Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಹೋಗಿ ತಗಲ್ಕೊಂಡಾ ಪತ್ನಿ | Bengaluru
    Viral

    ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಹೋಗಿ ತಗಲ್ಕೊಂಡಾ ಪತ್ನಿ | Bengaluru

    vartha chakraBy vartha chakraAugust 25, 20231 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಆ.25 – ನಿರುದ್ಯೋಗಿ ಪತಿಗೆ ಬುದ್ಧಿ ಕಲಿಸಲು ಹೋಗಿ ಮಹಿಳೆಯೊಬ್ಬರು ಪೇಚಿಗೆ ಸಿಲುಕಿರುವ ಅಪರೂಪದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
    ಕಷ್ಟ ಎಂದು ಗೊತ್ತಾದರೆ ಪತಿ ಕೆಲಸಕ್ಕೆ ಹೋಗಬಹುದು ಎಂದು ಮಹಿಳೆ ತನ್ನ ಬಂಗಾರ ಕಳ್ಳತನವಾಗಿದೆ ಎಂದು ನಾಟಕ ಮಾಡಲು ಹೋಗಿ ಮಲ್ಲೇಶ್ವರಂ ಪೊಲೀಸರ ಅತಿಥಿಯಾಗಿದ್ದಾಳೆ.

    ತನ್ನ ಬಳಿಯಿದ್ದ ಚಿನ್ನಾಭರಣಗಳನ್ನ ಸ್ನೇಹಿತನಿಗೆ ಹೇಳಿಸಿ ಕಳುವು ಮಾಡಿಸಿ ನಾಟಕವಾಡಿದ್ದ ಮಹಿಳೆ ಬಳಿಕ ತಾನೇ ಕಳ್ಳತನವಾಗಿದೆ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರ ತನಿಖೆ ವೇಳೆ ಪತಿಗೆ ಬುದ್ಧಿ ಕಲಿಸಲು ಮಹಿಳೆ ಮಾಡಿದ್ದ ಕಳ್ಳಾಟ ಬಟಾಬಯಲಾಗಿದೆ.
    ಬ್ಯಾಂಕ್ ನಿಂದ 109ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಸ್ಕೂಟರ್ ಡಿಕ್ಕಿಲ್ಲಿಟ್ಟುಕೊಂಡು ಬಂದಿದ್ದ ಮಹಿಳೆ, ಮಕ್ಕಳನ್ನು ಶಾಲೆಯಿಂದ ಟ್ಯೂಷನ್​ಗೆ ಬಿಟ್ಟಿದ್ದಳು. ಅದಾದ ಬಳಿಕ ಅತ್ತಿಗೆ ಮನೆಗೆ ತೆರಳಿದ್ದಳು.
    ನಂತರ ಮತ್ತದೇ ಮಲ್ಲೇಶ್ವರಂನ 13ನೇ ಕ್ರಾಸ್ ನಲ್ಲಿರುವ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ಸ್ಕೂಟರ್ ನ ಫುಟ್ ಮ್ಯಾಟ್ ಬಳಿ ಗಾಡಿ ಕಿ ಇಟ್ಟು ತನ್ನ ಗೆಳೆಯ ಧನಂಜಯ್ ನಿಗೆ ಕೆರೆ ಮಾಡಿದ್ದಳು. ಆಕೆಯೇ ಲೊಕೇಷನ್ ಕಳಿಸಿ ಕಳ್ಳತನ ಮಾಡಲು ಹೇಳಿದ್ದಳು. ಬಳಿಕ ಆಕೆ ಹೇಳಿದಂತೆ ಮತ್ತೋರ್ವ ರಾಕೇಶ್ ಎಂಬಾತನ ಜೊತೆ ಬಂದು ಸ್ಕೂಟರ್ ಸಮೇತ ಚಿನ್ನ ತೆಗೆದುಕೊಂಡು ಹೊಗಿದ್ದ.

    ಬಳಿಕ ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ತೆರಳಿ, ಸ್ಕೂಟರ್​ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದು, ವಾಕಿಂಗ್ ಮಾಡಿ ಬಂದು ನೋಡಿದಾಗ ಸ್ಕೂಟರ್ ಇರಲಿಲ್ಲ ಎಂದಿದ್ದಾಳೆ. ನಂತರ ಕಾರ್ಯಪ್ರವೃತರಾದ ಪೊಲೀಸರು, ಸಿಸಿಟಿವಿ ಪರಿಶೀಲಿಸಿ ಧನಂಜಯ್ ಹಾಗೂ ರಾಕೇಶ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ದೂರುದಾರ ಮಹಿಳೆ ಹೇಳಿದಂತೆ ಆರೋಪಿಗಳು ಕೆಲಸ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರೊಂದಿಗೆ ಮಹಿಳೆಯೆ ನೌಟಂಕಿ ಆಟ ಬಟಾಬಯಲಾಗಿದೆ.
    ಬಳಿಕ ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ದೂರುದಾರೆ ಜೊತೆ ಮಹಿಳೆ ಚಾಟಿಂಗ್ ಮಾಡಿರುವುದು ಬಯಲಿಗೆ ಬಂದಿದೆ. ಸದ್ಯ ಮಹಿಳೆಯನ್ನು ಸಹ ಪೊಲೀಸರು ಬಂಧಿಸಿ 109ಗ್ರಾಂ ಚಿನ್ನ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

    ಗಂಡ ಕೆಲಸಕ್ಕೆ ಹೋಗಲ್ಲ. ಮನೆಯಲ್ಲಿರುವುದೆಲ್ಲಾ ಕಳ್ಳತನ ಆಯ್ತು ಎಂದು ಕಷ್ಟ ಶುರುವಾದರೆ, ಬೀದಿಗೆ ಬರುತ್ತೇವೆ. ಆಗ ಪತಿ ಕೆಲಸಕ್ಕೆ ಹೋಗುತ್ತಾನೆ ಎಂದು ಮಹಿಳೆ ಸಂಚು​ ಮಾಡಿ ಕೃತ್ಯ ನಡೆಸಿರುವುದು ಪತ್ತೆಯಾಗಿದೆ.
    ಗಂಡ ಕೆಲಸಕ್ಕೆ ಹೋಗದೇ ಊಟ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದ. ಇದರಿಂದ ಬೇಸರಗೊಂಡು ಕೆಲಸಕ್ಕೆ ಹೋಗಿ ಹೋಗಿ ಎಂದು ಎಷ್ಟು ಹೇಳಿದರೂ ಪತಿ ಮಾತ್ರ ಊಟ ಮಾಡಿಕೊಂಡು ಆರಾಮಾಗಿ ಮನೆಯಲ್ಲಿರುತ್ತಿದ್ದ. ಇದರಿಂದ ರೋಸಿ ಹೊದ ಮಹಿಳೆ ಕೊನೆಗೆ ತನ್ನ ಪತಿಗೆ ಕಷ್ಟ ಅರಿವು ಆದ ಬಳಿಕವಾದರೂ ಕೆಲಸಕ್ಕೆ ಹೋಗಬಹುದು ಎಂದು ತನ್ನ ಚಿನ್ನಾಭರಣಗಳು ಕಳತನ ನಾಟಕ ಮಾಡಿದ್ದಾಳೆ.
    ಆದರೆ ಮಹಿಳೆಯ ನಾಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಪೊಲೀಸರಿಗೆ ಮಹಿಳೆಯ ಸಮಸ್ಯೆ ಏನು ಗೊತ್ತಿರುತ್ತೆ ಅಲ್ವೇ, ಮಹಿಳೆ ದೂರು ಕೊಟ್ಟಿದ್ದಳು ಅದರಂತೆ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

    Verbattle
    Verbattle
    Verbattle
    Bangalore Bengaluru News ಕಳ್ಳತನ ಚಿನ್ನ ಡಿಕ್ಕಿ ಬೈಕ್ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous ArticleISRO ವಿಜ್ಞಾನಿಗಳಿಗೆ ವಿಧಾನಸೌಧದಲ್ಲಿ ಸತ್ಕಾರ | S Somanath
    Next Article ಇಸ್ರೋ ಸಾಧನೆಗೆ ಪ್ರಧಾನಿ ಮೋದಿ ರೋಡ್ ಶೋ | Modi
    vartha chakra
    • Website

    Related Posts

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಸತ್ತವಳು ಎದ್ದು ಬಂದಾಗ!

    February 15, 2026

    1 Comment

    1. Kzmjsx on February 13, 2026 2:42 pm

      mgm sportsbook mgm online betting betmgm VA

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Uaxksc on ಚುನಾವಣೆ ಮೇಲೆ CM ಕಣ್ಣು – ಬಜೆಟ್ ನಲ್ಲಿ ಎಲ್ಲರಿಗೂ ಬೆಣ್ಣೆ ಸಾಧ್ಯತೆ
    • Tracymix on ನೇಮಕಾತಿ, ಭಡ್ತಿ ಗೆ ಇದ್ದ ಆತಂಕ ದೂರ !
    • 777bet_yeen on Terror ಅಂದವನು ಅಂದರ್
    Latest Kannada News

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.