ಬೆಳಗಾವಿ : ಸ್ಪೀಕರ್ ಹುದ್ದೆ ಯ ಗೌರವ ದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಕ್ಷಮೆ ಕೇಳುವಂತಹ ಮಾತು ಆಡಿಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ – ಜೆಡಿಎಸ್ ಧರಣಿ ಕುರಿತು ಸುದ್ಧಿಗಾರರ ಜತೆ ಮಾತಾನಾಡಿದ ಅವರು, ನಾನು ರಾಜೀನಾಮೆ ಕೊಡುವ ಪ್ರೆಶ್ನೆಯೇ ಇಲ್ಲ, ಕ್ಷಮೆ ಕೇಳುವುದೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಬಿಜೆಪಿಯವರಿಗೆ ಬೇರೆ ವಿಷಯ ಇಲ್ಲ. ಸದನ ಆರಂಭ ಗೊಂಡು ವಾರದ ನಂತರ ಈಗ ಏಕಾಏಕಿ ಪ್ರಸ್ತಾಪ ಮಾಡಿದ್ದಾರೆ. ನಿಯಮಾ ವಳಿ ಪ್ರಕಾರ ನೋಟಿಸ್ ನೀಡಿ ದರೆ ನಾವು ಚರ್ಚೆಗೆ ಸಿದ್ದ. ಆದರೆ ಅವರಿಗೆ ಚರ್ಚೆ ಬೇಕಿಲ್ಲ, ವಿವಾದ ಬೇಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿರು.
ನಾನು ಸ್ಪೀಕರ್ ಪೀಠಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ಸೇರಿ ನಮಸ್ಕರಿಸಿ ಗೌರವ ನೀಡುತ್ತೇವೆ. ಅಂತಹ ಉನ್ನತ ಹುದ್ದೆ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನೀಡಿದೆ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನು ಎಂದು ಕೇಳಿದರು.