Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Yediyurappa ಇನ್ನು ಮುಂದೆ ವಿಧಾನಸಭೆಗೆ ಬರೋಲ್ಲಾ!
    ರಾಜ್ಯ

    Yediyurappa ಇನ್ನು ಮುಂದೆ ವಿಧಾನಸಭೆಗೆ ಬರೋಲ್ಲಾ!

    vartha chakraBy vartha chakraFebruary 22, 202328 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಫೆ. 22-
    ‘ಶಾಸಕನಾಗಿ ಇದು ತಮ್ಮ ಕೊನೆಯ ಅಧಿವೇಶನ. ಇನ್ನು ಮುಂದೆ ಶಾಸಕನಾಗಿ ವಿಧಾನಸಭೆ ಪ್ರವೇಶಿಸುವುದಿಲ್ಲ’ ಎಂದು BJP ಹಿರಿಯ ನಾಯಕ ಯಡಿಯೂರಪ್ಪ (BS Yediyurappa) ಘೋಷಿಸಿದ್ದಾರೆ. ‘ಮುಂಬರುವ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ನಾನು ಮತ್ತೆ ಈ ಸದನಕ್ಕೆ ಬರುವುದಿಲ್ಲ. ಆದರೆ ರಾಜ್ಯಾದ್ಯಂತ ಪ್ರವಾಸ ಮಾಡಿ BJP ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದು ಹೇಳಿದರು.

    ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಮತ್ತೆ ಈ ಸದನಕ್ಕೆ ಬರುವುದಿಲ್ಲ. ಈಗಾಗಲೇ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ’ ಎಂದು ಹೇಳುವಾಗ ಗದ್ಗದಿತರಾಗಿ ಭಾವುಕರಾದರು. ನಂತರ ಮಾತು ಮುಂದುವರೆಸಿದ ಅವರು, ‘ವರಿಷ್ಠರು ನನ್ನನ್ನು ಎಂದೂ ಕಡೆಗಣಿಸಿಲ್ಲ. ಯಡಿಯೂರಪ್ಪನಿಗೆ ಎಲ್ಲ ಗೌರವ ಸ್ಥಾನಮಾನ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಪಕ್ಷ ಅವಕಾಶ ಕೊಟ್ಟಿದ್ದಕ್ಕೆ ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾದೆ. ಪಕ್ಷ ನನಗೆ ಕೊಟ್ಟ ಅವಕಾಶ ಯಾರಿಗೂ ಕೊಟ್ಟಿಲ್ಲ’ ಎಂದು ಹೇಳಿದರು.

    ‘ಚುನಾವಣೆಗೆ ನಿಲ್ಲಲ್ಲ ಎಂದಾಕ್ಷಣ ಯಡಿಯೂರಪ್ಪ ಸುಮ್ಮನೆ ಕೂರಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ನಾವು ಮತ್ತೆ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ’ ಎಂದರು. ರಾಜ್ಯದಲ್ಲಿ BJP ಗಾಳಿ ಬೀಸುವುದನ್ನು ಆ ಕಡೆ ಕೂತಿರುವ ವಿಪಕ್ಷದವರು ನೋಡುತ್ತಾರೆ. Congress ಮತ್ತೆ ವಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಪುನರುಚ್ಚರಿಸಿದರು.

    ಈ ವೇಳೆ ಎದ್ದುನಿಂತ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ (Priyank Kharge), JDS ನ ಶಿವಲಿಂಗೇಗೌಡ (Shivalinge Gowda) ಸೇರಿದಂತೆ ಹಲವು ಸದಸ್ಯರು ನೀವು ಮತ್ತೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಮಾತು ಮುಂದುವರೆಸಿದ ಅವರು ‘ಸಿದ್ದರಾಮಯ್ಯ (Siddaramaiah) ನವರು ಬಾದಾಮಿ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಅಲ್ಲಿಯೇ ಸ್ಪರ್ಧೆ ಮಾಡಬೇಕು. ನೀವು ಗೆದ್ದ ಕ್ಷೇತ್ರದಲ್ಲಿ ನಿಲ್ಲಲ್ಲ ಎಂದರೆ ಜನ ಹೇಗೆ ನಂಬುತ್ತಾರೆ. ನೀವು ಗೆದ್ದ ಕ್ಷೇತ್ರದಲ್ಲಿ ನಿಲ್ಲಿ’ ಎಂದು ಕಿವಿಮಾತು ಹೇಳಿದರು.

    ರಾಜ್ಯದ budget ಎಲ್ಲ ವರ್ಗದ ಜನರನ್ನು ತಲುಪುವ ಬಜೆಟ್ ಆಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡುವ ಪ್ರಯತ್ನಗಳು ಬಜೆಟ್‌ನಲ್ಲಿ ಆಗಿವೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮೋದಿಯವರು ಇದ್ದಿದ್ದಕ್ಕೆ ದೇಶ ಸದೃಢವಾಗಿದೆ. ಮೋದಿ ವಿಶ್ವಗುರು ಆಗಿದ್ದಾರೆ ಎಂದರು. ‘ರಾಜ್ಯದ BJP ಸರ್ಕಾರ ಉತ್ತಮ ಆಡಳಿತ ಕೊಟ್ಟಿದೆ. ನಮ್ಮ ಆಡಳಿತದಲ್ಲಿ ರಾಜ್ಯ ವಿಕಾಸ ಹೊಂದಿದೆ’ ಎಂದು ಪ್ರಶಂಸಿಸಿದರು.

    Verbattle
    Verbattle
    Verbattle
    #BJP #Congress #yediyurappa BJP BS Yediyurappa Congress ED JDS Karnataka m modi narendra modi Politics Priyank Kharge shiva Shivalinge Gowda siddaramaiah ಕಾಂಗ್ರೆಸ್ Election ನರೇಂದ್ರ ಮೋದಿ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous ArticleRohini – Roopa ರಾದ್ಧಾಂತ
    Next Article ಕುಖ್ಯಾತ ದರೋಡೆಕೋರರ ಸಹಚರರ ಬಂಧನ
    vartha chakra
    • Website

    Related Posts

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026

    ಐಜಿಪಿ ರಾಮಚಂದ್ರರಾವ್ ಗೆ ಮತ್ತೊಂದು ಸಂಕಷ್ಟ.

    January 22, 2026

    ಡಿ.ಕೆ. ಸುರೇಶ್ ಚುಚ್ಚುಮಾತು

    January 21, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Daviddek on ಡಿ.ಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಯಾಕೆ ಭೇಟಿ ಮಾಡುತ್ತಿಲ್ಲ ಗೊತ್ತಾ?
    • RicardoCor on ಮುರುಘಾ ಶ್ರೀ ವಿರುದ್ಧ ಮತ್ತೊಂದು ಪ್ರಕರಣ| Murugha Shree
    • Jeffreybluck on ಸೈಫ್ ಅಲಿ ಖಾನ್ ಗೆ ಚಾಕು ಹಾಕಿದ್ದು ಯಾರು ಗೊತ್ತಾ
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.