂಡ ತಂಡ ಅರಣ್ಯದಲ್ಲಿ ಟ್ರಯಲ್ ಬಾಂಬ್ ಸ್ಫೋಟ ನಡೆಸಿರುವ ಮತ್ತು ಸರ್ವೈವಲ್ ಕ್ಯಾಂಪ್ಗಳನ್ನು ನಡೆಸಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ದೊರೆತಿದ್ದು ತನಿಖಾ ತಂಡಗಳ ಕಾರ್ಯಾಚರಣೆ ತೀವ್ರಗೊಂಡಿದೆ.
    ಪಾತಕಿ ಬಾಂಬರ್  ಸ್ಫೋಟದ ದಿನವೇ ಚೆನ್ನೈಯಿಂದ ತಿರುಪತಿಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಬಸ್ ಮೂಲಕ ಬಂದಿದ್ದಾನೆ. ಕೃಷ್ಣ ರಾಜಪುರ ಬಸ್ ನಿಲ್ದಾಣದಲ್ಲಿ ಇಳಿದು ನಂತರ ಆತ ಮಹದೇವಪುರದ ಗ್ರಾಫೈಟ್ ಇಂಡಿಯಾ ಸರ್ಕಲ್ ಗೆ ಬಂದು ಬಸ್ ಬದಲಾವಣೆ ಮಾಡಿದ್ದಾನೆ. ಬಳಿಕ ಬ್ರೂಕ್ ಫೀಲ್ಡ್ ಕಡೆಗಿನ ಬಸ್ ಹತ್ತಿ ರಾಮೇಶ್ವರ ಕೆಫೆಗೆ ಆಗಮಿಸಿದ್ದಾನೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ.

    ಈ ಹಿಂದೆ ಇದೇ ಬಾಂಬ್ ಅನ್ನು ಕುಕ್ಕರ್ ಮತ್ತು ಸ್ಟೀಲ್ ಬಾಕ್ಸ್ನಲ್ಲಿ ಮಾಡಲಾಗುತ್ತಿತ್ತು. ಆದರೆ, ಶಂಕಿತನು ಅತ್ಯಾಧುನಿಕವಾಗಿ ಸಿಲ್ವರ್ ಪೇಪರ್ ಮತ್ತು ಬ್ಯಾಗ್ ಮೂಲಕ ಸಿದ್ಧಪಡಿಸಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.
    ಶಂಕಿತ ಬಾಂಬರ್ ತನಿಖಾ ತಂಡಗಳ ಹಾದಿ ತಪ್ಪಿಸುವ ಸಲುವಾಗಿ ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೇ ಸುತ್ತಿ ಬಳಸಿ ಬಂದು, ಮತ್ತೆ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಆತನ ರಹಸ್ಯ ತಾಣ ಸೇರಿರುವ ಸಾಧ್ಯತೆ ಇದೆ. ಸದ್ಯ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ಹಲವಾರು ಭಾಗದಲ್ಲಿ ಶಂಕಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಊಹಾಪೋಹ:
    ಆದರೆ, ಶಂಕಿತ ಬಾಂಬರ್ ಕರ್ನಾಟಕದವನು ಎಂಬ ವರದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ ಇವುಗಳೆಲ್ಲ ಊಹಾಪೋಹಗಳು ಎಂದಿದ್ದಾರೆ. ಶಂಕಿತ ಕರ್ನಾಟಕದವನು, ಮಲೆನಾಡಿನವನು ಎಂಬೆಲ್ಲ ಎಂಬ ಊಹಾಪೋಹ ಹರಿಡದಾಡುತ್ತಿವೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
    ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಸಾವು ಸಂಭವಿಸಿರಲಿಲ್ಲ. ನಂತರ ಆರಂಭದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಆ ನಂತರ ಎನ್ಐಎಗೂ ತನಿಖೆಯ ಹೊಣೆ ವಹಿಸಲಾಗಿತ್ತು. ಆದಾಗ್ಯೂ, ಶಂಕಿತನನ್ನು ಬಂಧಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.

    Verbattle
    Verbattle
    Verbattle
    m war ಉಗ್ರ ಕಲೆ
    Share. Facebook Twitter Pinterest LinkedIn Tumblr Email WhatsApp
    Previous Articleಚಪ್ಪಲಿಯಲ್ಲಿ ಹೊಡೆದಾಡಿದ ಅಧಿಕಾರಿಗಳು | Bidar
    Next Article ಪ್ರತಾಪ್ ಸಿಂಹ, ಕಟೀಲ್ ಗಿಲ್ಲಾ ಬಿಜೆಪಿ ಟಿಕೆಟ್ | Pratap Simha
    vartha chakra
    • Website

    Related Posts

    ಸಿಎಂ ಸಿದ್ದರಾಮಯ್ಯ ಟ್ವೀಟ್ – ಪ್ರಿಯಾಂಕ್ ಖರ್ಗೆ ಏನಂದ್ರು ಗೊತ್ತಾ..?

    February 21, 2026

    ನಿರ್ಣಾಯಕ ಘಟ್ಟ ತಲುಪಿದ ನಾಯಕತ್ವ ಬಿಕ್ಕಟ್ಟು

    February 21, 2026

    ಕಮೀಷನ್ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಬಿಜೆಪಿ ಶಾಸಕ

    February 21, 2026

    2 Comments

    1. Tlprzi on February 13, 2026 2:05 pm

      betmgm РњРђ mgm betting site betmgm TN

      Reply
    2. Ekfnwb on February 20, 2026 9:04 am

      Harness the excitement of craps and sic bo in one place. In crowns coin casino, multi-language games cater to everyone. Roll the dice and claim victory!

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿಎಂ ಸಿದ್ದರಾಮಯ್ಯ ಟ್ವೀಟ್ – ಪ್ರಿಯಾಂಕ್ ಖರ್ಗೆ ಏನಂದ್ರು ಗೊತ್ತಾ..?

    ನಿರ್ಣಾಯಕ ಘಟ್ಟ ತಲುಪಿದ ನಾಯಕತ್ವ ಬಿಕ್ಕಟ್ಟು

    ಕಮೀಷನ್ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಬಿಜೆಪಿ ಶಾಸಕ

    ದ್ವೇಷ ಬಿತ್ತುವ ಸಿನಿಮಾ ನಮಗೆ ಬೇಡ: ‘ದಿ ಕೇರಳ ಸ್ಟೋರಿ-2’ ಬಹಿಷ್ಕರಿಸಲು ಕೇರಳ ಮುಖ್ಯಮಂತ್ರಿ ಖಡಕ್ ಸೂಚನೆ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Neiroset dlya ychebi_pgsl on CET ವೇಳಾಪಟ್ಟಿ ಪ್ರಕಟ
    • Samanthaaxows on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • https://скв-кассы.рф on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    Latest Kannada News

    ಸಿಎಂ ಸಿದ್ದರಾಮಯ್ಯ ಟ್ವೀಟ್ – ಪ್ರಿಯಾಂಕ್ ಖರ್ಗೆ ಏನಂದ್ರು ಗೊತ್ತಾ..?

    February 21, 2026

    ನಿರ್ಣಾಯಕ ಘಟ್ಟ ತಲುಪಿದ ನಾಯಕತ್ವ ಬಿಕ್ಕಟ್ಟು

    February 21, 2026

    ಕಮೀಷನ್ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಬಿಜೆಪಿ ಶಾಸಕ

    February 21, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.