ವರುಣ್ ಗಾಂಧಿಯವರ (Varun Gandhi) ಜಾಗಕ್ಕೆ ಜಿತಿನ್ ಪ್ರಸಾದ್ ಅವರನ್ನು ತಂದಿಟ್ಟು ವರುಣ್ ಗಾಂಧಿ ಬಿಜೆಪಿ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎನ್ನುವ ಸಂದೇಶವನ್ನು ಮತದಾರರಿಗೆ ಕೇಸರಿ ಪಕ್ಷ ಕೊಟ್ಟಂತಿದೆ. 1996 ರಿಂದ ಒಂದೋ ವರುಣ್ ಗಾಂಧಿ ಇಲ್ಲವೆ ಅವರ ತಾಯಿ ಮನೇಕಾ ಗಾಂಧಿ ಗೆಲ್ಲುತ್ತಾ ಬಂದಿರುವ ಪಿಲಿಭಿಟ್ ಕ್ಷೇತ್ರದಲ್ಲಿ ಈ ಬಾರಿ ಉತ್ತರ ಪ್ರದೇಶದ ಹಾಲಿ ಮಂತ್ರಿ ಜಿತಿನ್ ಪ್ರಸಾದ್ ಸ್ಪರ್ಧಿಸುತ್ತಿದ್ದಾರೆ. ಅನೇಕ ಬಾರಿ ತಾಯಿ ಮಗ ಇಬ್ಬರೂ ಬಿಜೆಪಿಯನ್ನು ಟೀಕಿಸಿ ಪಕ್ಷವನ್ನು ಮುಜುಗರಕ್ಕೆ ಒಳಪಡಿಸಿದ್ದು ಹೊಸ ಸುದ್ದಿಯೇನಲ್ಲ. ಬಿಜೆಪಿ ಸೇರಿದಾಗಿನಿಂದ ಮನೇಕಾ ಮತ್ತು ಅವರ ಮಗನಿಗೆ ಬೇರೆ ಬೇರೆ ರೀತಿಯಲ್ಲಿ ಗೌರವಗಳು ಲಭಿಸುತ್ತಲೇ ಬಂದಿವೆ. ಮನೇಕಾ ಗಾಂಧಿ ಕೇಂದ್ರದಲ್ಲಿ NDA ಆಡಳಿತದಲ್ಲಿ ಪ್ರಮುಖ ಖಾತೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ನರೇಂದ್ರ ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವ ಮೊದಲೇ ಬಿಜೆಪಿ ವರುಣ್ ಗಾಂಧಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಪಶ್ಚಿಮ ಬಂಗಾಳದ ಜವಾಬ್ದಾರಿಯನ್ನು ನೀಡಿತ್ತು. ವರುಣ್ ಗಾಂಧಿ ಪಕ್ಷ ಸಂಘಟನೆಯ ವಿಚಾರದಲ್ಲಿ ಎಂದಿಗೂ ಆಸಕ್ತಿ ತೋರಿಸಲಿಲ್ಲ ಎನ್ನುವ ಆಪಾದನೆ ಯಾವಾಗಲೂ ಇತ್ತು.
ಆರಂಭದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಿಜೆಪಿಯಲ್ಲಿ ಸ್ಥಾನ ಭದ್ರ ಮಾಡಿಕೊಂಡ ವರುಣ್ ಆ ನಂತರ 2016 ರ ಹೊತ್ತಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಕನಸನ್ನು ಕಾಣತೊಡಗಿದರು. 2017 ರ ಉತ್ತರ ಪ್ರದೇಶ ರಾಜ್ಯದ Electionಯ ಹೊತ್ತಿಗೆ ಬಿಜೆಪಿ ವರುಣ್ ಗಾಂಧಿಗೆ ಬರಿ ಅವರ ಆಗಿನ ಕ್ಷೇತ್ರ ಸುಲ್ತಾನ್ ಪುರಕ್ಕೆ ಮಾತ್ರ ತಮ್ಮ ರಾಜಕೀಯ ಚಟುವಟಿಕೆಗಳನ್ನು ಸೀಮಿತಗೊಳಿಸಲು ನಿರ್ದೇಶಿಸಿತ್ತು. ಅದೇ ವರ್ಷ ವರುಣ್ ಗಾಂಧಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಬಡವರಿಗೆ ಮನೆ ನಿರ್ಮಿಸಿ ತಮ್ಮ ಸಾಮಾಜಿಕ ಬದ್ಧತೆಯನ್ನು ತೋರಿದ್ದು ಗಮನಾರ್ಹ.
ಅನೇಕ ವಿಚಾರಗಳಲ್ಲಿ ಬಿಜೆಪಿಯನ್ನು ಟೀಕಿಸಲು ಹಿಂದೇಟು ಹಾಕದ ವರುಣ್ ಕೋವಿಡ್ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಬಹಳಷ್ಟು ಟೀಕೆ ಮಾಡಿದ್ದು ಉಲ್ಲೇಖನೀಯ. ಹಾಗೇ ಲಖಿಮ್ ಪುರ್ ಖೇರಿಯಲ್ಲಿ ನಡೆದ ಬಿಜೆಪಿ ಯುವ ನಾಯಕನ ಉದ್ಧಟ ವರ್ತನೆ ಮತ್ತು ಯೋಗಿ ಆದಿತ್ಯನಾಥ್ ಅವರ ಕೆಲವು ನಿರ್ಧಾರಗಳ ಬಗ್ಗೆ ಟೀಕೆ ಹೀಗೆ ಅನೇಕ ವಿಚಾರಗಳಲ್ಲಿ ವರುಣ್ ಗಾಂಧಿ ಬಿಜೆಪಿ ನಾಯಕರನ್ನು ಆತಂಕಗೊಳಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಯಾದ ವಿಷಯ.
2019 ರಲ್ಲಿ ಮತ್ತೊಮ್ಮೆ ಟಿಕೆಟ್ ದಕ್ಕಿಸಿಕೊಂಡು ಗೆದ್ದರೂ ಮತ್ತು ಇತ್ತೀಚೆಗೆ ನರೇಂದ್ರ ಮೋದಿಯವರನ್ನು ಪುಂಖಾನುಪುಂಖವಾಗಿ ಹೊಗಳಲು ಶುರು ಮಾಡಿದರೂ ಈಗ ಬಿಜೆಪಿ ಹೈ ಕಮಾಂಡ್ ವರುಣ್ ಗೆ ಕಿಕೆಟ್~ ಕೊಡದಿರಲು ನಿರ್ಧರಿಸಿರುವುದು ವರುಣ್ ಗಾಂಧಿಯವರ ಭವಿಷ್ಯದ ಬಗ್ಗೆ ಬಹಳ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ. ಅನೇಕ ರಾಜಕೀಯ ವಿಶ್ಲೇಷಕರ ಪ್ರಕಾರ ಸಧ್ಯಕ್ಕೆ ವರುಣ್ ಗಾಂಧಿಯವರ ರಾಜಕೀಯ ಭವಿಷ್ಯದ ಸೂರ್ಯ ಅಸ್ತಂಗತವಾದಂತೆಯೇ ಕಂಡುಬರುತ್ತಿದೆ.
1 Comment
курс юань к тенге курс юань к тенге .