ಕರ್ನಾಟಕದಲ್ಲಿ ಈಗ ಮೋದಿ (Modi) ಮೇನಿಯಾ. ರೋಡ್ ಷೋ ಮೂಲಕ ಊರೂರಲ್ಲೂ ಹವಾ ಸೃಷ್ಟಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ! ಜನ ಮೋದಿ ಮೋದಿ ಅಂತ ಹುಯಿಲೆಬ್ಬಿಸುವುದು, ಹೂ ಎರಚುವುದು ನೋಡಲು ಕಣ್ಣಿಗೆ ಹಬ್ಬ. ಕೆಲ ಅಭಿಮಾನಿ ಮಹಿಳೆಯರಂತೂ ಕೃಷ್ಣ ಗೋಕುಲದಿಂದ ಮಥುರೆಗೆ ಬಂದಾಗ ಪ್ರಜೆಗಳು ಹೇಗೆ ಸ್ವಾಗತಿಸಿದ್ದರು ಎಂಬ ಕಥೆ ಕೇಳಿದ್ದೆವೋ ಈಗ ಹಾಗೆ ಅನ್ನಿಸುತ್ತಿದೆ ಎಂದು ಅತಿಭಾವುಕರಾಗಿದ್ದಾರೆ.
Election ಎನ್ನುವುದು ನೆಪಮಾತ್ರ; ಬಿಜೆಪಿಗೇ ಅಧಿಕಾರ ಎಂಬಂತಿದೆ ಸಧ್ಯದ ಪರಿಸ್ಥಿತಿ.
ಈ ಅಬ್ಬರದ ಅಲೆಯ ಒಳಗೊಳಗೆ ಮತದಾರನ ಮನಸ್ಸಿನಲ್ಲಿ ಏನಿರಬಹುದು ಎಂಬುದು ಸಧ್ಯಕ್ಕೆ ಇನ್ನೂ ಗುಟ್ಟು. ಈ ರೀತಿಯ ರೋಡ್ ಷೋಗಳು ಮತದಾರರ ಒಳಮನಸ್ಸಿಗೆ ಮುಟ್ಟಬಹುದು; ಮುಟ್ಟದೆಯೂ ಇರಬಹುದು. ಜೆಡಿಎಸ್ ಪರ ಒಲವುಳ್ಳ ಮತದಾರರೂ ಈ ಪಾದಯಾತ್ರೆ ಕಣ್ತುಂಬಿಕೊಂಡು ಎಂಜಾಯ್ ಮಾಡಿರಬಹುದು. ಮುಸ್ಲಿಂ ಮತದಾರು ವಿರಳ ಸಂಖ್ಯೆಯಲ್ಲಾದರೂ ಮೋದಿ ನೋಡಲು ಕಾದಿದ್ದಿರಬಹುದು. ಕಾಂಗ್ರೆಸ್ ಕೈ ಬಿಡದ ಮತದಾರರೂ ಹಲವು ಸಂಖ್ಯೆಯಲ್ಲಿ ರಸ್ತೆ ಬದಿ ಜಮಾಯಿಸಿದ್ದಿರಬಹುದು. ಏಕತಾನತೆಯ ಜೀವನದಲ್ಲಿ ಜನರಿಗೆ ಈ ರೀತಿಯ ಮೆರವಣಿಗೆಗಳು ಮನರಂಜನೆ ನೀಡಬಹುದು. ತಾನೂ ಮೋದಿಯನ್ನು ನೋಡಿದೆ; ಫೊಟೊ ತೆಗೆದೆ ಎಂದು ಹೇಳಿಕೊಳ್ಳಲು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು, (Modi) ಹೆಗ್ಗಳಿಕೆಪಡಲು ಸೀಮಿತವಾಗಬಹುದು. ಇದರರ್ಥ ಮೋದಿ ರೋಡ್ ಷೋ ನಿರರ್ಥಕ ಎಂದಲ್ಲ. ೧೦೦% ಮತಪರಿವರ್ತನೆ ಅಸಾಧ್ಯ ಎಂಬುದಷ್ಟೇ ಇಂಗಿತ.
ಹಾಗೆ ನೋಡಿದರೆ ರಾಹುಲ್ ಗಾಂಧಿ ಪಾದಯಾತ್ರೆಗೂ ಜನಸ್ಪಂದನೆ ಚೆನ್ನಾಗಿಯೇ ಇತ್ತು. ಯುವತಿಯರು ವಿಶೇಷವಾಗಿ ಸೆಲ್ಫೀಗೆ ಮುಗಿಬಿದ್ದಿದ್ದರು. ಅವರೆಲ್ಲ ಕಾಂಗ್ರೆಸ್ ಗೆ ವೋಟು ಹಾಕುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. (Modi)
Also read.