ಬೆಂಗಳೂರು, ಫೆ.22- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಗಡ್ಡ ಬಿಟ್ಟಿರುವ ವಿಷಯ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಅವರು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ನಮ್ಮ ನಾಯಕರು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಸುತ್ತಿ ಗ್ಯಾರಂಟಿ ಕಾರ್ಡ್ ನೀಡಿ ಸೂರ್ಯ ಚಂದ್ರ ಇರುವಷ್ಟೇ ಖಚಿತವಾಗಿ ಅವುಗಳನ್ನು ಜಾರಿಗೊಳಿಸುವುದಾಗಿ ಹೇಳಿ ಜನತೆ ಮನಗೆದಿದ್ದರು.
ಮತದಾರರ ಒಲವು ಗಳಿಸಿದ ಬಳಿಕ ತಿಂಗಳಿಗೊಂದರಂತೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದೆಲ್ಲಾ ಸರಿ ಇದೆ. ಡಿ.ಕೆ.ಶಿವಕುಮಾರ್ ಅವರ ಸಾಮಾರ್ಥ್ಯ ವನ್ನು ಯಾರೂ ಪ್ರಶ್ನಿಸುವಂತಿಲ್ಲ ಆದರೆ ಡಿ ಕೆ ಶಿವಕುಮಾರ್ ಗಡ್ಡ ಬಿಟ್ಟಿರುವುದು ಏಕೆ ಎನ್ನುವುದು ನಮ್ಮ ಪ್ರಶ್ನೆ,ಅದು ಅವರ ವಯಕ್ತಿಕವಾದರೂ ರಾಜ್ಯದಲ್ಲಿ ಡಿಕೆ ಗಡ್ಡ ಬಿಟ್ಟಿರುವ ವಿಷಯ ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವಿವರ ಬೇಕು ಎಂದರು.
ಅವರ ಗಡ್ಡದ ಬಗ್ಗೆ ಒಂದೊಂದು ರೀತಿಯ ವ್ಯಾಖ್ಯಾನ ಕೇಳಿ ಬರುತ್ತಿದೆ ಗಡ್ಡ ಬಿಟ್ಟಿರುವ ಅವರ ಉದ್ದೇಶ ವಾದರೂ ಎನು ಅದು ಈಡೇರುತ್ತದೆಯೇ ಇಲ್ಲವೇ ಹೀಗೆ ಗಡ್ಡ ಬಿಟ್ಟಿರುತ್ತಾರೆಯೇ ನನಗೆ ಮಾತ್ರವಲ್ಲ ರಾಜ್ಯದ ಜನತೆಯಲ್ಲೂ ಕುತೂಹಲ ಮೂಡಿಸಿದೆ ಎಂದು ಪ್ರಶ್ನಿಸಿದರು ಈ ವೇಳೆ ಎದ್ದು ನಿಂತ ಪ್ರತಿಪಕ್ಷ ದ ಮುಖ್ಯ ಸಚೇತಕ ಎನ್.ರವಿಕುಮಾರ್ ಡಿಸಿಎಂ ಅವರು ಏಕೆ ಗಡ್ಡ ಬಿಟ್ಟಿದ್ದಾರೆ ಎನ್ನುವುದು ನನಗೆ ಗೊತ್ತು ಅವರು ರಾಜ್ಯದ ಮುಖ್ಯಮಂತ್ರಿಯಾಗುವರರೆಗೆ ಗಡ್ಡ ಬಿಟ್ಟಿರುತ್ತಾರೆ,ಅಂತಹ ದಿನಗಳು ಬೇಗ ಬರಲಿ ಅವರ ಗಡ್ಡಕ್ಕೆ ಮುಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದರು.
ಮೋದಿ ಅವರು ಪ್ರಧಾನಿಯಾಗುವವರೆಗೆ ಗಡ್ಡ ಬಿಟ್ಟಿದ್ದರೇ ಅದು ಯಾವಾಗ ತೆಗೆಯುತ್ತಾರೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನ ಉಮಾಶ್ರೀ ಡಿಕೆ ಅವರ ಗಡ್ಡದ ವಿಷಯ ನಿಮಗ್ಯಾಗೆ ಎಂದಾಗ ಸಲೀಂ ಅಹಮದ್ ಕೂಡ ಗಡ್ಡದ ವಿಷಯ ಬಿಟ್ಟು ರಾಜ್ಯದ ಜನರ ವಿಷಯ ಚರ್ಚೆ ನಡೆಸಿ ಎಂದು ಸಲಹೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಉಮಾಶ್ರೀ ನಿಮಗ್ಯಾಗೆ ಗಡ್ಡದ ಚಿಂತೆ ಎಂದಾಗ ಡಿಕೆ ನಸು ನಗುತ್ತಲೇ ಸುಮ್ಮನಾಗಿದ್ದು ವಿಷಯಕ್ಕೆ ತೆರೆಬಿತ್ತು.