ಬೆಂಗಳೂರು,ಜೂ.25- ಮಹಿಳಾ ಪಿಜಿಗಳಲ್ಲಿ ವಾಸವಿರುವ ಯುವತಿಯರು ಸ್ನಾನಗೃಹದಲ್ಲಿರುವ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾಮುಕ ಯುವಕನನ್ನು ಮಹಾದೇವಪುರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕನಾಗಿದ್ದಾನೆ.ಮಹದೇವಪುರದ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸವಿದ್ದ ಆರೋಪಿ, ಖಾಸಗಿ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ತಾನು ವಾಸಿಸುತ್ತಿದ್ದ ಪಿಜಿ ಮುಂಭಾಗದಲ್ಲೇ ಮಹಿಳಾ ಪಿಜಿ ಸಹ ಇದೆ. ಮಹಿಳಾ ಪಿಜಿಯ ಸ್ನಾನಗೃಹಕ್ಕೆ ಯಾರಾದರೂ ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ ಆರೋಪಿಯು, ಸ್ನಾನಗೃಹದ ವೆಂಟಿಲೇಷನ್ ಸ್ಥಳದಿಂದ ಯುವತಿಯರನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ.
ಜೂನ್ 21ರಂದು ಇದೇ ರೀತಿ ಸ್ನಾನಗೃಹದ ವಿಡಿಯೋ ಮಾಡುತ್ತಿದ್ದಾಗ ಸ್ಥಳಿಯರೇ ಹಿಡಿದು ಮಹದೇವಪುರ ಠಾಣಾ ಪೊಲೀಸರ ಕೈಗೊಪ್ಪಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಯುವತಿಯರ ಸ್ನಾನಗೃಹದ ಒಟ್ಟು 7 ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಕಳೆದ ಮೂರು ನಾಲ್ಕು ತಿಂಗಳಿಂದ ಆರೋಪಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ.
ವಿಡಿಯೋ ಮಾಡಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಲೇಡಿಸ್ ಪಿಜಿಯಲ್ಲಿರುವವರನ್ನು ವಿಚಾರಿಸುತ್ತೇವೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.
4 ತಿಂಗಳಿಂದ ದುಷ್ಕೃತ್ಯ:
ಕಳೆದ ಮೂರು ನಾಲ್ಕು ತಿಂಗಳಿಂದ ಆರೋಪಿಯು ಈ ಲೇಡಿಸ್ ಪಿಜಿಯ ಸ್ನಾನಗೃಹದ ವಿಡಿಯೋಗಳನ್ನು ಮಾಡಿರುವುದು ಕಂಡುಬರುತ್ತಿದೆ. ಸದ್ಯ ಆರೋಪಿಯ ಮೊಬೈಲ್ನಲ್ಲಿ ಒಟ್ಟು 7 ವಿಡಿಯೋಗಳಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ.
Previous Articleಪುಟಿನ್ ಗೆ ಸವಾಲೆಸೆದ ವಾಗ್ನರ್ ಮುಖ್ಯಸ್ಥ
Next Article ಪ್ರಿಯಕರನ ಅಪಹರಿಸಿದ ಪ್ರಿಯತಮೆ