ಒಡಿಶಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಹಂತದ ‘ಭಾರತ ಜೋಡೊ ನ್ಯಾಯ ಯಾತ್ರೆ’ (Nyay Yatra) ದೇಶದಾದ್ಯಂತ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ.
ಲೋಕಸಭೆ Electionಗೆ ಮುನ್ನ ನಡೆಯುತ್ತಿರುವ ದೊಡ್ಡ ರಾಜಕೀಯ ಸಮರ ಕಾಂಗ್ರೆಸ್ ಪಕ್ಷದ ಪಾಲಿಗೆ ಸಂಜೀವಿನಿ ಆಗಲಿದೆ ಎಂದು ಎಲ್ಲಾ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದರು.
ಅದರಂತೆ ಬಿಹಾರ ಪಶ್ಚಿಮ ಬಂಗಾಳ ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ ಅನೇಕ ಕಡೆ ಈ ನ್ಯಾಯಯಾತ್ರೆ ಜನರ ಗಮನ ಸೆಳೆಯುವಲ್ಲಿ ವಿಫಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಎಂದೇ ಬಿಂಬಿಸಲಾಗುತ್ತಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರ ಈ ಯಾತ್ರೆಗೆ ಪ್ರಮುಖವಾಗಿ ಒಡಿಶಾದಲ್ಲಿ ದೊರಕಿರುವ ಜನಬೆಂಬಲ ಕಾಂಗ್ರೆಸ್ ನಾಯಕರನ್ನು ಮಾತ್ರವಲ್ಲ ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದೆ.
ರಾಹುಲ್ ಗಾಂಧಿ ಅವರ ಈ ಯಾತ್ರೆ ಒಡಿಶಾದಲ್ಲಿ ಸಾಗುವ ಕುರಿತಾಗಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ರಾಹುಲ್ ಗಾಂಧಿ ಅವರ ನ್ಯಾಯಾತ್ರೆಯ ವಾಹನ ಅದರ ಹಿಂಬದಿ ಮತ್ತು ಮುಂಬದಿಯಲ್ಲಿ ಭದ್ರತಾ ವಾಹನಗಳು ಬೆರಳೆಣಿಕೆಯಷ್ಟು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯನ್ನು ಹಿಂಬಾಲಿಸುವ ಒಂದೆರಡು ಬೈಕುಗಳನ್ನು ಹೊರತುಪಡಿಸಿದರೆ ಈ ಯಾತ್ರೆಗೆ ಯಾವುದೇ ರೀತಿಯ ಜನರು ಪ್ರತಿಕ್ರಿಯೆ ನೀಡಿಲ್ಲ.
ತಮ್ಮ ವಾಹನದಲ್ಲಿ ಸಾಗುತ್ತಿರುವ ವೇಳೆ ರಾಹುಲ್ ಗಾಂಧಿ ರಸ್ತೆಯ ಪಕ್ಕದಲ್ಲಿ ನಿಂತಿರುವ ಜನರತ್ತ ಕೈಬೀಸಿದರೂ ಕೂಡ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ಕುಟುಂಬಕ್ಕೆ ಸೇರಿದ ಯುವ ನಾಯಕ ಎಂದು ಬಿಂಬಿಸಲಾಗಿರುವ ರಾಹುಲ್ ಗಾಂಧಿ ಅವರಿಗೆ ಗುಡ್ಡಗಾಡು ಪ್ರಾಬಲ್ಯದ ರಾಜ್ಯದಲ್ಲಿ ಇಂತಹ ನೀರಸ ಪ್ರತಿಕ್ರಿಯೆ ಸಿಕ್ಕಿರುವುದು ಚಿಂತೆಗೀಡು ಮಾಡಿದೆ.